ಐಪಿಎಲ್ 2020- ನಾಟಕೀಯ ಕುಸಿತ.. ಕಿಂಗ್ಸ್ ಗೆ ರೋಚಕ ಜಯ.. ಸನ್ ರೈಸರ್ಸ್ ಗೆ ಸೋಲಿನ ಆಘಾತ
ಐಪಿಎಲ್ ಟೂರ್ನಿಯ 43ನೇ ಪಂದ್ಯ..
ಸೋಲಿನ ದವಡೆಗೆ ಸಿಲುಕಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಅಚ್ಚರಿಯ ಜಯ
ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಸೋತು ಹೋದ ಸನ್ ರೈಸರ್ಸ್ ಹೈದ್ರಬಾದ್ ತಂಡ
ನಾಟಕೀಯ ಕುಸಿತ ಕಂಡ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ 12 ರನ್ ಗಳ ಸೋಲು
16 ರನ್ ಗಳ ಅಂತರದಲ್ಲಿ ಆರು ವಿಕೆಟ್ ಕಳೆದುಕೊಂಡ ಡೇವಿಡ್ ವಾರ್ನರ್ ಬಳಗ
ಕ್ರಿಸ್ ಜೋರ್ಡಾನ್ ಮತ್ತು ಆರ್ಶದೀಪ್ ಸಿಂಗ್ ಮಾರಕ ದಾಳಿಗೆ ಕಂಗೆಟ್ಟ ಸನ್ ರೈಸರ್ಸ್
ಇದು ಸನ್ ರೈಸರ್ಸ್ ಹೈದ್ರಬಾದ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಪಂದ್ಯದ ಹೈಲೈಟ್ಸ್.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ನಾಯಕ ಡೇವಿಡ್ ವಾರ್ನರ್ ಗೇಮ್ ಪ್ಲಾನ್ ಗೆ ತಕ್ಕಂತೆ ಸನ್ ರೈಸರ್ಸ್ ಬೌಲರ್ ಗಳು ಬೌಲಿಂಗ್ ಮಾಡಿದ್ದರು.
ಪರಿಣಾಮ ಕಿಂಗ್ಸ್ ಇಲೆವೆನ್ ತಂಡ ಏಳು ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತ್ತು.
ಮಯಾಂಕ್ ಬದಲು ರಾಹುಲ್ ಜೊತೆ ಮನ್‍ದೀಪ್ ಸಿಂಗ್ ಇನಿಂಗ್ಸ್ ಆರಂಭಿಸಿದ್ರು.
ಆದ್ರೆ ಮನ್ ದೀಪ್ ಸಿಂಗ್ 17 ರನ್ ಗೆ ಸೀಮಿತವಾದ್ರೆ, ಕ್ರಿಸ್ ಗೇಲ್ 20 ರನ್ ಗಳಿಸಿದ್ರು.
ಇನ್ನು ಆರಂಭಿಕ ಕೆ.ಎಲ್. ರಾಹುಲ್ (27) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ.
ಗ್ಲೇನ್ ಮ್ಯಾಕ್ಸ್ ವೆಲ್ ಹೋರಾಟ 12 ರನ್ ಗೆ ಅಂತ್ಯಗೊಂಡಿತ್ತು.
ಇನ್ನುಳಿದಂತೆ ದೀಪಕ್ ಹೂಡಾ ಶೂನ್ಯ ಸುತ್ತಿದ್ರೆ, ಕ್ರಿಸ್ ಜೋರ್ಡಾನ್ 7 ರನ್ ಹಾಗೂ ಎಮ್. ಅಶ್ವಿನ್ 4 ರನ್ ಗಳಿಸಿದ್ರು.
ಇನ್ನೊಂದೆಡೆ ನಿಕೊಲಾಸ್ ಪೂರನ್ ಅಜೇಯ 32 ರನ್ ದಾಖಲಿಸಿದ್ರು.
ಸನ್ ರೈಸರ್ಸ್ ತಂಡದ ಪರ ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್ ಮತ್ತು ರಶೀದ್ ಖಾನ್ ತಲಾ ಎರಡು ವಿಕೆಟ್ ಉರುಳಿಸಿದ್ರು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ಸನ್ ರೈಸರ್ಸ್ ತಂಡ ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು.
6.2 ಓವರ್ ಗಳಲ್ಲಿ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ ಸ್ಟೋ ಮೊದಲ ವಿಕೆಟ್ ಗೆ 56 ರನ್ ಗಳಿಸಿದ್ರು.
ಈ ಹಂತದಲ್ಲಿ ಡೇವಿಡ್ ವಾರ್ನರ್ 35 ರನ್ ಗಳಿಸಿ ಔಟಾದ್ರು.
ಜಾನಿ ಬೇರ್ ಸ್ಟೋ 19 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ಬಳಿಕ ಮನೀಷ್ ಪಾಂಡೆ ತಂಡಕ್ಕೆ ಚೇತರಿಕೆ ನೀಡಿದ್ರು. ಆದ್ರೆ ಅಬ್ದುಲ್ ಸಮಾದ್ 7 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದ್ರು.
ಇನ್ನೊಂದೆಡೆ ಮನೀಷ್ ಪಾಂಡೆಗೆ ವಿಜಯ ಶಂಕರ್ ಸಾಥ್ ನೀಡಿದ್ರು.
ಆದ್ರೆ ಮನೀಷ್ ಪಾಂಡೆ 15 ರನ್ ಗಳಿಸಿ ಜೋರ್ಡಾನ್ ಗೆ ಬಲಿಯಾದ್ರು.
ನಂತರ ಸನ್ ರೈಸರ್ಸ್ ಹೈದ್ರಬಾದ್ ತಂಡ ನಾಟಕೀಯ ಕುಸಿತ ಕಂಡಿತ್ತು.
ವಿಜಯ್ ಶಂಕರ್ ಕೂಡ 25 ರನ್ ದಾಖಲಿಸಿ ಆರ್ಶದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿದ್ರು.
ಇನ್ನು ಜೈಸನ್ ಹೋಲ್ಡರ್ ಐದು ರನ್ ಗಳಿಸಿದ್ರೆ, ಪ್ರಿಯಮ್ ಗರ್ಗ್ 3 ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಬಳಿಕ ರಶೀದ್ ಖಾನ್, ಸಂದೀಪ್ ಶರ್ಮಾ ಮತ್ತು ಖಲೀಲ್ ಅಹಮ್ಮದ್ ಅವರು ಶೂನ್ಯ ಸುತ್ತಿದ್ರು.
ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ 19.5 ಓವರ್ ಗಳಲ್ಲಿ 114 ರನ್ ಗಳಿಗೆ ಸರ್ವಪತನಗೊಂಡಿತ್ತು.
17 ರನ್ ಗೆ ನಾಲ್ಕು ವಿಕೆಟ್ ಕಬಳಿಸಿದ್ದ ಕ್ರಿಸ್ ಜೋರ್ಡಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರು.