ಐಪಿಎಲ್ 2021 -ಹತ್ತಿರ.. ಮತ್ತಷ್ಟು ಹತ್ತಿರ.. ಆರ್ ಸಿಬಿಯ ಪ್ಲೇ ಆಫ್ ಕನಸು..

1 min read
virat kohli rcb ipl 2021 saakshatv

ಐಪಿಎಲ್ 2021 -ಹತ್ತಿರ.. ಮತ್ತಷ್ಟು ಹತ್ತಿರ.. ಆರ್ ಸಿಬಿಯ ಪ್ಲೇ ಆಫ್ ಕನಸು..

Royal Challengers Bangalore's Glenn Maxwell saakshatvಆರಂಭದಲ್ಲಿ ಅಬ್ಬರಿಸಿದ ರಾಜಸ್ಥಾನ ರಾಯಲ್ಸ್​​​ ಕೊನೆಯಲ್ಲಿ ಮುಗ್ಗರಿಸಿತು. ಆರ್​​​ಸಿಬಿಯ ಪ್ಲಾನಿಂಗ್​​ ಮತ್ತು ಎಕ್ಸಿಕ್ಯುಷನ್​​ ಮುಂದೆ ರಾಯಲ್ಸ್​​ ಸಾಟಿಯಾಗಲಿಲ್ಲ. ದುಬೈನಲ್ಲಿ  ಜಯಗಳಿಸಿದ ಆರ್​​ಸಿಬಿ ಪ್ಲೇ-ಆಫ್​​ಗೆ ಮತ್ತಷ್ಟು ಹತ್ತಿರವಾಯಿತು.

ಬ್ಯಾಟಿಂಗ್​​​ ಆರಂಭಿಸಿದ ರಾಜಸ್ಥಾನ ರಾಯಲ್ಸ್​​ಗೆ ಸ್ಪೋಟಕ ಆರಂಭ ಸಿಕ್ಕಿತ್ತು. ಎವಿನ್​​ ಲೆವಿಸ್​​ ಮತ್ತು ಯಶಸ್ವಿ ಜೈಸ್ವಾಲ್​​ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಬೌಲರ್​​ಗಳ ಬೆವರಿಳಿಸಿದ್ದರು. ಸಿಕ್ಸರ್​​ಗಳು, ಬೌಂಡರಿಗಳು ಮಾಮೂಲು ಅನ್ನುವಂತಾಗಿದೆ. ಮೊದಲ ಆರು ಓವರುಗಳಲ್ಲೇ ರಾಯಲ್ಸ್​​ 56 ರನ್​​​ ಸೇರಿಸಿತ್ತು. ಆರ್​​ಸಿಬಿಗೆ ಮೊದಲ ಯಶಸ್ಸು ಸಿಕ್ಕಿದ್ದು 9ನೇ ಓವರ್​​ನಲ್ಲಿ.  ಜೈಸ್ವಾಲ್​​​ 22 ಎಸೆತಗಳಲ್ಲಿ 3 ಫೋರ್​​ ಮತ್ತು 2 ಸಿಕ್ಸರ್​​​ ನೆರವಿನಿಂದ 31 ರನ್​​ಗಳಿಸಿದ್ದಾಗ ಡ್ಯಾನ್​​ ಕ್ರಿಶ್ಚಿಯನ್​​ ಎಸೆತದಲ್ಲಿ ಔಟಾದರು. ಇದು ರಾಯಲ್ಸ್​​ ಕುಸಿತಕ್ಕೆ ವೇದಿಕೆ ಒದಗಿಸಿಕೊಟ್ಟಿತ್ತು.

ಲೆವಿಸ್​​ ಮತ್ತು ಸಂಜು ಸ್ಯಾಮ್ಸನ್​​ ಕೂಡ ಅಪಾಯಕಾರಿ ಆಗಿದ್ದರು. ಆದರೆ 5 ಫೋರ್​​, 3 ಸಿಕ್ಸರ್​​ ನೆರವಿನಿಂದ 37 ಎಸೆತಗಳಲ್ಲಿ 58 ರನ್​​ ಸಿಡಿಸಿದ್ದ ಲೆವಿಸ್​​ ಗಾರ್ಟನ್​​​ಗೆ ವಿಕೆಟ್​​ ಒಪ್ಪಿಸಿದ್ರು. ಇವರ ಬೆನ್ನ ಹಿಂದೆಯೇ 19 ರನ್​​ಗಳಿಸಿದ್ದ ಸಂಜಯ ಸ್ಯಾಮ್ಸನ್​​ ಶಹಬಾಝ್​ ಅಹ್ಮದ್​​ ಮ್ಯಾಜಿಕ್​​ಗೆ ಬಲಿಯಾದ್ರು. ಚಹಲ್​​ ಲೊಮ್ರೊರ್​​ ಮತ್ತು ಲಿವಿಂಗ್​​ ಸ್ಟೋನ್​​ ವಿಕೆಟ್​​ ಪಡೆದು ರಾಯಲ್ಸ್​​ಗೆ ಶಾಕ್​​ ನೀಡಿದ್ರು. ಹರ್ಷಲ್​ ಪಟೇಲ್​​​ ಪರಾಗ್​​, ಮೊರಿಸ್​​ ಮತ್ತು ಸಕಾರಿಯಾ ವಿಕೆಟ್​ ಹಾರಿಸಿದ್ರು. 10 ಓವರುಗಳಲ್ಲಿ 91ರನ್​​ಗಳಿಸಿದ್ದ ರಾಯಲ್ಸ್​​​​ ಕೊನೆಯಲ್ಲಿ ಗಳಿಸಿದ್ದು 149 ರನ್​​ ಮಾತ್ರ.  ಆರ್​​ಸಿಬಿ ಬೌಲಿಂಗ್​​ನಲ್ಲಿ ಪಟೇಲ್​​ 3 ವಿಕೆಟ್​​ ಪಡೆದರೆ, ಚಹಲ್​​ ಮತ್ತು ಶಹಬಾಝ್​​ ತಲಾ 2 ವಿಕೆಟ್​​​ ಹಂಚಿಕೊಂಡರು.

Evin Lewis  Rajasthan Royals ipl 2021 saakshatvಗುರಿ ಬೆನ್ನಟ್ಟಿದ ರಾಯಲ್​ ಚಾಲೆಂಜರ್ಸ್​ ಮೊದಲ ಓವರ್​​ನಲ್ಲೇ ಅಬ್ಬರದ ಆಟಕ್ಕೆ ಕೈ ಹಾಕಿತ್ತು. ವಿರಾಟ್​​ ಕೊಹ್ಲಿ, ಮೊರಿಸ್​​ ಓವರ್​​ನಲ್ಲಿ 3 ಬೌಂಡರಿ ಸಿಡಿಸಿ ಅಬ್ಬರಿಸಿದರು. ಪಡಿಕಲ್​ಕೂಡ ಮಿಂಚಿನ ಆಟ ಆಡಿದ್ರು. ಈ ಜೋಡಿ 48 ರನ್​​ಗಳನ್ನು ಸೇರಿಸಿತ್ತು. ಈ ಹಂತದಲ್ಲಿ ಮುಸ್ತಫಿಝುರ್​​ 22 ರನ್​​ಗಳಿಸಿದ್ದ ಪಡಿಕಲ್​​ ವಿಕೆಟ್​​​ ಪಡೆದು ಬ್ರೇಕ್​​​ ಒದಗಿಸಿಕೊಟ್ಟರು. ಇಲ್ಲದ ರನ್​​ ಕದಿಯಲು ಹೋಗಿ ವಿರಾಟ್​​ ಕೊಹ್ಲಿ 25 ರನ್​​ಗಳಿಸಿದ್ದಾಗ ರನೌಟ್​​ ಆದರು.

ಶ್ರೀಕರ್​​ ಭರತ್​​ ಮತ್ತು ಗ್ಲೆನ್​​ ಮ್ಯಾಕ್ಸ್​​ ವೆಲ್​​​​ ಇನ್ನಿಂಗ್ಸ್​​ ಬೆಳೆಸಿದ್ರು. ಭರತ್​​ 35 ಎಸೆತಗಳಲ್ಲಿ 44 ರನ್​​ಗಳಿಸಿ ಔಟಾದರೂ ಆರ್​​ಸಿಬಿಯ ಬ್ಯಾಟಿಂಗ್​​ ಲೈನ್​​ ಅಪ್​​ನಲ್ಲಿ ಮಿಂಚಿದರು. ಆದರೆ ಮ್ಯಾಕ್ಸ್​ವೆಲ್​​ ಅಬ್ಬರಿಸಿದ್ದು ಮಾತ್ರವಲ್ಲದೆ ಅಜೇಯ ಅರ್ಧಶತಕವನ್ನೂ ಗಳಿಸಿದರು. ಆರ್​​ಸಿಬಿ ಇನ್ನೂ 17 ಎಸೆತಗಳು ಬಾಕಿ ಇರುವಂತೆ ಪಂದ್ಯ ಗೆದ್ದು ಬೀಗಿತು. ಮ್ಯಾಕ್ಸ್​​ವೆಲ್​​ 30 ಎಸೆತಗಳಲ್ಲಿ ಅಜೇಯ 50 ರನ್​​ಗಳಿಸಿ ಮಿಂಚಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd