ಐಪಿಎಲ್ 2021 : ಇಂದಿನ ಪಂದ್ಯದಲ್ಲಿ ಯಾರಿಗೆ ಸಿಹಿ ಯಾರಿಗೆ ಕಹಿ..?
2021ನೇ ಸಾಲಿನ ಐಪಿಎಲ್ ನಲ್ಲಿ ಇಂದು ಮೊದಲ ಪಂದ್ಯ ಸೋತ ಮುಂಬೈ ಇಂಡಿಯನ್ಸ್ ಹಾಗೂ ಮೊದಲ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಕೊಲ್ಕತ್ತಾ ನೈಟ್ ರೈಡರ್ ತಂಡಗಳು ಮುಖಾಮುಖಿಯಾಗಲಿವೆ. ಹ್ಯಾಟ್ರಿಕ್ ಕಪ್ ಮೇಲೆ ಕಣ್ಣಿಟ್ಟಿರುವ ಮುಂಬೈ ತಂಡ ಈ ಪಂದ್ಯದಲ್ಲಿ ಗೆದ್ದು ಗೆಲುವಿನ ಟ್ರ್ಯಾಕ್ ಗೆ ಮರಳಲು ಪ್ಲಾನ್ ಮಾಡಿಕೊಂಡಿದೆ. ಇತ್ತ ಮೊದಲ ಪಂದ್ಯದಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿರುವ ಕೆಕೆಆರ್ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.
ಹೆಡ್ ಟು ಹೆಡ್
ಐಪಿಎಲ್ ಈ ಎರಡೂ ತಂಡಗಳು ಈವರೆಗೂ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ತಂಡ 21 ಮ್ಯಾಚ್ ಗಳಲ್ಲಿ ಗೆಲುವು ಸಾಧಿಸಿದೆ. ಕೆಕೆಆರ್ ಆರು ಪಂದ್ಯಗಳನ್ನ ಮಾತ್ರ ಗೆದ್ದುಕೊಂಡಿದೆ.
ಗ್ರೌಂಡ್ ರಿಪೋರ್ಟ್ ಹೇಗಿದೆ
ಇಂದಿನ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಎರಡೂ ತಂಡಗಳು ಈ ಪಿಚ್ ನಲ್ಲಿ ಒಂದೊಂದು ಪಂದ್ಯವನ್ನ ಆಡಿದೆ. ಮುಂಬೈ ಸೋಲುಂಡಿದೆ. ಕೆಕೆಆರ್ ಗೆಲುವು ಸಾಧಿಸಿದೆ. ಇಲ್ಲಿ ಮೊದಲ 10 ಓವರ್ ಗಳು ತುಂಬಾ ನಿರ್ಣಾಯಕವಾಗಿದೆ. ಯಾಕೆಂದ್ರೆ ಮೊದಲ 10 ಓವರ್ ಗಳಲ್ಲಿ ಹೆಚ್ಚು ರನ್ ಗಳನ್ನ ಗಳಿಸಿದ್ರೆ ಬೃಹತ್ ಮೊತ್ತವನ್ನ ಗಳಿಸಬಹುದು. ಇದು ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ತಂಡ ಮಾಡಿ ತೋರಿಸಿದೆ.
ಬಲಾಬಲಗಳೇನು..?
ಕೆಕೆಆರ್ : ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಮುಖ್ಯವಾಗಿ ನಿತೀಶ್ ರಾಣಾ, ರಾಹುಲ್ ತ್ರಿಪಾಟಿ ಎದುರಾಳಿಗೆ ನಕ್ಷತ್ರಗಳನ್ನ ತೋರಿಸಿದರು. ಇನ್ನ ಮಿಡಲ್ ಆರ್ಡರ್ ನಲ್ಲಿ ದಿನೇಶ್ ಕಾರ್ತಿಕ್ ಸ್ಕೋರ್ ಬೋರ್ಡ್ ವೇಗವನ್ನ ಹೆಚ್ಚಿಸಿದರು.
ಇನ್ನ ಬೌಲಿಂಗ್ ವಿಭಾಗದಲ್ಲೂ ಸಹ ಪ್ರಸಿದ್ಧ ಕ್ರಿಷ್ಣ, ವರುಣ್ ಚಕ್ರವರ್ತಿ, ಶಕೀಬ್ ಎಲ್ಲರೂ ಸಹ ಒಳ್ಳೆ ಟಚ್ ನಲ್ಲಿ ಇದ್ದಾರೆ.
ಮುಂಬೈ : ಕಳೆದ ಪಂದ್ಯದಲ್ಲಿ ಸೋತರೂ ಇಂದಿನ ಮ್ಯಾಚ್ ನಲ್ಲಿ ಬೌನ್ಸ್ ಬ್ಯಾಕ್ ಆಗುವ ಎಲ್ಲ ಸಾಧ್ಯತೆಗಳಿವೆ. ಆನ್ ಬೋರ್ಡ್ ಟೀಂ ಸಾಲಿಡ್ ಆಗಿದ್ದು, ಬ್ಯಾಟಿಂಗ್ ನಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದ್ರೆ ಸ್ಪಿನ್ ವಿಭಾಗದಲ್ಲಿ ವೀಕ್ ಇದೆ ಅಂತ ಅನಿಸುತ್ತಿದೆ.
ಬೆಸ್ಟ್ ಇಲೆವೆನ್
ಮುಂಬೈ : ಮುಂಬೈ ತಂಡ ಕಳೆದ ಪಂದ್ಯದಲ್ಲಿ ಆಡಿದ ತಂಡವೇ ಇವತ್ತಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಒಂದು ವೇಳೆ ಬದಲಾವಣೆ ಮಾಡಿದ್ರೆ ಡಿಕಾಕ್ ತಂಡಕ್ಕೆ ಬರಬಹುದು. ರಾಹುಲ್ ಚಹಾರ್ ಬದಲು ಜಯಂತ್ ಯಾದವ್ ಅಥವಾ ಪಿಯೂಷ್ ಚಾವ್ಲಾಗೆ ಚಾನ್ಸ್ ಕೊಡಬಹುದು.
ಇನ್ನುಳಿದಂತೆ ರೋಹಿತ್, ಇಶಾನ್, ಸೂರ್ಯ ಕುಮಾರ್, ಹಾರ್ದಿಕ್ ಪಾಂಡ್ಯ, ಪೋಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೋ ಜೆನ್ಸನ್, ಬೋಲ್ಟ್, ಬೂಮ್ರಾ ತಂಡದಲ್ಲಿ ಇರ್ತಾರೆ.
ಕೆಕೆಆರ್ : ಕೊಲ್ಕತ್ತಾ ತಂಡ ಕೂಡ ಯಾವುದೇ ಬದಲಾವಣೆಗಳಿಲ್ಲದೇ ಇವತ್ತಿನ ಪಂದ್ಯದಲ್ಲಿ ಆಡಬಹುದು. ಕಳೆದ ಪಂದ್ಯದ ತಂಡವನ್ನೇ ಇವತ್ತಿನ ಪಂದ್ಯದಲ್ಲಿ ಕಣಕ್ಕಿಸುವ ಸಾಧ್ಯತೆಗಳಿವೆ. ಆರಂಭಿಕರಾಗಿ ಗಿಲ್, ಟ್ರಿಪಾಟಿ, ರಾಣಾ, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ರಸೆಲ್, ಶಕೀಬ್, ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಿದ್ಧ್ ಕ್ರಿಷ್ಣ, ವರುಣ್ ಚಕ್ರವರ್ತಿ
ವಿನ್ನಿಂಗ್ ಚಾನ್ಸಸ್
ಮುಂಬೈ 50% ಕೊಲ್ಕತ್ತಾ 50%