ವಿರಾಟ್ ಕೊಹ್ಲಿ ದಾಖಲೆ ಸಮಗೊಳಿಸಿದ ಹಿಟ್ ಮ್ಯಾನ್ ರೋಹಿತ್

1 min read
virat kohli rohit sharma ipl 2021 saakshatv

ವಿರಾಟ್ ಕೊಹ್ಲಿ ದಾಖಲೆ ಸಮಗೊಳಿಸಿದ ಹಿಟ್ ಮ್ಯಾನ್ ರೋಹಿತ್

virat kohli rohit sharma ipl 2021 saakshatvಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಆಧಾರಸ್ತಂಭ. ಅದೇ ರೀತಿ ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮಾ ಬೆನ್ನುಲಬು.
ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಯಾದ್ರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಐದು ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಆದ್ರೆ ಸದ್ಯದ ಐಪಿಎಲ್ ನಲ್ಲಿ ಆರ್ ಸಿಬಿ ಸತತ ನಾಲ್ಕನೇ ಗೆಲುವು ದಾಖಲಿಸಿಕೊಂಡು ಅಗ್ರ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿದೆ. ಎರಡನ್ನು ಮಾತ್ರ ಗೆದ್ದಿದೆ.

ಇದ್ರ ಬೆನ್ನಲ್ಲೇ ಉಭಯ ತಂಡಗಳ ನಾಯಕರು ಈ ಬಾರಿಯ ಐಪಿಎಲ್ ನಲ್ಲಿ ದಾಖಲೆಗಳನ್ನು ಬರೆಯುತ್ತಿದ್ದಾರೆ.
ರಾಜಸ್ತಾನ ರಾಯಲ್ಸ್ ವಿರುದ್ಧ ಅಜೇಯ 72 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಆರು ಸಾವಿರ ರನ್ ದಾಖಲಿಸಿದ್ದ ಹಿರಿಮೆಗೂ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ 40ನೇ ಅರ್ಧಶತಕವನ್ನು ದಾಖಲಿಸಿದ್ದಾರೆ.
ಇನ್ನು ರೋಹಿತ್ ಶರ್ಮಾಗೆ (5230 ) ಐಪಿಎಲ್ ನಲ್ಲಿ ಆರು ಸಾವಿರ ರನ್ ದಾಖಲಿಸಲು ಇನ್ನಷ್ಟು ರನ್ ಗಳು ಬೇಕಿದೆ. ಆದ್ರೆ ವಿರಾಟ್ ಕೊಹ್ಲಿಯವರ 40ನೇ ಅರ್ಧಶತಕವನ್ನು ಸಮಗೊಳಿಸಲು ಯಶಸ್ವಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಧಶತಕ ದಾಖಲಿಸಿದ್ದ ರೋಹಿತ್ ಶರ್ಮಾ ಅವರ ಐಪಿಎಲ್ ನ ಅರ್ಧಶತಕಗಳ ಸಂಖ್ಯೆ ಕೂಡ 40ಕ್ಕೇರಿದೆ.
virat kohli rohit sharma ipl 2021 saakshatvವಿಶೇಷ ಅಂದ್ರೆ ವಿರಾಟ್ ಮತ್ತು ರೋಹಿತ್ ಇಬ್ಬರು ಕೂಡ ತಮ್ಮ 200ನೇ ಐಪಿಎಲ್ ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಸದ್ಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಡೇವಿಡ್ ವಾರ್ನರ್ 49 ಅರ್ಧಶತಕಗಳನ್ನು ದಾಖಲಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನ 43 ಅರ್ಧಶತಕ ದಾಖಲಿಸಿರುವ ಶಿಖರ್ ಧವನ್ ಹೆಸರಿನಲ್ಲಿದೆ. ಇನ್ನು ಮೂರನೇ ಸ್ಥಾನದಲ್ಲಿದ್ದಾರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಇನ್ನು ಸುರೇಶ್ ರೈನಾ ಮತ್ತು ಎಬಿಡಿ ವಿಲಿಯರ್ಸ್ ತಲಾ 39 ಅರ್ಧಶತಕಗಳನ್ನು ಸಿಡಿಸಿ ಪೈಪೋಟಿಯಲ್ಲಿದ್ದಾರೆ. ಗೌತಮ್ ಗಂಭಿರ್ 36 ಮತ್ತು ಕ್ರಿಸ್ ಗೇಲ್ 31 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಜಿಂಕ್ಯಾ ರಹಾನೆ 28, ರಾಬಿನ್ ಉತ್ತಪ್ಪ 24 ಮತ್ತು ಎಮ್. ಎಸ್ ಧೋನಿ 23 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಒಟ್ಟಿನಲ್ಲಿ ಐಪಿಎಲ್ ನ ಪ್ರತಿ ಪಂದ್ಯಗಳಲ್ಲೂ ಒಂದೊಂದು ದಾಖಲೆಗಳು ಆಗುತ್ತಲೇ ಇವೆ. ಸದ್ಯದ ಸ್ಥಿತಿಯಲ್ಲಿ ಯಾರ ದಾಖಲೆ ಯಾವಾಗ ಅಳಿಸಿ ಹೋಗುತ್ತೆ ಅಂತ ಹೇಳೋಕೆ ಆಗಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd