ಐಪಿಎಲ್ – ಗರಿಷ್ಠ ರನ್‍ಗಳ ದಾಖಲೆ ಜೊತೆಯಾಟ ಯಾರ ಯಾರ ಹೆಸರಿನಲ್ಲಿದೆ…?

1 min read

ಐಪಿಎಲ್ – ಗರಿಷ್ಠ ರನ್‍ಗಳ ದಾಖಲೆ ಜೊತೆಯಾಟ ಯಾರ ಯಾರ ಹೆಸರಿನಲ್ಲಿದೆ…?

bcci ipl saakshatvಐಪಿಎಲ್.. ಚುಟುಕು ಕ್ರಿಕೆಟ್ ನ ಗಮ್ಮತ್ತೆ ಅಂತಹುದ್ದು.. ಕ್ಷಣ ಮಾತ್ರದಲ್ಲಿ ಏನು ಬೇಕಾದ್ರೂ ಆಗಬಹುದು. ಒಂದು ಜೊತೆಯಾಟ, ಒಂದು ಕೆಟ್ಟ ಹೊಡೆತ, ಒಂದು ವಿಕೆಟ್ ಪತನ.. ಒಂದು ಮೇಡನ್ ಓವರ್.. ಒಂದು ದುಬಾರಿ ಓವರ್.. ಹೀಗೆ ಯಾವುದೇ ಕ್ಷಣದಲ್ಲಿ ಪಂದ್ಯದ ಗತಿಯೇ ಬದಲಾಗಬಹುದು.
ಅಂತಹ ಮ್ಯಾಜಿಕ್ ಮಂತ್ರ ನಮ್ಮ ಐಪಿಎಲ್ ನಲ್ಲಿದೆ. ಕೆಲವೊಂದು ಬಾರಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಸೋಲಾಗುತ್ತೆ.. ಮತ್ತೆ ಕೆಲವು ಸಂದರ್ಭಗಳಲ್ಲಿ ಸೋಲಿನ ಭೀತಿಗೆ ಸಿಲುಕಿದ್ರೂ ಗೆಲುವು ಸಿಗುತ್ತದೆ. ಇದು ಚುಟುಕು ಕ್ರಿಕೆಟ್‍ನ ಕರಾಮತ್ತು.
ಆದ್ರೆ ಐಪಿಎಲ್ ನಲ್ಲಿ ಗೆಲ್ಲಬೇಕಾದ್ರೆ ಅದ್ಭುತವಾದ ಬೌಲಿಂಗ್ ಮಾಡಬೇಕು.. ಅಥವಾ ಅದ್ಭುತವಾದ ಜೊತೆಯಾಟ ಬರಬೇಕು. ಆಗ ಮಾತ್ರ ಗೆಲ್ಲಲು ಸಾಧ್ಯ. ಇನ್ನು ಕೆಲವು ಬಾರಿ ಏಕಾಂಗಿ ಹೋರಾಟದಿಂದಲೂ ತಂಡವನ್ನು ಗೆಲುವಿನ ದಡ ಸೇರಿಸಬಹುದು. ಆದ್ರೆ ಅಲ್ಲಿ ಜೊತೆಯಾಟ ಮುಖ್ಯವಾಗಿರುತ್ತದೆ.
ಹೀಗೆ ಕಳೆದ 13 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ಐಪಿಎಲ್ ನಲ್ಲಿ ಮಹತ್ವದ ಜೊತೆಯಾಟದ ದಾಖಲೆಗಳು ಇವೆ. ಅಂತಹ ದಾಖಲೆಗಳ ಜೊತೆಯಾಟದ ಪಟ್ಟಿ ಈ ಕೆಳಗಿನಂತಿದೆ.

ಮೊದಲ ವಿಕೆಟ್ ನ ಗರಿಷ್ಠ ಜೊತೆಯಾಟದ ದಾಖಲೆ ಇರೋದು ಸನ್ ರೈಸರ್ಸ್ ಹೈದ್ರಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತು ಜೋನಿ ಬೇರ್ ಸ್ಟೋವ್ ಹೆಸರಿನಲ್ಲಿ. 2019ರ ಐಪಿಎಲ್ ನಲ್ಲಿ ಆರ್ ಸಿಬಿ ವಿರುದ್ಧ ಇವರಿಬ್ಬರು 185 ರನ್ ಗಳ ಜೊತೆಯಾಟವನ್ನು ಆಡಿದ್ದರು. ಅಲ್ಲದೆ ಇಬ್ಬರು ಕೂಡ ಶತಕ ಕೂಡ ದಾಖಲಿಸಿದ್ದರು.
ಇನ್ನು ಎರಡನೇ ವಿಕೆಟ್‍ನ ಜೊತೆಯಾಟದ ದಾಖಲೆ ಇರೋದು ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಹೆಸರಿನಲ್ಲಿ. ಇವರಿಬ್ಬರು 2016ರ ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ 229 ರನ್ ಕಲೆ ಹಾಕಿದ್ದರು.

ಮೂರನೇ ವಿಕೆಟ್ ನ ಜೊತೆಯಾಟದ ದಾಖಲೆ ಡೆಕ್ಕನ್ ಚಾರ್ಜರ್ಸ್ ತಂಡದ ಕೆಮರೂನ್ ವೈಟ್ ಮತ್ತು ಕುಮಾರ ಸಂಗಕ್ಕರ ಹೆಸರಿನಲ್ಲಿ. ಇವರಿಬ್ಬರು 2012ರ ಐಪಿಎಲ್ ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ 157 ರನ್ ಪೇರಿಸಿದ್ದರು.

ನಾಲ್ಕನೇ ವಿಕೆಟ್‍ನ ಜೊತೆಯಾಟದ ದಾಖಲೆ ಇರೋದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಮ್ರೋನ್ ಹೆಟ್ಮೇರ್ ಮತ್ತು ಗುರ್‍ಕೀರತ್ ಸಿಂಗ್ ಹೆಸರಿನಲ್ಲಿ. ಇವರಿಬ್ಬರು 2019ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ 144 ರನ್ ದಾಖಲಿಸಿದ್ದರು.

IPL Auctionಐದನೇ ವಿಕೆಟ್ ನ ಜೊತೆಯಾಟದ ದಾಖಲೆಗೆ ಕೆಕೆಆರ್ ತಂಡದ ಯುಸೂಫ್ ಪಠಾಣ್ ಮತ್ತು ಶಕೀಬ್ ಆಲ್ ಹಸನ್ ಅವರು ಪಾತ್ರರಾಗಿದ್ದಾರೆ. ಇವರಿಬ್ಬರು 2016ರ ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಅಜೇಯ 134 ರನ್ ಗಳಿಸಿದ್ದರು.

ಹಾಗೇ ಆರನೇ ವಿಕೆಟ್ ನ ಜೊತೆಯಾಟದ ದಾಖಲೆ ಇರೋದು ಮುಂಬೈ ಇಂಡಿಯನ್ಸ್ ತಂಡದ ಅಂಬಟಿ ರಾಯುಡು ಮತ್ತು ಕಿರಾನ್ ಪೊಲಾರ್ಡ್ ಹೆಸರಿನಲ್ಲಿ. ಇವರಿಬ್ಬರು 2012ರ ಐಪಿಎಲ್ ನಲ್ಲಿ ಆರ್ ಸಿಬಿ ವಿರುದ್ಧ ಅಜೇಯ 122 ರನ್ ಸಿಡಿಸಿದ್ದರು.

ಏಳನೇ ವಿಕೆಟ್ ನ ಜೊತೆಯಾಟದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹರ್ಭಜನ್ ಸಿಂಗ್ ಮತ್ತು ಜಗದೀಶ ಸುಚೀತ್ ಹೆಸರಿನಲ್ಲಿದೆ. 2015ರ ಐಪಿಎಲ್ ನಲ್ಲಿ ಇವರಿಬ್ಬರು 2019ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 100 ರನ್ ದಾಖಲಿಸಿದ್ದರು.

ಎಂಟನೇ ವಿಕೆಟ್ ನ ಜೊತೆಯಾದ ದಾಖಲೆ ರಾಜಸ್ತಾನ ರಾಯಲ್ಸ್ ತಂಡದ ಬ್ರಾಡ್ ಹಾಡ್ಜ್ ಮತ್ತು ಜೇಮ್ಸ್ ಫಾಲ್ಕ್ನರ್ ಹೆಸರಿನಲ್ಲಿದೆ. ಇವರಿಬ್ಬರು 2014ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 69 ರನ್ ಪೇರಿಸಿದ್ದರು.

ಒಂಬತ್ತನೇ ವಿಕೆಟ್‍ನ ಜೊತೆಯಾಟದ ದಾಖಲೆ ಇರೋದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಯಾಮ್ ಕುರನ್ ಮತ್ತು ಇಮ್ರಾನ್ ತಾಹೀರ್. ಇವರಿಬ್ಬರು 2020ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 43 ರನ್ ಪೇರಿಸಿದ್ದರು.
ಇನ್ನು ಹತ್ತನೇ ವಿಕೆಟ್ ನ ಜೊತೆಯಾಟದ ದಾಖಲೆ ರಾಜಸ್ತಾನ ರಾಯಲ್ಸ್ ತಂಡದ ಟಾಮ್ ಕುರನ್ ಮತ್ತು ಅಂಕಿತ್ ರಜಪೂತ್ ಹೆಸರಿನಲ್ಲಿದೆ. ಇವರಿಬ್ಬರು ಕೆಕೆಆರ್ ವಿರುದ್ಧ 2020ರ ಐಪಿಎಲ್ ನಲ್ಲಿ ಕೆಕೆಆರ್ ವಿರುದ್ಧ ಅಜೇಯ 31 ರನ್ ಗಳಿಸಿದ್ದರು.

#IPL 2021 #iplHighest partnershipsbywicket  #IPL history #saakshatv #saakshatvsports #rcb #csk #srh #mumbaiindians #kkr #rajastanroyals #delhicapitals #punjabkings

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd