ಐಪಿಎಲ್ 2021- ಹ್ಯಾಟ್ರಿಕ್ ಪ್ರಶಸ್ತಿಯ ಕನಸಿನಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ಫುಲ್ ಡಿಟೇಲ್ಸ್..!

1 min read
mumbai indians ipl 2021 rohith sharma saakshatv

ಐಪಿಎಲ್ 2021- ಹ್ಯಾಟ್ರಿಕ್ ಪ್ರಶಸ್ತಿಯ ಕನಸಿನಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ಫುಲ್ ಡಿಟೇಲ್ಸ್..!

ಐಪಿಎಲ್ ನ ಅತ್ಯಂತ ಬಲಿಷ್ಠ ಹಾಗೂ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್.. ಒಂದಲ್ಲ ಐದು ಬಾರಿ ಚಾಂಪಿಯನ್‍ಪಟ್ಟಕ್ಕೇರಿರುವ ತಂಡ ಎಂಬ ಹೆಗ್ಗಳಿಕೆ ಅಂಬಾನಿ ಹುಡುಗರದ್ದು.
13 ಆವೃತ್ತಿಗಳಲ್ಲಿ 2013, 2015, 2017, 2019, 2020ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ರೋಹಿತ್ ಶರ್ಮಾ ನಾಯಕತ್ವದ ವಹಿಸಿಕೊಂಡ ಬಳಿಕ ಮುಂಬೈ ಇಂಡಿಯನ್ಸ್ ಮುಗ್ಗರಿಸಿದ್ದು ಮೂರು ಬಾರಿ ಮಾತ್ರ. ಎಂಟು ಬಾರಿ ಇದೀಗ 9ನೇ ಬಾರಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇನ್ನುಳಿದಂತೆ 2008ರಿಂದ 2012ರವರೆಗೆ ಮುಂಬೈ ಇಂಡಿಯನ್ಸ್ ಲೀಗ್ ಹಂತಕ್ಕೆ ಸೀಮಿತವಾಗಿತ್ತು. ಹಾಗೇ ನೋಡಿದ್ರೆ 13 ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ 8 ಬಾರಿ ಲೀಗ್ ಹಂತದಲ್ಲೇ ಮುಗ್ಗರಿಸಿಬಿದ್ದಿದೆ. ಆದ್ರೆ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಐಪಿಎಲ್ ನ ಬಲಿಷ್ಠ ಹಾಗೂ ಯಶಸ್ವಿ ತಂಡ ಎಂದೇ ಖ್ಯಾತಿ ಪಡೆದಿದೆ.

ಕಳೆದ 13 ಐಪಿಎಲ್ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 204 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 120 ಪಂದ್ಯಗಳಲ್ಲಿ ಜಯ ಸಾಧಿಸಿದೆ. 83 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ.
ಏಳು ನಾಯಕರನ್ನು ಕಂಡಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಲಕ್ಕಿ ಕ್ಯಾಪ್ಟನ್. ರೋಹಿತ್ 121 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 72 ಪಂದ್ಯಗಳಲ್ಲಿ ಜಯ ಹಾಗೂ 45 ಪಂದ್ಯಗಳಲ್ಲಿ ಸೋಲು ಕಂಡಿದೆ.

2021ರ ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ತಂಡ

ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ (ವಿಕೆಟ್ ಕೀಪರ್), ಕ್ರಿಸ್ ಲಿಯಾನ್, ಆನ್ಮೋಲ್ ಪ್ರೀತ್ ಸಿಂಗ್, ಸೌರಬ್ ತಿವಾರಿ, ಆದಿತ್ಯ ತಾರೆ, ಕಿರಾನ್ ಪೋಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅಂಕುಲ್ ರಾಯ್, ಜಸ್ಪ್ರಿತ್ ಬೂಮ್ರಾ, ಟ್ರೆಂಟ್ ಬೋಲ್ಟ್, ರಾಹುಲ್ ಚಾಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಶೀನ್ ಖಾನ್ (ಖರೀದಿ ಮಾಡಿದ ಆಟಗಾರರು), ನಥಾನ್ ಕಲ್ಟರ್ ನಿಲ್, ಆಡಮ್ ಮಿಲ್ನೆ, ಪಿಯೂಷ್ ಚಾವ್ಲಾ, ಜೇಮ್ಸ್ ನಿಶಾಮ್, ಯುಧಿವಿರ್ ಚರಾಕ್, ಮಾಕ್ರೊ ಜನ್ಸನ್, ಅರ್ಜುನ್ ತೆಂಡುಲ್ಕರ್

#IndianPremierLeague #ipl2021 #rohithsharma #saakshatv #sports #cricket#t-20cricket #suryakkumaryadav #ishankishan

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd