ಈ ಬೌಲರ್ ಅಂದ್ರೆ ‘ಮ್ಯಾಕ್ಸ್ ವೆಲ್ ಗೆ ಭಯವೋ ಭಯ’

1 min read
Maxwell

ಈ ಬೌಲರ್ ಅಂದ್ರೆ ‘ಮ್ಯಾಕ್ಸ್ ವೆಲ್ ಗೆ ಭಯವೋ ಭಯ’

ಈ ಬೌಲರ್ ಗಳ ಮುಂದೆ ಕಮಕ್ ಕಿಮ್ಮಕ್ ಅನ್ನೋಲ್ಲ ಮ್ಯಾಕ್ಸಿ

ಗ್ಲೇನ್ ಮ್ಯಾಕ್ಸ್ ವೆಲ್..! ಸದ್ಯ ಆರ್ ಸಿಬಿ ಪರ ಐಪಿಎಲ್ ನಲ್ಲಿ ರನ್ ದರ್ಬಾರು ನಡೆಸುತ್ತಿರುವ ಸಿಡಿಲಮರಿ. ಲೆಫ್ಟು ರೈಟು ಅಂತಾ ನೋಡದೇ ಡೋಂಟ್ ಕೇರ್ ಅಂತಾ ಬ್ಯಾಟ್ ಬೀಸುವ ಮ್ಯಾಕ್ಸ್ ವೆಲ್ ಆಟಕ್ಕೆ ಅವರೇ ಸಾಟಿ. ಪಿಚ್ ಯಾವುದೇ ಇರಲಿ, ಪರಿಸ್ಥಿತಿ ಹೇಗೆ ಇರಲಿ ಬಾಲ್ ಇರೋದೆ ಹೊಡೆಯೋಕೆ ಅಂತಾ ರಫ್ ಅಂಡ್ ಟಫ್ ಯಾಗಿ ಬ್ಯಾಟಿಂಗ್ ಮಾಡುವ ಮ್ಯಾಕ್ಸ್ ವೆಲ್ ಗೆ ಆರ್ ಸಿಬಿ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.

ಯೆಸ್ ಗ್ಲೆನ್ ಮ್ಯಾಕ್ಸ್ ವೆಲ್ ಇಸ್ ಬ್ಯಾಕ್..! ಹೊಡಿ ಹೊಡಿ ಮಗಾ ಹೊಡಿ..! ಈ ಸಲ ಕಪ್ ನಮ್ದೆ..! ಅಂತಾ ಆರ್ ಸಿನಿಯನ್ಸ್ ಕಾಲರ್ ಮೇಲೇತ್ತುಕೊಂಡು ಓಡಾಡುವಂತೆ ಮಾಡಿದೆ ಮ್ಯಾಕ್ಸ್ ವೆಲ್ ಆಟ. ಮ್ಯಾಕ್ಸ್ ವೆಲ್ ಸದ್ಯ ಆರ್ ಸಿಬಿಯ ಮೇನ್ ಸ್ಟ್ರೆಂಥ್. ಮ್ಯಾಕ್ಸ್ ವೆಲ್ ಸಿಡಿದು ನಿಂತ್ರೆ ಅಲ್ಲಿ ಬೌಲರ್ ಗಳ ಮಾರಣ ಹೋಮ ಗ್ಯಾರೆಂಟಿ..! ಕ್ರೀಸ್ ಗೆ ಕಚ್ಚಿನಿಂತ್ರೆ ಅವತ್ತು ಎದುರಾಳಿ ಬೌಲರ್ ಗಳಿಗೆ ಇರಲ್ಲ ವ್ಯಾರಂಟಿ..! ಮ್ಯಾಕ್ಸ್ ವೆಲ್ ಆಟಕ್ಕೆ ಬ್ರೇಕ್ ಹಾಕಲಾಗದೇ ಎದುರಾಳಿ ತಂಡ ಹೊಡೆಯಲೇಬೇಕು ಪಲ್ಟಿ..! ಇದು ಮ್ಯಾಕ್ಸ್ ವೆಲ್ ಆಟಕ್ಕಿರುವ ತಾಕತ್ತು. ಆದ್ರೆ ಐಪಿಎಲ್ ನಲ್ಲಿ ಮ್ಯಾಕ್ಸ್ ವೆಲ್ ಗೆ ಕಡಿವಾಣ ಹಾಕುವ ಬೌಲರ್ ಗಳೂ ಇದ್ದಾರೆ. ಆ ಬೌಲರ್ ಗಳ ಮುಂದೆ ಮ್ಯಾಕ್ಸ್ ವೆಲ್ ಫುಲ್ ಥಂಡಾ ಆಗಿಬಿಡುತ್ತಾರೆ.

Maxwell

ಹೌದು..! ಲೆಫ್ಟ್ ರೈಟ್ ಅಂತಾ ಬ್ಯಾಟ್ ಬೀಸುವ ಮ್ಯಾಕ್ಸ್ ವೆಲ್ ಕೆಲ ಬೌಲರ್ ಗಳ ಮುಂದೆ ಕಮಕ್ ಕಿಮ್ಮಕ್ ಅನ್ನೋಲ್ಲ. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲೂ ಸಾಭಿತಾಗಿದೆ. ಡಿಸಿ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್ ವೆಲ್ ಬೇಡ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಆರ್‍ಸಿಬಿ ಪರ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಮ್ಯಾಕ್ಸ್‍ವೆಲ್ 25 ರನ್ ಬಾರಿಸಿ 8.3ನೇ ಓವರ್‍ನಲ್ಲಿ ಅಮಿತ್ ಮಿಶ್ರಾ ಎಸೆತಕ್ಕೆ ಸ್ಟೀವ್ ಸ್ಮಿತ್‍ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.

ಮ್ಯಾಕ್ಸ್‍ವೆಲ್ ವಿಕೆಟ್ ಮಿಶ್ರಾಗೆ ಲಭಿಸುತ್ತಲೇ ಅವರ ಹೆಸರಿನಲ್ಲಿ ಕೆಟ್ಟ ದಾಖಲೆ ನಿರ್ಮಾಣವಾಗಿದೆ. ಐಪಿಎಲ್‍ನಲ್ಲಿ ಮಿಶ್ರಾಗೆ ಒಟ್ಟು 5 ಬಾರಿ ವಿಕೆಟ್ ಒಪ್ಪಿಸಿದ ದಾಖಲೆ ಮ್ಯಾಕ್ಸ್‍ವೆಲ್ ಹೆಸರಿಗೆ ಸೇರಿದೆ. ಮಿಶ್ರಾಗೆ ಅಲ್ಲದೆ ರವೀಂದ್ರ ಜಡೇಜಾಗೂ ಗ್ಲೆನ್ 5 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಇದಲ್ಲದೆ ಜಸ್‍ಪ್ರೀತ್ ಬೂಮ್ರಾಗೂ ಮಾಕ್ಸ್ ವೆಲ್ 4 ಬಾರಿ ವಿಕೆಟ್ ನೀಡಿದ್ದಾರೆ. ಈ ಅಂಕಿಅಂಶಗಳನ್ನ ನೋಡಿದ್ರೆ ಗೊತ್ತಾಗುತ್ತಿದೆ ಈ ಬೌಲರ್ ಗಳೆಂದರೆ ಮ್ಯಾಕ್ಸಿಗೆ ಸ್ವಲ್ಪ ಅಡಲ್ ಅಂತಾ..! ಆದ್ರೆ ಮ್ಯಾಕ್ಸ್ ವೆಲ್ ಚಾಂಪಿಯನ್ ಟಿ 20 ಪ್ಲೇಯರ್, ಎಂತಹ ಪರಿಸ್ಥಿತಿಯಲ್ಲಾದ್ರೂ ಪಂದ್ಯದ ಫಲಿತಾಂಶವನ್ನ ಬದಲಿಸಬಲ್ಲ ಆಟಗಾರ ಅನ್ನೋದನ್ನ ನಾವಿಲ್ಲಿ ಮರೆಯಬಾರದು.

corona cases

ಮಹೇಶ್ ಎಂ ದಂಡು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd