ಎಮ್. ಎಸ್. ಧೋನಿ ಸಾರಥ್ಯದ ಸಿಎಸ್ ಕೆ ತಂಡದ ಫುಲ್ ಡಿಟೇಲ್ಸ್…!

1 min read
IPL 2021

ಎಮ್. ಎಸ್. ಧೋನಿ ಸಾರಥ್ಯದ ಸಿಎಸ್ ಕೆ ತಂಡದ ಫುಲ್ ಡಿಟೇಲ್ಸ್…!

ipl 2021 Chennai Super Kings full team

csk ipl saakshatvಐಪಿಎಲ್ ಟೂರ್ನಿಯ ಯಶಸ್ವಿ ತಂಡಗಳಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ಚೆನ್ನೈ ಸೂಪರ್ ಕಿಂಗ್ಸ್..

ಹೆಸರಿಗೆ ತಕ್ಕಂತೆ ಚೆನ್ನೈ ತಂಡ ಐಪಿಎಲ್ ನಲ್ಲಿ ಸೂಪರ್ ಕಿಂಗ್ಸ್ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ ಕಳೆದ ಐಪಿಎಲ್ ನಲ್ಲಿ ಹೀನಾಯ ಪ್ರದರ್ಶನ ನೀಡಿರುವುದು ಮತ್ತು ಎರಡು ವರ್ಷ ನಿಷೇಧ ಅನುಭವಿಸಿರುವುದು ಬಿಟ್ರೆ ಚೆನ್ನೈ ತಂಡ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿಲ್ಲ.
ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವುದು ಹಾಗೂ ಐದು ಬಾರಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿರುವುದು ಸಿಎಸ್ ಕೆ ತಂಡದ ಹಿರಿಮೆ. ಒಂದು ಬಾರಿ ಸೆಮಿಫೈನಲ್ ನಲ್ಲಿ ಮುಗ್ಗರಿಸಿದೆ. ಎರಡು ಬಾರಿ ಪ್ಲೇ ಆಫ್‍ಗೆ ಎಂಟ್ರಿಕೊಟ್ಟಿದೆ. ಒಂದು ಬಾರಿ ಲೀಗ್ ನಲ್ಲಿ ಏಳನೇ ಸ್ಥಾನ ಪಡೆದು ಅಪಮಾನ ಅನುಭವಿಸಿದೆ.
ಕಳೆದ 13 ಐಪಿಎಲ್ ಟೂರ್ನಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 11 ಟೂರ್ನಿಗಳಲ್ಲಿ ಒಟ್ಟು 180 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 106 ಪಂದ್ಯಗಳನ್ನು ಗೆದ್ದುಕೊಂಡಿದೆ. 72 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡು ಗೆದ್ರೆ, ಇನ್ನೊಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ.
csk m.s. dhoni saakshatv ipl 2020ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಎರಡು ಕಣ್ಣುಗಳಿದ್ದಂತೆ. ಕಳೆದ ಬಾರಿಯ ಟೂರ್ನಿಯಲ್ಲಿ ಸುರೇಶ್ ರೈನಾ ಆಡಿರಲಿಲ್ಲ. ಆದ್ರೆ ಈ ವರ್ಷ ಆಡುತ್ತಿದ್ದಾರೆ. ತಂಡದ ತರಬೇತಿ ಶಿಬಿರದಲ್ಲೂ ಭಾಗಿಯಾಗಿದ್ದಾರೆ.
ಈ ಬಾರಿಯ ಟೂರ್ನಿಯಲ್ಲಿ ಕಳೆದ ಬಾರಿ ಆಗಿರುವ ಅಪಮಾನಕ್ಕೆ ತಿರುಗೇಟು ನೀಡುವ ಉಮೇದಿನಲ್ಲಿದೆ ಸಿಎಸ್ ಕೆ. ಹಿರಿಯ ಹಾಗೂ ಯುವ ಆಟಗಾರರನ್ನೊಳಗೊಂಡಿರುವ ಸಿಎಸ್ ಕೆ ತಂಡ ಪ್ಲೇ ಆಫ್ ಗೆ ಎಂಟ್ರಿಕೊಡುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ

ಮಹೇಂದ್ರ ಸಿಂಗ್ ಧೋನಿ (ನಾಯಕ & ವಿಕೆಟ್ ಕೀಪರ್) ಫಾಪ್ ಡು ಪ್ಲೇಸಿಸ್, ರುತುರಾಜ್ ಗಾಯಕ್ ವಾಡ್, ಸುರೇಶ್ ರೈನಾ, ಅಂಬಟಿ ರಾಯುಡು, ಎನ್. ಜಗದೀಶನ್ (ವಿಕೆಟ್ ಕೀಪರ್), ರಾಬಿನ್ ಉತ್ತಪ್ಪ, ರವೀಂದ್ರ ಜಡೇಜಾ, ಸ್ಯಾಮ್ ಕುರನ್, ಡ್ವೇನ್ ಬ್ರೇವೋ, ಕರನ್ ಶರ್ಮಾ, ಸಾಯ್ ಕಿಶೋರ್, ಮಿಟ್ಚೆಲ್ ಸ್ಯಾಂಟ್ನೆರ್, ಇಮ್ರಾನ್ ತಾಹೀರ್, ದೀಪಕ್ ಚಾಹರ್, ಶಾರ್ದೂಲ್ ಥಾಕೂರ್, ಲುಂಗಿ ಎನ್‍ಗಿಡಿ, ಜೋಶ್ ಹ್ಯಾಝ್ಲ್ ವುಡ್, ಕೆ.ಎಮ್ . ಆಶೀಫ್ (ಖರೀದಿ ಮಾಡಿದ ಆಟಗಾರರು) – ಮೋಯಿನ್ ಆಲಿ, ಕೆ. ಗೌತಮ್, ಚೇತೇಶ್ವರ್ ಪೂಜಾರ, ಎಮ್. ಹರಿಶಂಖರ್ ರೆಡ್ಡಿ, ಕೆ. ಭಗತ್ ವರ್ಮಾ, ಸಿ ಹರಿ ನಿಶಾಂತ್.

#ipl 2021 #Chennai Super Kings #cskfull team #mahendrasingh dhoni #m.s.dhoni #suresh raina #ipl #t-20 cricket #saakshatv #saakshatvsports

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd