IPL 2021 | ದ್ರಾವಿಡ್ ಟು ವಿರಾಟ್.. ಒಂದು ಬಾರಿಯೂ ಕಪ್ ಗೆಲ್ಲದ ಆರ್ ಸಿಬಿ

1 min read
R CB saaksha tv

ವಿರಾಟ್ ಕೊಹ್ಲಿಯೂ ಗೆಲ್ಲಲಿಲ್ಲ ಐಪಿಎಲ್ ಟ್ರೋಫಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಆಂಭವಾಗುವಾಗ ಕಪ್ ಗೆಲ್ಲುವ ಫೆವರೀಟ್ ಟೀಮ್ ಆಗಿರುತ್ತದೆ. ಅಭಿಮಾನಿಗಳಂತೂ ಈ ಬಾರಿ ಕಪ್ ನಮ್ದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಆದರೆ ಟೂರ್ನಿ ಮುಗಿತಾ ಇದ್ದ ಹಾಗೇ ಆರ್ಸಿಬಿ ಕಪ್ ಬಿಡಿ ಕನಿಷ್ಠ ಫೈನಲ್ ತಲುಪಿರುವುದು ಕೂಡ ಅಪರೂಪ ಅನ್ನುವ ಹಾಗಾಗಿದೆ.

ಗೆಲ್ಲಲೇ ಬೇಕಾಗಿದ್ದ ಪಂದ್ಯಗಳಲ್ಲಿ ಸೋಲು ಕಂಡಿದ್ದು ಆರ್ಸಿಬಿಗೆ ಕಪ್ ಇಲ್ಲದ ಹಾಗೆ ಮಾಡಿದೆ.

ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ ಹೀಗೆ ಘಟಾನುಘಟಿಗಳೇ ಆರ್ಸಿಬಿಗೆ ನಾಯಕರಾಗಿದ್ದರೂ ಕಪ್ ಮಾತ್ರ ಒಂದು ಬಾರಿಯೂ ಸಿಗಲಿಲ್ಲ.

R CB  saaksha tv

ಕೋಟಿ ಕೋಟಿ ಖರ್ಚು ಮಾಡಿ ಆಟಗಾರರನ್ನು ಖರೀದಿ ಮಾಡಿದರೂ ಅದ್ಯಾಕೋ ಐಪಿಎಲ್ ಟ್ರೋಫಿ ಎತ್ತುವ ಕನಸು ನನಸಾಗಿಲ್ಲ.

ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ ಮತ್ತು ವಿರಾಟ್ ಕೊಹ್ಲಿ ಒಂದೊಂದು ಬಾರಿ ತಂಡವನ್ನು ಫೈನಲ್ಗೇರಿಸಿದ್ದು ದೊಡ್ಡ ಸಾಧನೆ.

ವಿರಾಟ್ ಕೊಹ್ಲಿಗೆ ವಿಶ್ವ ಕ್ರಿಕೆಟ್ನಲ್ಲಿ ಸಮನಾದ ಆಟಗಾರ ಮತ್ತೊಬ್ಬರಿಲ್ಲ. ಐಪಿಎಲ್ನಲ್ಲೂ ಕೊಹ್ಲಿ ರನ್ ಶಿಖರವನ್ನೇ ಕಟ್ಟಿದ್ದಾರೆ.

ಆದರೆ ಕೊಹ್ಲಿ ನಾಯಕತ್ವದಲ್ಲ್ಲೂ ಆರ್ಸಿಬಿ ಕಪ್ ಗೆಲ್ಲಲಾಗಲಿಲ್ಲ. ವಿರಾಟ್ ಆರಂಭದಿಂದ ತಂಡದಲ್ಲಿದ್ದರೂ ಇಲ್ಲಿ ತನಕ ಕಪ್ ಗೆದ್ದಿಲ್ಲ ಅನ್ನುವ ಕೊರಗು ಅವರನ್ನು ಕಾಡುತ್ತಿರುವುದು ಸುಳ್ಳಲ್ಲ.

ವಿರಾಟ್ ಐಪಿಎಲ್ ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ್ದಾರೆ. ಮುಂದೆ ಯಾರಾಗ್ತಾರೆ ಕ್ಯಾಪ್ಟನ್ ಅನ್ನುವ ಚರ್ಚೆಯೂ ಜೋರಾಗಿದೆ.

ಐಪಿಎಲ್ನಲ್ಲಿ ಆರ್ಸಿಬಿ ಸಾಧನೆ:
1. 2008- 7ನೇ ಸ್ಥಾನ
2. 2009- ರನ್ನರ್ ಅಪ್
3. 2010-3ನೇ ಸ್ಥಾನ
4. 2011- ರನ್ನರ್ ಅಪ್
5. 2012- 5ನೇ ಸ್ಥಾನ
6. 2013 – 5ನೇ ಸ್ಥಾನ
7. 2014- 7ನೇ ಸ್ಥಾನ
8. 2015- 3ನೇ ಸ್ಥಾನ
9. 2016- ರನ್ನರ್ ಅಪ್
10. 2017- 8ನೇ ಸ್ಥಾನ
11. 2018 – 6ನೇ ಸ್ಥಾನ
12. 2019 -8ನೇ ಸ್ಥಾನ
13. 2020- 4ನೇ ಸ್ಥಾನ
14. 2021- 4ನೇ ಸ್ಥಾನ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd