ಐಪಿಎಲ್ 2021- ಸಿಎಸ್ ಕೆ ಹೊಸ ಜೆರ್ಸಿ ಅನಾವರಣ.. ಭಾರತೀಯ ಸೇನೆಗೆ ಗೌರವ 

1 min read

ಐಪಿಎಲ್ 2021- ಸಿಎಸ್ ಕೆ ಹೊಸ ಜೆರ್ಸಿ ಅನಾವರಣ.. ಭಾರತೀಯ ಸೇನೆಗೆ ಗೌರವ 

ipl 2021 New CSK jersey salutes India’s soldiers

14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಹೊಸ ಧ್ಯೇಯವನ್ನಿಟ್ಟುಕೊಂಡಿರುವ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿಯಲ್ಲಿ ಭಾರತೀಯ ಸೇನೆಗೆ ಗೌರವ ನೀಡಿದೆ. ಸಿಎಸ್ ಕೆ ಜೆರ್ಸಿಯ ಭುಜ ಮೇಲೆ ಭಾರತೀಯ ಸೇನೆಯ ಸಶಸ್ತ್ರ ಪಡೆಯ ಯೂನಿಫಾರ್ಮ್ ಬಣ್ಣವನ್ನು ನೋಡಬಹುದಾಗಿದೆ. ಈ ಮೂಲಕ ಭಾರತೀಯ ಸೇನೆಗೆ ಸಿಎಸ್ ಕೆ ತಂಡ ಗೌರವ ಸಲ್ಲಿಸಿದೆ.
ಅಂದ ಹಾಗೇ 2008ರ ನಂತರ ಚೆನ್ನೈ ಸೂಪರ್ ಕಿಂಗ್ಸ್ ಇದೇ ಮೊದಲ ಬಾರಿ ಜೆರ್ಸಿಯಲ್ಲಿ ಬದಲಾವಣೆ ಮಾಡಿದೆ. ಭಾರತೀಯ ಸೇನೆಗೆ ಗೌರವ ನೀಡುವುದರ ಜೊತೆಗೆ ಸಿಎಸ್ ಕೆ ipl csk ipl 2021 saakshatv m.s. dhoniತಂಡ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಇದರ ಹೆಮ್ಮೆಯ ಪ್ರತಿಕವಾಗಿ ಮೂರು ಸ್ಟಾರ್ ಗಳನ್ನು ಜೆರ್ಸಿಯಲ್ಲಿ ನೋಡಬಹುದಾಗಿದೆ.
ಕಳೆದ 13 ಐಪಿಎಲ್ ಗಳಲ್ಲಿ ಸಿಎಸ್‍ಕೆ ತಂಡ 10 ಬಾರಿ ಪ್ಲೇ ಆಫ್ ಗೆ ಎಂಟ್ರಿಕೊಟ್ಟಿದೆ. ಅಲ್ಲದೆ ಎಂಟು ಬಾರಿ ಫೈನಲ್ ಪ್ರವೇಶಿಸಿದೆ. ಮೂರು ಬಾರಿ ಪ್ರಶಸ್ತಿ ಹಾಗೂ ಐದು ಬಾರಿ ರನ್ನರ್ ಅಪ್ ಆಗಿದೆ.
ಧೋನಿ ಸಾರಥ್ಯದ ಸಿಎಸ್ ಕೆ ತಂಡ ಕಳೆದ ಐಪಿಎಲ್ ನಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಆದ್ರೆ ಈ ಬಾರಿ ಮತ್ತೊಮ್ಮೆ ಐಪಿಎಲ್ ನಲ್ಲಿ ಪಾರುಪತ್ಯ ಸ್ಥಾಪಿಸುವ ಹಂಬಲದಲ್ಲಿದೆ.

#ipl2021 #New CSK jersey #Indiansoldiers #mahendrasinghdhoni #msdhoni #sureshraina #Indian Premier League #ipl #saakshatv #saakshatvsports #sports #cricket #ChennaiSuperKings

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd