ಐಪಿಎಲ್ 2021 – ಡೆಲ್ಲಿ ಕ್ಯಾಪಿಟಲ್ಸ್ – ಆರ್ ಸಿಬಿ ಗೆಲ್ಲೋರು ಯಾರು ಸ್ವಾಮಿ..!

1 min read
ipl 2021 rcb virat kohli dc rishab pant saakshatv

ಐಪಿಎಲ್ 2021 – ಡೆಲ್ಲಿ ಕ್ಯಾಪಿಟಲ್ಸ್ – ಆರ್ ಸಿಬಿ ಗೆಲ್ಲೋರು ಯಾರು ಸ್ವಾಮಿ..!

ipl 2021 rcb virat kohli dc rishab pant saakshatv14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ ಸಿಬಿ ತಂಡಗಳು ಇಂದು ಏಪ್ರಿಲ್ 27ರಂದು ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೋರಾಟ ನಡೆಸಲಿವೆ.
ಉಭಯ ತಂಡಗಳು ಈಗಾಗಲೇ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿವೆ. ರನ್ ಧಾರಣೆಯ ಆಧಾರದಲ್ಲಿ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದ್ರೆ, ಆರ್ ಸಿಬಿ ಮೂರನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಮೂರು ಗೆಲುವಿನೊಂದಿಗೆ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಮತ್ತೊಂದೆಡೆ ಆರ್ ಸಿಬಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡು ಹಿಂದಿನ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ಆರ್ ಸಿಬಿ ಮತ್ತೆ ಗೆಲುವಿನ ಲಯಕಂಡುಕೊಳ್ಳಬೇಕಿದೆ. ಹಾಗೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ ಸೂಪರ್ ಓವರ್ ನಲ್ಲಿ ಗೆಲುವು ದಾಖಲಿಸಿತ್ತು.

IPL 2021 – delhi capitals vs royal challengers bengaluru match no 22

ಆರ್ ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಆಧಾರಸ್ತಂಭವಾದ್ರೆ, ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಮತ್ತು ಶಿಖರ್ ಧವನ್ ಅತ್ಯುತ್ತಮ ಲಯದಲ್ಲಿರುವ ಪ್ಲಸ್ ಪಾಯಿಂಟ್ ಆಗಿದೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಡೆಲ್ಲಿ ತಂಡಕ್ಕೆ ಸ್ಟೀವನ್ ಸ್ಮಿತ್, ನಾಯಕ ರಿಷಬ್ ಪಂತ್, ಮಾರ್ಕಸ್ ಸ್ಟೋನಿಸ್, ಶಿಮ್ರೋನ್ ಹೆಟ್ಮೇರ್, ಲಲಿತ್ ಯಾದವ್ ಆಧಾರ ಸ್ತಂಭಗಳಾಗಿದ್ದಾರೆ. ಬೌಲಿಂಗ್ ನಲ್ಲಿ ಅಶ್ವಿನ್ ಟೂರ್ನಿಯಿಂದ ಹೊರನಡೆದಿರುವು ಸ್ವಲ್ಪ ಮಟ್ಟಿನ ಹಿನ್ನಡೆಯಾಗಬಹುದು. ಇನ್ನುಳಿದಂತೆ ಕಾಗಿಸೊ ipl 2021 rcb virat kohli dc rishab pant saakshatvರಬಾಡ, ಆವೇಶ್ ಖಾನ್, ಅಕ್ಷರ್ ಪಟೇಲ್ ಮತ್ತು ಅಮಿತ್ ಮಿಶ್ರಾ ಆರ್ ಸಿಬಿಯ ರನ್ ದಾಹಕ್ಕೆ ಕಡಿವಾಣ ಹಾಕಬಹುದು.
ಇನ್ನೊಂದೆಡೆ, ಆರ್ ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಎಬಿಡಿ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ಅವರನ್ನು ಹೆಚ್ಚು ನಂಬಿಕೊಂಡಿದೆ. ಇಂದಿನ ಪಂದ್ಯದಲ್ಲಿ ರಜತ್ ಪಟಿದಾರ್, ಶಹಬಾಝ್ ಅಹಮ್ಮದ್ ಅಥವಾ ಮಹಮ್ಮದ್ ಅಜರುದ್ದೀನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬಹುದು. ಇನ್ನು, ವಾಷಿಂಗ್ಟನ್ ಸುಂದರ್, ಡಾನ್ ಕ್ರಿಸ್ಟಿಯಾನ್ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ. ಬೌಲಿಂಗ್ ನಲ್ಲಿ ಹರ್ಶೆಲ್ ಪಟೇಲ್ ಅವರು ಜಡೇಜಾ ನೀಡಿರುವ ಶಾಕ್ ನಿಂದ ಹೊರಬರಬೇಕಿದೆ. ಇನ್ನುಳಿದಂತೆ ಕೈಲ್ ಜಾಮಿನ್ಸನ್, ಚಾಹಲ್ ಮತ್ತು ಸೀರಾಜ್ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ ಮೆನ್ ಗಳ ಅಬ್ಬರಕ್ಕೆ ಕಡಿವಾಣ ಹಾಕಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ ತಂಡ
ರಿಷಬ್ ಪಂತ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋನಿಸ್, ಲಲಿತ್ ಯಾದವ್, ಶಿಮ್ರೋನ್ ಹೆಟ್ಮೇರ್, ಅಕ್ಷರ್ ಪಟೇಲ್, ಕಾಗಿಸೊ ರಬಾಡ, ಅಮಿತ್ ಮಿಶ್ರಾ, ಆವೇಶ್ ಖಾನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ (ನಾಯಕ), ದೇವ್ ದತ್ ಪಡಿಕ್ಕಲ್, ಗ್ಲೇನ್ ಮ್ಯಾಕ್ಸ್ ವೆಲ್, ಎಬಿಡಿ ವಿಲಿಯರ್ಸ್, ವಾಷಿಂಗ್ಟನ್ ಸುಂದರ್, ಮಹಮ್ಮದ್ ಅಜರುದ್ದೀನ್, ಡಾನ್ ಕ್ರಿಸ್ಟಿಯಾನ್, ಕೈಲ್ ಜಾಮಿನ್ಸನ್, ಹರ್ಶಲ್ ಪಟೇಲ್, ಯುಜುವೇಂದ್ರ ಚಾಹಲ್, ಮಹಮ್ಮದ್ ಸೀರಾಜ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd