ಐಪಿಎಲ್ 2021- ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಸೂಪರ್ ಕಿಂಗ್ಸ್

1 min read
csk ipl 2021 saakshatv

ಐಪಿಎಲ್ 2021- ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಸೂಪರ್ ಕಿಂಗ್ಸ್

Dwayne Bravo csk ipl2021 saakshatvಸಂಘಟಿತ ಆಟವನ್ನಾಡಿದ ಚೆನ್ನೈ ಸೂಪರ್ ಕಿಂಗ್ಸ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ 45 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ಮೂರು ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಗೆಲುವು ಸಾಧಿಸಿದ್ರೆ, ರಾಜಸ್ತಾನ ಎರಡನೇ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಫಾಫ್ ಡು ಪ್ಲೆಸಸ್ 33 ರನ್, ಮೋಯಿನ್ ಆಲಿ 26 ರನ್ ಹಾಗೂ ಅಂಬಟಿ ರಾಯುಡು 27 ರನ್ ದಾಖಲಿಸಿದ್ರು. ಕೊನೆ ಹಂತದಲ್ಲಿ ಡ್ವೇನ್ ಬ್ರೇವೋ ಅಜೇಯ 20 ರನ್ ಸಿಡಿಸಿದ್ರು. ನಾಯಕ ಧೋನಿ ಕೇವಲ 18 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ರಾಜಸ್ತಾನ ರಾಯಲ್ಸ್ ತಂಡದ ಪರ ಕ್ರಿಸ್ ಮೋರಿಸ್ ಎರಡು ವಿಕೆಟ್ ಪಡೆದ್ರೆ, ಯುವ ವೇಗಿ ಚೇತನ್ ಸಕಾರಿಯಾ ಮೂರು ವಿಕೆಟ್ ಉರುಳಿಸಿ ಗಮನ ಸೆಳೆದ್ರು.
chethan sakariya rajasthan royals saakshatv ipl2021ಗೆಲ್ಲಲು 189 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಮೋಯಿನ್ ಆಲಿ (3ವಿಕೆಟ್), ರವೀಂದ್ರ ಜಡೇಜಾ ಎರಡು ವಿಕೆಟ್ ಹಾಗೂ ಸ್ಯಾಮ್ ಕುರನ್ ಎರಡು ವಿಕೆಟ್ ಉರುಳಿಸಿ ಗೆಲುವಿನ ರೂವಾರಿಗಳಾದ್ರು.
ರಾಜಸ್ತಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ 49 ರನ್ ಸಿಡಿಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಈ ನಡುವೆ ರಾಹುಲ್ ಟೆವಾಟಿಯಾ 20 ರನ್ ಹಾಗೂ ಜಯದೇವ್ ಉನಾದ್ಕಟ್ 24 ರನ್ ಗಳಿಸಿದ್ರು.
ಆಲ್ ರೌಂಡ್ ಆಟವನ್ನಾಡಿದ ಮೋಯಿನ್ ಆಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd