ಐಪಿಎಲ್ 2021 : ಹ್ಯಾಟ್ರಿಕ್ ಬಾರಿಸುತ್ತಾ ಚೆನ್ನೈ.. ಗೆಲುವಿನ ಟ್ರ್ಯಾಕ್ ಗೆ ಮರಳುತ್ತಾ ಕೆಕೆಆರ್

1 min read
IPL 2021

ಐಪಿಎಲ್ 2021 : ಹ್ಯಾಟ್ರಿಕ್ ಬಾರಿಸುತ್ತಾ ಚೆನ್ನೈ.. ಗೆಲುವಿನ ಟ್ರ್ಯಾಕ್ ಗೆ ಮರಳುತ್ತಾ ಕೆಕೆಆರ್

ಐಪಿಎಲ್ ದಂಗಲ್ ನ ಇವತ್ತಿನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈ ತಂಡ ಮೊದಲ ಮ್ಯಾಚ್ ಸೋತರೂ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನ ಗೆದ್ದು ಆತ್ಮವಿಶ್ವಾಸವನ್ನ ಹೆಚ್ಚಿಸಿಕೊಂಡಿದೆ. ಕೊಲ್ಕತ್ತಾ ತಂಡದ ವಿಚಾರಕ್ಕೆ ಬಂದ್ರೆ ಮೊದಲ ಮ್ಯಾಚ್ ಗೆದ್ದು ಎರಡು ಪಂದ್ಯಗಳನ್ನ ಸೋತಿದೆ.

ಹೆಡ್ ಟು ಹೆಡ್ ರಿಕಾರ್ಡ್ ನೋಡಿದ್ರೆ ಚೆನ್ನೈ ಮೇಲುಗೈ ಸಾಧಿಸಿದೆ. ಈ ಎರಡೂ ತಂಡಗಳು ಐಪಿಎಲ್ ನಲ್ಲಿ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ 14 ಬಾರಿ ಗೆಲುವು ಸಾಧಿಸಿದ್ದರೇ, ಕೆಕೆಆರ್ 2 ಬಾರಿ ಚೆನ್ನೈ ತಂಡವನ್ನ ಮಣಿಸಿದೆ.

ಗ್ರೌಂಡ್ ರಿಪೋರ್ಟ್

ಇಂದಿನ ಪಂದ್ಯ ಮುಂಬೈನ ವಾಂಖೇಡೆ ಸ್ಟೆಡಿಯಂ ನಲ್ಲಿ ನಡೆಯಲಿದೆ. ನಾವೇಲ್ಲ ನೋಡಿರುವಂತೆ ರನ್ ಮಳೆ ಸುರಿಯುತ್ತಿದೆ. ಆದ್ದರಿಂದ ಇವತ್ತಿನ ಪಂದ್ಯ ಕೂಡ ಬಿಗ್ ಸ್ಕೋರ್ ಮ್ಯಾಚ್ ಆಗುವುದರಲ್ಲಿ ಡೌಟೇ ಇಲ್ಲ. ಇದೇ ವೇಳೆ ಫಾಸ್ಟ್ ಬೌಲರ್ ಗಳಿಗೂ ಪಿಚ್ ಸಪೋರ್ಟ್ ಮಾಡುತ್ತೆ. ಆದ್ರೆ ಸೆಕೆಂಡ್ ಬೌಲಿಂಗ್ ಮಾಡುವವರಿಗೆ ಡ್ಯೂ ಫ್ಯಾಕ್ಟರ್ ಇರುವುದರಿಂದ ಸ್ವಲ್ಪ ಸಮಸ್ಯೆ ಆಗುವ ಚಾನ್ಸನ್ ಇದೆ. ಟಾಸ್ ವಿನ್ ಆದ ಕ್ಯಾಪನ್ ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಳ್ತಾರೆ.

IPL 2021ಬಲಾಬಲಗಳೇನು..?

ಕೆಕೆಆರ್ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಸಮಸ್ಯೆಗಳ ಸರಮಾಲೆಯೇ ಹೆಚ್ಚಿದೆ. ಮೊದಲ ಮೂರು ದೇಶಿ ಪ್ರತಿಭೆಗಳನ್ನ ಬಿಟ್ಟರೇ ಉಳಿದ ಯಾರು ಫಾರ್ಮ್ ನಲ್ಲಿಲ್ಲ. ಮುಖ್ಯವಾಗಿ ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ರಸಲ್ ಯಾರೂ ಪಾರ್ಮ್ ನಲ್ಲಿಲ್ಲ.

ಬೌಲಿಂಗ್ ನಲ್ಲಿ ವರುಣ್, ಚಕ್ರವರ್ತಿ, ಶಕೀಬ್ ಮ್ಯಾಜಿಕ್ ಮಾಡ್ತಿರೋದು ತಂಡದ ಬಲವಾಗಿದೆ. ಆದ್ರೆ ಬ್ಯಾಟಿಂಗ್ ವೀಕ್ ಇದೆ.

ಚೆನ್ನೈ ವಿಚಾರಕ್ಕೆ ಬಂದ್ರೆ ಆರಂಭದಲ್ಲಿ ಬೌಲಿಂಗ್ ವೀಕ್ ಅನಿಸಿದ್ರೂ ಈಗ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಸ್ಟ್ರಾಂಗ್ ಆಗಿದೆ. ಮುಖ್ಯವಾಗಿ ಬ್ಯಾಟಿಂಗ್ ದೆಫ್ತ್ ತುಂಬಾ ಇದೆ. ಶರ್ದೂಲ್ ಠಾಕೂರ್ ಹತ್ತನೇ ಬ್ಯಾಟ್ಸ್ ಮೆನ್ ಆಗಿ ಆಡೋದು ತಂಡಕ್ಕೆ ಪ್ಲಸ್ ಪಾಯಿಂಟ್. ಇನ್ನುಳಿದಂತೆ ಮೊಯಿನ್ ಅಲಿ, ಸ್ಯಾಮ್ ಕರನ್, ಜಡೇಜಾ, ಬ್ರಾವೋ ಆಲ್ ರೌಂಡರ್ ಆಟ ತಂಡದ ಮೇನ್ ಸ್ಟ್ರೆಂಥ್ ಅಂತಾನೇ ಹೇಳಬಹುದು.

ಆದ್ರೆ ಓಪನರ್ ಗಾಯಕ್ವಾಡ್ ಫೈಲ್ ಆಗುತ್ತಿರುವುದು, ಜೊತೆಗೆ ದೋನಿ ಬ್ಲಾಸ್ಟ್ ಆಗದೇ ಇರುವುದು ಎಲ್ಲೋ ಒಂದು ಕಡೆ ತಂಡಕ್ಕೆ ಮೈನಸ್ ಪಯಿಂಟ್ ಅಂತ ಹೇಳಬಹುದು.

ಇನ್ನ ಬೌಲಿಂಗ್ ನಲ್ಲಿ ಈಗಲೂ ವಿಕೆಟ್ ಟೇಕಿಂಗ್ ಫಾಸ್ಟ್ ಬೌಲರ್ ನ ಕೊರತೆ ಕಾಣ್ತಿದೆ. ದೀಪಕ್ ಚಹಾರ್ ಬಿಟ್ಟರೇ ಬೇರೆ ಬೌಲರ್ ವಿಕೆಟ್ ಗೆ ಪರದಾಡುತ್ತಿದ್ದಾರೆ.

ಬೆಸ್ಟ್ ಇಲೆವೆನ್

ಕೆಕೆಆರ್ ತಂಡದಲ್ಲಿ ಒಂದು ಚೇಂಜ್ ಆಗಬಹುದು. ಅದು ಶಕೀಲ್ ಬದಲಾಗಿ ಸುನೀಲ್ ನರೈನ್ ಇವತ್ತು ಆಡಬಹುದು. ಇನ್ನುಳಿದಂತೆ ಶುಭ್ ಮನ್ ಗಿಲ್, ರಾಹುಲ್ ತ್ರಿಪಾಟಿ, ನಿಶೀಶ್ ರಾಣಾ, ದಿನೇಶ್ ಕಾರ್ತಿಕ್, ಮಾರ್ಗನ್,ರಸೆಲ್, ಸುನೀಲ್ ನರೈನ್, ಪ್ಯಾಟ್ ಕಮ್ಮಿನ್ಸ್,ಹರ್ಭಜನ್, ಪ್ರಸಿದ್ಧ ಕೃಷ್ಣ, ವರುಣ್ ಚಕ್ರವರ್ತಿ

ಇನ್ನ ಚೆನ್ನೈ ತಂಡದ ವಿಚಾರಕ್ಕೆ ಬಂದ್ರೆ ಓಪನರ್ ರುತುರಾಜ್ ಗಾಯಕ್ವಾಡ್ ಬದಲಾಗಿ ಕನ್ನಡಿಗ ಉತ್ತಪ್ಪ ಅವರನ್ನ ಕಣಕ್ಕಿಳಿಸುವ ಸಾಧ್ಯತೆ ಇದೆ. ಯಾಕೆಂದ್ರೆ ಗಾಯಕ್ವಾಡ್ ಆಡಿದ ಎಲ್ಲ ಪಂದ್ಯಗಳಲ್ಲಿ ಫೇಲ್ ಆಗುತ್ತಿದ್ದಾರೆ. ಈ ಕಾರಣಕ್ಕಾಗಿ ಉತ್ತಪ್ಪ ಅವರನ್ನ ಆಡಿಸುವ ಸಾಧ್ಯತೆಗಳಿವೆ. ಇನ್ನುಳಿದಂತೆ ಫಾಪ್ ಡುಪ್ಲಸಿಸ್,ಮೊಹಿನ್ ಅಲಿ, ಸುರೇಶ್ ರೈನಾ,ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ, ಸ್ಯಾಮ್ ಕರಣ್, ಬ್ರಾವೋ, ಶರ್ದೂಲ್ ಠಾಕೂರ್, ದೀಪಕ್ ಚಹಾರ್ ತಂಡದಲ್ಲಿ ಇರ್ತಾರೆ.

ವಿನ್ನಿಂಗ್ ಚಾನ್ಸ್.
ಇಂದಿನ ಪಂದ್ಯದಲ್ಲಿ ಚೆನ್ನೈ ತಂಡ ಗೆಲ್ಲುವ ಫೇವರೇಟ್ ತಂಡವಾಗಿದೆ. ಕೆಕೆಆರ್ ತಂಡಕ್ಕೆ ಹೊಲಿಕೆ ಮಾಡಿಕೊಂಡರೇ ಚೆನ್ನೈ ಸ್ಟ್ರಾಂಗ್ ಇದೆ. ಮುಖ್ಯವಾಗಿ ಟಾಸ್ ಕೂಡ ಪ್ರಮುಖ ಪಾತ್ರವಹಿಸುತ್ತೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd