ಗೆಲುವಿಗಾಗಿ ಎಸ್ ಆರ್ ಎಚ್ ಹೋರಾಟ.. ಹ್ಯಾಟ್ರಿಕ್ ಜಯ ಸಾಧಿಸಲು ಅಯ್ಯರ್ ಹುಡುಗರ ತವಕ
2020ರ ಐಪಿಎಲ್ ಟೂರ್ನಿಯ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಇಂದು ಕಾದಾಟ ನಡೆಸಲಿವೆ. ಈಗಾಗಲೇ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿರುವ ಶ್ರೇಯಸ್ ಅಯ್ಯರ್ ಹುಡುಗರು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ಮತ್ತೊಂದೆಡೆ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಡೇವಿಡ್ ವಾರ್ನರ್ ಬಳಗ ಗೆಲುವಿಗಾಗಿ ಹೋರಾಟ ನಡೆಸಬೇಕಿದೆ.
ಕಳೆದ ಎರಡು ಪಂದ್ಯಗಳಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂದ್ಯ ಗೆಲ್ಲುವ ಫೆವರೀಟ್. ಆರಂಭಿಕರಾದ ಶಿಖರ್ ಧವನ್ ಮತ್ತು ಪೃಥ್ವಿ ಶಾ ತಂಡಕ್ಕೆ ಅಡಿಪಾಯ ಹಾಕಿಕೊಡುತ್ತಿದ್ದಾರೆ. ಅದೇ ರೀತಿ ಶಿಮ್ರೋನ್ ಹೆಟ್ಮೇರ್, ಶ್ರೇಯಸ್ ಮತ್ತು ರಿಷಬ್ ಪಂತ್, ಮಾರ್ಕೊಸ್ ಸ್ಟೋನಿಸ್ ತಂಡಕ್ಕೆ ಆಧಾರವಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಜೊತೆ ಆರ್. ಅಶ್ವಿನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅದೇ ರೀತಿ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಗಿಸೊ ರಬಾಡ ಮತ್ತು ಅನ್ರಿಚ್ ನೊರ್ಟೆಜ್, ಮೋಹಿತ್ ಶರ್ಮಾ ತಂಡಕ್ಕೆ ಬೆನ್ನಲುಬಾಗಿದ್ದಾರೆ.
ಇನ್ನು ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ಮಧ್ಯಮ ಕ್ರಮಾಂಕದ್ದೇ ಹೆಚ್ಚು ಚಿಂತೆಯಾಗಿದೆ. ಡೇವಿಡ್ ವಾರ್ನರ್ ಮತ್ತು ಮನೀಷ್ ಪಾಂಡೆ ಬಿಟ್ಟು ಇನ್ನುಳಿದ ಬ್ಯಾಟ್ಸ್ ಮೆನ್ ಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಇಂದಿನ ಪಂದ್ಯಕ್ಕೆ ಕೇನ್ ವಿಲಿಯಮ್ಸನ್ ಆಡುವ ಸಾಧ್ಯತೆ ಇದೆ. ಗಾಯದಿಂದ ಚೇತರಿಸಿಕೊಂಡ್ರೆ ವೃದ್ದಿಮಾನ್ ಶಾಹ ಬದಲು ವಿಜಯ್ ಶಂಕರ್ ಸ್ಥಾನ ಪಡೆದುಕೊಳ್ಳಬಹುದು. ಒಟ್ಟಾರೆ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ಗೆಲುವಿನ ಅನಿವಾರ್ಯವಾದ್ರೆ, ಡೆಲ್ಲಿ ಕ್ಯಾಪಿಟಲ್ಸ್ಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಮುಂದುವರಿಸಿಕೊಂಡು ಹೋಗುವ ತವಕದಲ್ಲಿದೆ.
ಸನ್ ರೈಸರ್ಸ್ ಹೈದ್ರಬಾದ್ ಸಂಭವನೀಯ ತಂಡ
ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್ ಸ್ಟೋ (ವಿಕೆಟ್ ಕೀಪರ್), ಮನೀಷ್ ಪಾಂಡೆ, ಪ್ರಿಯಂ ಗಾರ್ಗ್, ವಿಜಯ್ ಶಂಕರ್ /ವೃದ್ದಿಮಾನ್ ಶಾಹ, ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಖಲೀಲ್ ಅಹ್ಮದ್ ಅಥವಾ ಸಿದ್ಧಾರ್ಥ್ ಕೌಲ್.
ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಶಿಮ್ರೋನ್ ಹೆಟ್ಮೇರ್, ರಿಷಬ್ ಪಂತ್, ಮಾರ್ಕೊಸ್ ಸ್ಟೋನಿಸ್, ಅಕ್ಸರ್ ಪಟೇಲ್, ಆರ್. ಅಶ್ವಿನ್/ಅಮಿತ್ ಮಿಶ್ರಾ, ಕಾಗಿಸೊ ರಬಾಡ, ಆನ್ರಿಚ್ ನೊರ್ಟೆಜ್, ಮೋಹಿತ್ ಶರ್ಮಾ.