ADVERTISEMENT
Tuesday, March 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಮಯಾಂಕ್ ಗುಡುಗು… ರಾಹುಲ್ ಮಿಂಚು… ಶಾರ್ಜಾ ದಲ್ಲಿ ಹರಿಯಿತು ರನ್ ಮಳೆ..

admin by admin
September 27, 2020
in IPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಮಯಾಂಕ್ ಗುಡುಗು… ರಾಹುಲ್ ಮಿಂಚು… ಶಾರ್ಜಾ ದಲ್ಲಿ ಹರಿಯಿತು ರನ್ ಮಳೆ..

ಮಯಾಂಕ್ ಅಗರ್ ವಾಲ್ ಗುಡುಗು… ರಾಹುಲ್ ಮಿಂಚಿಗೆ ರಾಯಲ್ಸ್ ಬೌಲರ್ ಪಾಳೆಯದಲ್ಲಿ ಮೇಘ ಸ್ಫೋಟಗೊಂಡಾಗ ಶಾರ್ಜಾದಲ್ಲಿ ಸುರಿದಿದ್ದು ರನ್ ಮಳೆ.. ರನ್ ಮಳೆ.. ರನ್ ಮಳೆ..
ಅಬ್ಬಾ.. ಒಂದು ವೇಳೆ ಮೈದಾನದಲ್ಲಿ ಪ್ರೇಕ್ಷಕರು ಇರುತ್ತಿದ್ರೆ ಬಹುಶಃ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಅಂತ ಕುಪ್ಪಳಿಸಿ ಕುಣಿಯುತ್ತಿದ್ದರೇನೋ.. ಯಾಕಂದ್ರೆ ಇಬ್ಬರು ಕನ್ನಡಿಗರ ಆಟ ಬೊಂಬಾಟ್ ಆಗಿತ್ತು. ಅದೇ ರೀತಿ ಮಯಾಂಕ್ ಅಗರ್ ವಾಲ್ ಮತ್ತು ರಾಹುಲ್ ಬ್ಯಾಟಿಂಗ್ ವೈಖರಿ ಆ ಮಟ್ಟದಲ್ಲಿತ್ತು. ಅದನ್ನು ವರ್ಣಿಸಲು ಸಾಧ್ಯವಿಲ್ಲ. ನೋಡಿ ಆನಂದಿಸಬೇಕು ಅಷ್ಟೇ..
ಹೌದು, ಮಯಾಂಕ್ ಅಗರ್ ವಾಲ್ ಅವರ ಆಟಕ್ಕೊಂದು ಸಲಾಂ.. ಕ್ಲಾಸ್ ಮತ್ತು ಮಾಸ್ ಆಟದ ಮೂಲಕ ರಾಯಲ್ಸ್ ಬೌಲರ್ ಗಳ ಮೇಲೆ ಸವಾರಿ ನಡೆಸಿದ್ರು. ಬೌಂಡರಿ ಮತ್ತು ಸಿಕ್ಸರ್ ಗಳಿಂದ ರಾಜಸ್ತಾನ ರಾಯಲ್ಸ್ ಬೌಲರ್ ಗಳಿಗೆ ತಲೆನೋವಾಗಿ ಪರಿಣಮಿಸಿದ್ರು.
ನಾಯಕ ಸ್ಟೀವನ್ ಸ್ಮಿತ್ ಅವರ ತಂತ್ರಗಾರಿಕೆ ಮಯಾಂಕ್ ಬ್ಯಾಟಿಂಗ್ ವೈಖರಿಗೆ ಅಡ್ಡಿಯಾಗಲೇ ಇಲ್ಲ. ಉನದ್ಕಾಟ್, ಅಂಕಿತ್ ರಜಪೂತ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಟಾಮ್ ಕುರನ್ ಅವರ ಎಸೆತಗಳನ್ನು ಮನಬಂದಂತೆ ದಂಡಿಸಿದ್ರು. ರಾಯಲ್ಸ್ ತಂಡಕ್ಕೆ ಮಯಾಂಕ್ ಮತ್ತು ರಾಹುಲ್ ರಾಹು ಕೇತು ಗ್ರಹದಂತೆ ಕಾಡಿದ್ರು.
ಕೇವಲ 45 ಎಸೆತಗಳಲ್ಲಿ ಶತಕ ದಾಖಲಿಸಿದ್ದ ಮಯಾಂಕ್ ಅಗರ್ ವಾಲ್ ಐಪಿಎಲ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಸಂಭ್ರಮದಲ್ಲೂ ತೇಲಾಡಿದ್ರು. ಅಲ್ಲದೆ ಕೆ.ಎಲ್. ರಾಹುಲ್ ಜೊತೆ 16.3 ಓವರ್ ಗಳಲ್ಲಿ 183 ರನ್ ಗಳ ಜೊತೆಯಾಟವನ್ನು ದಾಖಲೆಯನ್ನು ಬರೆದ್ರು. ಅಂತಿಮವಾಗಿ ಮಯಾಂಕ್ ಅಗರ್ ವಾಲ್ ಅವರು 106 ರನ್ ದಾಖಲಿಸಿ ಟಾಮ್ ಕುರನ್‍ಗೆ ವಿಕೆಟ್ ಒಪ್ಪಿಸಿದ್ರು. ಮಯಾಂಕ್ ಪೆವಿಲಿಯನ್ ಹಾದಿ ಹಿಡಿಯುವ ಮುನ್ನ 50 ಎಸೆತಗಳಲ್ಲಿ 10 ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಂದ 107 ರನ್ ಗಳಿಸಿದ್ರು.
ಇನ್ನೊಂದೆಡೆ ಕೆ.ಎಲ್. ರಾಹುಲ್ ಅವರ ಮನಮೋಹಕ ಆಟ ಮಯಾಂಕ್ ಆಟದ ಎದುರು ಮಂಕಾಗಿ ಹೋದ್ರೂ ತಂಡದ ರನ್ ಗತಿಯನ್ನು ಏರಿಸಲು ಸಹಕರಿಸಿದ್ರು. ರಾಹುಲ್ ಅವರು 54 ಎಸೆತಗಳಲ್ಲಿ 69 ರನ್ ದಾಖಲಿಸಿದ್ರು. ಇದ್ರಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಗಳನ್ನು ಸಿಡಿಸಿದ್ರು. ಅಂತಿಮವಾಗಿ ರಾಹುಲ್ ಅವರು ಅಂಕಿತ್ ರಜಪೂತ್‍ಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ಗ್ಲೇನ್ ಮ್ಯಾಕ್ಸ್ ವೆಲ್ ಅಜೇಯ 13 ರನ್ ಗಳಿಸಿದ್ರೆ, ನಿಕೊಲಾಸ್ ಪೂರನ್ ಅವರು ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿಯ ನೆರವಿನಿಂದ ಅಜೇಯ 25 ರನ್ ಗಳಿಸಿದ್ರು. ಅಂತಿಮವಾಗಿ ಕಿಂಗ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು.

Related posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

March 10, 2026
ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

March 10, 2026
Tags: #Rajasthan Royals vs Kings XI PunjabIPLIPL 2020KKings XI Punjabl.rahulMayank Agarwalrajasthan royalsuae ipl 2020
ShareTweetSendShare
Join us on:

Related Posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

by Shwetha
March 10, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 29% ಏರಿಕೆ ಕಂಡಿದ್ದು, ಜಾಗತಿಕ...

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

by Shwetha
March 10, 2026
0

ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತೀಯರ ಸುರಕ್ಷತೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ...

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

by Shwetha
March 10, 2026
0

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಹಾಗೂ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟಗಳ ನಡುವೆಯೇ, ಇದೀಗ ನಾಯಕರ ನಡುವಿನ ಬಹಿರಂಗ ಕಚ್ಚಾಟ ತಾರಕಕ್ಕೇರಿದೆ. ಸಚಿವರು...

ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

ಶಿಕ್ಷಣಕ್ಕೆ ಮೊದಲ ಆದ್ಯತೆ: ವರ್ಗಾವಣೆಗೊಂಡ ಶಿಕ್ಷಕರನ್ನು ಗಣತಿ ಕಾರ್ಯಗಳಿಗೆ ಬಳಸದಿರಲು ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶ

by Shwetha
March 10, 2026
0

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಮಕ್ಕಳ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ. 2024-25ನೇ ಸಾಲಿನಲ್ಲಿ ವರ್ಗಾವಣೆಗೊಂಡಿರುವ ಸರ್ಕಾರಿ...

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

by Shwetha
March 10, 2026
0

ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram