ಪಂಜಾಬ್, ಬೆಂಗಳೂರು ನಡುವೆ ಗೆಲುವಿಗಾಗಿ ಜಿದ್ದಾಜಿದ್ದಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಕಾಂಬಿನೇಷನ್ನಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದೆ. ರಾಯಲ್ ಚಾಲೆಂರ್ಜ್ ಬೆಂಗಳೂರು ತನ್ನ ಕೊನೆಯ 2 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಕೂಡ ತನ್ನ ಕೊನೆಯ ಮ್ಯಾಚ್ ಅನ್ನು ಗೆದ್ದಿದೆ. ರಾಯಲ್ ಚಾಲೆಂಜಸ್ ಪ್ಲೇ-ಅಫ್ ಪ್ರವೇಶ ಆಲ್ಮೋಸ್ಟ್ ಪಕ್ಕಾ ಆಗಿದ್ದರೆ, ಪಂಜಾಬ್ ಭವಿಷ್ಯದ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಅನ್ನುವ ಹಾಗಿದೆ. ಹೀಗಾಗಿ ಶಾರ್ಜಾದಲ್ಲಿ ನಡೆಯುತ್ತಿರುವ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೋರಾಟ ಕುತೂಹಲ ಕೆರಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನುಳಿದ 3 ಪಂದ್ಯಗಳಲ್ಲಿ ಕನಿಷ್ಟ ಎರಡನ್ನು ಗೆದ್ರೆ ಸುಲಭವಾಗಿ ಪ್ಲೇ-ಅಫ್ ಪ್ರವೇಶ ಪಡೆಯಬಹುದು. ಇಲ್ಲದಿದ್ದರೆ ರನ್ರೇಟ್ ಲೆಕ್ಕಾಚಾರಕ್ಕೆ ಅಂಟಿಕೊಳ್ಳಬೇಕಾಗುತ್ತಿದೆ.
ವಿರಾಟ್ ಕೊಹ್ಲಿ, ದೇವದತ್ ಪಡಿಕಲ್ ಮತ್ತು ಶ್ರೀಕರ್ ಭರತ್ ಬ್ಯಾಟಿಂಗ್ ಫಾರ್ಮ್ ಆರ್ಸಿಬಿಗೆ ಬೋನಸ್ ಆಗಿದೆ. ಗ್ಲೆನ್ ಮ್ಯಾಕ್ಸ್ವೆಲ್ ಸ್ಥಿರ ಆಟ ಆಡುತ್ತಿರುವುದು ಆರ್ಸಿಬಿ ಉಲ್ಲಾಸ ಹೆಚ್ಚಿಸಿದೆ.
ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ ಪರ್ಪಲ್ ಪಟೇಲ್ ಆಗಿರುವದು ದೊಡ್ಡ ಬೋನಸ್. ಜೊತೆಗೆ ಚಹಲ್ ಮತ್ತು ಸಿರಾಜ್ ಬೌಲಿಂಗ್ ಫಾರ್ಮ್ ಕೂಡ ಬೆಂಗಳೂರು ತಂಡದ ಕಾನ್ಫಿಡೆನ್ಸ್ ಹೆಚ್ಚಿಸಿದೆ.
ಪಂಜಾಬ್ ಕಿಂಗ್ಸ್ ಕೂಡ ಸಮಸ್ಯೆಗಳನ್ನು ಬಗಹರಿಸಿಕೊಂಡಿದೆ. ರಾಹುಲ್, ಮಯಾಂಕ್, ಶಾರೂಖ್ ಖಾನ್ ಬ್ಯಾಟಿಂಗ್ ಬಲ ತಂಡಕ್ಕೆ ಬೋನಸ್ ಆಗಿದೆ.
ಬೌಲಿಂಗ್ನಲ್ಲಿ ಶಮಿ, ಅರ್ಶದೀಪ್ ಮತ್ತು ರವಿಬಿಷ್ಣೋಯಿ ಮ್ಯಾಜಿಕ್ ಎದುರಾಳಿ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.
ಶಾರ್ಜಾ ಪಿಚ್ನಲ್ಲಿ ರನ್ಗಳಿಸುವುದು ಸವಾಲೇ ಆಗಿದೆ. ಹೀಗಾಗಿ ಬೌಲರ್ಗಳು ಪಂದ್ಯ ಗೆಲ್ಲಿಸಿಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಹಗಲು ಹೊತ್ತಿನ ಪಂದ್ಯ ಇದಾಗಿರುವುದರಿಂದ ಮ್ಯಾಚ್ ರೋಚಕವಾಗಿರಲಿದೆ.
ಸಂಭಾವ್ಯ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು
1. ವಿರಾಟ್ ಕೊಹ್ಲಿ, 2. ದೇವದತ್ ಪಡಿಕಲ್, 3 ಶ್ರೀಕರ್ ಭರತ್, 4. ಗ್ಲೆನ್ ಮ್ಯಾಕ್ಸ್ವೆಲ್, 5 ಎಬಿ ಡಿ ವಿಲಿಯರ್ಸ್, 6 ಶಹಬಾಝ್ ಅಹ್ಮದ್, 7. ಡ್ಯಾನ್ ಕ್ರಿಶ್ಚಿಯನ್, 8. ಜಾರ್ಜ್ ಗಾರ್ಟನ್, 9. ಹರ್ಷಲ್ ಪಟೇಲ್, 10. ಮೊಹಮ್ಮದ್ ಸಿರಾಜ್, 11. ಯುಜ್ವೇಂದ್ರ ಚಹಲ್
ಪಂಜಾಬ್ ಕಿಂಗ್ಸ್
1. ಕೆ.ಎಲ್.ರಾಹುಲ್, 2 ಮಾಯಾಂಕ್ ಅಗರ್ವಾಲ್, 3. ನಿಕೊಲಸ್ ಪೂರನ್, 4 ಏಡಿಯನ್ ಮಾರ್ಕ್ರಾಂ, 5. ದೀಪಕ್ ಹೂಡಾ, 6. ಶಾರೂಖ್ ಖಾನ್, 7. ಫಾಬಿಯನ್ ಅಲೆನ್, 8. ರವಿ ಬಿಷ್ಣೋಯಿ, 9. ನಾಥನ್ ಎಲ್ಲಿಸ್/ ಕ್ರಿಸ್ ಜೋರ್ಡಾನ್, 10. ಅರ್ಶದೀಪ್ ಸಿಂಗ್, 11. ಮೊಹಮ್ಮದ್ ಶಮಿ