ಐಪಿಎಲ್ 2021- ಬಲಿಷ್ಠ ಮುಂಬೈಗೆ ಮುಖಭಂಗ… ಪಂಜಾಬ್ ಕಿಂಗ್ಸ್ ಗೆ ಭರ್ಜರಿ ಜಯ

1 min read
k.l. rahul punjab kings saakshatv ipl 2021

ಐಪಿಎಲ್ 2021- ಬಲಿಷ್ಠ ಮುಂಬೈಗೆ ಮುಖಭಂಗ… ಪಂಜಾಬ್ ಕಿಂಗ್ಸ್ ಗೆ ಭರ್ಜರಿ ಜಯ

Chris Gayle punjab kings ipl 2021 saakshatvನಾಯಕ ಕೆ.ಎಲ್. ರಾಹುಲ್ ಅಜೇಯ 60 ರನ್ ರನ್ ಮತ್ತು ಕ್ರಿಸ್ ಗೇಲ್ ಅವರ ಅಜೇಯ 43 ರನ್ ಗಳ ನೆರವನ್ನು ಪಡೆದ ಪಂಜಾಬ್ ಕಿಂಗ್ಸ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 17ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು 9 ವಿಕೆಟ್ ಗಳಿಂದ ಪರಾಭವಗೊಳಿಸಿದೆ.
ಚೆನ್ನೈ ನಲ್ಲಿ ಗೆಲ್ಲಲು 132 ರನ್ ಗಳ ಸವಾಲನ್ನು ಪಡೆದ ಪಂಜಾಬ್ ಕಿಂಗ್ಸ್ 17.4 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್ ತಂಡ ಮುಂಬೈ ತಂಡದ ಸವಾಲನ್ನು ಸುಲಭವಾಗಿಯೇ ಗುರಿ ಮುಟ್ಟಿತ್ತು. ಪಂಜಾಬ್ ಕಿಂಗ್ಸ್ ತಂಡದ ಪರ ಕೆ.ಎಲ್. ರಾಹುಲ್ 52 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 60 ರನ್ ಗಳಿಸಿದ್ರು. ಆರಂಭಿಕ ಮಯಾಂಕ್ ಅಗರ್ ವಾಲ್ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಗಳ ನೆರವಿನಿಂದ 25 ರನ್ ಸಿಡಿಸಿದ್ರೆ, ಕ್ರಿಸ್ ಗೇಲ್ 35 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳನ್ನು ದಾಖಲಿಸಿ ಅಜೇಯ 43 ರನ್ ಗಳಿಸಿದ್ರು. ಪಂಜಾಬ್ ಕಿಂಗ್ಸ್ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ಬೌಲರ್ ಗಳು ನಿರುತ್ತರರಾದ್ರು.

IPL 2021 – Rahul, Gayle steer Punjab to big win over Mumbai

rohith sharma ipl 2021 saakshatv mumbai indiansಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು.
ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕ ರೋಹಿತ್ ಶರ್ಮಾ ಆಕರ್ಷಕ 63 ರನ್ ದಾಖಲಿಸಿದ್ರು. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್ 33 ರನ್ ಹಾಗೂ ಕಿರಾನ್ ಪೊಲಾರ್ಡ್ ಅಜೇಯ 16 ರನ್ ಗಳಿಸಿದ್ರು. ಹಾಗೇ ಆರಂಭಿಕ ಕ್ವಿಂಟನ್ ಡಿ ಕಾಕ್ 3 ರನ್, ಇಶಾನ್ ಕಿಶಾನ್ 6 ರನ್ ಹಾಗೂ ಹಾರ್ದಿಕ್ ಪಾಂಡ್ಯ 1 ರನ್ ಮತ್ತು ಕೃನಾಲ್ ಪಾಂಡ್ಯ 3 ರನ್ ಗೆ ಸೀಮಿತವಾದ್ರು.
ಪಂಜಾಬ್ ಕಿಂಗ್ಸ್ ತಂಡದಿಂದ ಮಹಮ್ಮದ್ ಶಮಿ ಮತ್ತು ರವಿ ಬಿಸ್ನೋಯ್ ತಲಾ ಎರಡು ವಿಕೆಟ್ ಉರುಳಿಸಿದ್ರು. ಮನಮೋಹಕ ಅಜೇಯ ಅರ್ಧಶತಕ ದಾಖಲಿಸಿದ ಕೆ.ಎಲ್. ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd