ಐಪಿಎಲ್ ನ 17ನೇ ಸೀಸನ್ ನಲ್ಲಿ ಬೌಂಡರಿಗಳ ಸುರಿಮಳೆಯಾಗುತ್ತಿದೆ. ಇಲ್ಲಿಯವರೆಗೆ ಸುಮಾರು 10ಕ್ಕೂ ಅಧಿಕ ಆಟಗಾರರು 10ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತೀಯ ಆಟಗಾರ ಮುಂದಿರುವುದು ಇನ್ನೂ ವಿಶೇಷವಾಗಿದೆ.
ಇಲ್ಲಿಯವರೆಗೆ ಅತೀ ಹೆಚ್ಚು ಸಿಕ್ಸರ್ ಸಿಡಿಸಿದವರ ಪೈಕಿ ರಿಯಾನ್ ಪರಾಗ್ ಮುಂಚೂಣಿಯಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ ರಿಯಾಗ್ 5 ಪಂದ್ಯಗಳಲ್ಲಿ 165 ಎಸೆತಗಳನ್ನು ಎದುರಿಸಿ 17 ಸಿಕ್ಸರ್ ಸಿಡಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಹೆನ್ರಿಕ್ ಕ್ಲಾಸೆನ್ 5 ಪಂದ್ಯಗಳಲ್ಲಿ 96 ಎಸೆತ ಎದುರಿಸಿ 17 ಸಿಕ್ಸರ್ ಸಿಡಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ನ ಮತ್ತೊಬ್ಬ ಆಟಗಾರ ಅಭಿಷೇಕ್ ಶರ್ಮಾ 5 ಪಂದ್ಯಗಳಲ್ಲಿ 85 ಎಸೆತಗಳನ್ನು ಎದುರಿಸಿ 15 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್ ನಿಕೋಲಸ್ ಪೂರನ್ 106 ಎಸೆತ ಎದುರಿಸಿ 15 ಸಿಕ್ಸರ್ ಸಿಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಿಸ್ಟಾನ್ ಸ್ಟಬ್ಸ್ 5 ಪಂದ್ಯಗಳಲ್ಲಿ 99 ಎಸೆತ ಎದುರಿಸಿ 15 ಸಿಕ್ಸರ್ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.