ಐಪಿಎಲ್ 2020- ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿಯ ಮತ್ತೊಂದು ಸಾಧನೆ…!
ಹಿರಿಯ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಟೂರ್ನಿಯಲ್ಲಿ ಹೊಸ ಸಾಧನೆಯೊಂದನ್ನು ಮಾಡಿದ್ದಾರೆ.
ಹಾಗೇ ನೋಡಿದ್ರೆ ಮಹೇಂದ್ರ ಸಿಂಗ್ ಧೋನಿ ಆಡುವ ಪ್ರತಿಯೊಂದು ಪಂದ್ಯಗಳು ಕೂಡ ಒಂದೊಂದು ದಾಖಲೆಗೆ ಪಾತ್ರವಾಗುತ್ತಿವೆ. ಕಳೆದ 13 ಐಪಿಎಲ್ ಟೂರ್ನಿಗಳಲ್ಲಿ ಆಡುತ್ತಿರುವ ಧೋನಿ ನಾಯಕನಾಗಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ದಾಖಲೆಯೂ ಇದೆ. ಅದೇ ರೀತಿ ಅತೀ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ಹಿರಿಮೆ ಕೂಡ ಧೋನಿ ಹೆಸರಿನಲ್ಲಿದೆ. ಇನ್ನೊಂದೆಡೆ ಐಪಿಎಲ್ ನಲ್ಲಿ 4500 ರನ್ ಪೂರೈಸಿದ್ದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಐಪಿಎಲ್ 2020 -ಮುಂಬೈ ಇಂಡಿಯನ್ಸ್ ಗೆ ತಲೆಬಾಗಿದ ಸನ್ ರೈಸರ್ಸ್ ಹೈದ್ರಬಾದ್
ಇದೀಗ ಧೋನಿ ಹೆಸರಿಗೆ ಮತ್ತೊಂದು ಗೌರವ ಸೇರಿಕೊಂಡಿದೆ. ಐಪಿಎಲ್ ನಲ್ಲಿ 100 ಕ್ಯಾಚ್ ಹಿಡಿದ ಎರಡನೇ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕೆ.ಎಲ್. ರಾಹುಲ್ ಅವರ ಕ್ಯಾಚ್ ಹಿಡಿಯುವ ಮೂಲಕ ಧೋನಿ ಈ ಸಾಧನೆ ಮಾಡಿದ್ದಾರೆ.
ಸದ್ಯ ಐಪಿಎಲ್ ನಲ್ಲಿ ವಿಕೆಟ್ ಕೀಪರ್ ಆಗಿ ಗರಿಷ್ಠ ಕ್ಯಾಚ್ ಪಡೆದ ದಾಖಲೆ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ದಿನೇಶ್ ಕಾರ್ತಿಕ್ ಅವರು 103 ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಪಾರ್ಥಿವ್ ಪಟೇಲ್ ಅವರು 66 ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಒಟ್ಟಾರೆಯಾಗಿ ಐಪಿಎಲ್ ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ.
https://saakshatv.com/ipl-2020-chennai-super-kings-watson-du-plessis-guide-csk-to-10-wkt-win/
ಸತತ ಮೂರು ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ವಿಕೆಟ್ ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪರಾಭವಗೊಳಿಸಿತು. ಶೇನ್ ವಾಟ್ಸನ್ ಅಜೇಯ 83 ರನ್ ಮತ್ತು ಫಾಪ್ ಡುಪ್ಲೇಸಸ್ ಅವರು ಅಜೇಯ 87 ರನ್ ದಾಖಲಿಸಿದ್ದರು.