ಐಪಿಎಲ್ 2021- ಮುಂಬೈ, ದೆಹಲಿ, ಬೆಂಗಳೂರು, ಕೊಲ್ಕತ್ತಾದಲ್ಲಿ ಸಿಎಸ್ ಕೆ ಸವಾಲು- ಸಿಎಸ್ ಕೆ ತಂಡದ ವೇಳಾಪಟ್ಟಿ

1 min read
IPL 2021

ಐಪಿಎಲ್ 2021- ಮುಂಬೈ, ದೆಹಲಿ, ಬೆಂಗಳೂರು, ಕೊಲ್ಕತ್ತಾದಲ್ಲಿ ಸಿಎಸ್ ಕೆ ಸವಾಲು- ಸಿಎಸ್ ಕೆ ತಂಡದ ವೇಳಾಪಟ್ಟಿ

ipl csk ipl 2021 saakshatvಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಯಶಸ್ಸಿ ತಂಡ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆದ್ರೆ 2020ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಸಾರಥ್ಯದ ಸಿಎಸ್ ಕೆ ತಂಡ ನೀರಸ ಪ್ರದರ್ಶನ ನೀಡಿತ್ತು.
ಇದೀಗ ಹೊಸ ಹುರುಪಿನೊಂದಿಗೆ 14ನೇ ಆವೃತ್ತಿಯ ಟೂರ್ನಿಗೆ ಸಿಎಸ್ ಕೆ ತಂಡ ಸನ್ನದ್ಧಗೊಳ್ಳುತ್ತಿದೆ. ಈಗಾಗಲೇ ಸಿಎಸ್ ಕೆ ತಂಡ ಐಪಿಎಲ್ ಟೂರ್ನಿಗಾಗಿ ತರಬೇತಿ ಶಿಬಿರದಲ್ಲಿ ಬೆವರು ಸುರಿಸುತ್ತಿದೆ.
ಕಳೆದ ಬಾರಿಯ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಲು ತಯಾರಿ ನಡೆಸುತ್ತಿರುವ ಸಿಎಸ್ ಕೆ ತಂಡಕ್ಕೆ ಚೆನ್ನೈ ನಲ್ಲಿ ಆಡುವ ಅವಕಾಶವಿಲ್ಲ. ಹೀಗಾಗಿ ಸಿಎಸ್ ಕೆ ತಂಡ ಐದು ಪಂದ್ಯಗಳನ್ನು ಮುಂಬೈ, ನಾಲ್ಕು ಪಂದ್ಯಗಳನ್ನು ದೆಹಲಿಯಲ್ಲಿ, ಮೂರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಹಾಗೂ ಲೀಗ್ ನ ಕೊನೆಯ ಎರಡು ಪಂದ್ಯಗಳನ್ನು ಕೊಲ್ಕತ್ತಾದಲ್ಲಿ ಆಡಲಿದೆ.
ಅಂದ ಹಾಗೇ ಸಿಎಸ್ ಕೆ ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯವನ್ನು ಏಪ್ರಿಲ್ 10ರಿಂದ ಆರಂಭ ಮಾಡಲಿದೆ. ಮೊದಲ ಪಂದ್ಯದಲ್ಲಿ ಸಿಎಸ್ ಕೆ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮೇ 23ರಂದು ಆರ್ ಸಿಬಿ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.
14ನೇ ಐಪಿಎಲ್ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಳಾಪಟ್ಟಿ

ಏಪ್ರಿಲ್ 10- ಮುಂಬೈ – ಸಿಎಸ್ ಕೆ ಮತ್ತು ದೆಹಲಿ ಕ್ಯಾಪಿಟಲ್ಸ್ – ರಾತ್ರಿ 7.30ಕ್ಕೆ

ಏಪ್ರಿಲ್ 16- ದೆಹಲಿ – ಸಿಎಸ್ ಕೆ ಮತ್ತು ಪಂಜಾಬ್ ಕಿಂಗ್ಸ್ – ರಾತ್ರಿ 7.30ಕ್ಕೆ

ಏಪ್ರಿಲ್ 19- ಮುಂಬೈ – ಸಿಎಸ್ ಕೆ ಮತ್ತು ರಾಜಸ್ತಾನ ರಾಯಲ್ಸ್ = ರಾತ್ರಿ 7.30ಕ್ಕೆ

ಏಪ್ರಿಲ್ 21- ಮುಂಬೈ – ಸಿಎಸ್ ಕೆ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ – ರಾತ್ರಿ 7.30ಕ್ಕೆ

ಏಪ್ರಿಲ್ 25- ಮುಂಬೈ – ಸಿಎಸ್ ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮಧ್ಯಾಹ್ನ 3.30ಕ್ಕೆ

ipl csk ipl 2021 saakshatvಏಪ್ರಿಲ್ 28- ದೆಹಲಿ – ಸಿಎಸ್ ಕೆ ಮತ್ತು ಸನ್ ರೈಸರ್ಸ್ ಹೈದ್ರಬಾದ್ – ರಾತ್ರಿ 7.30ಕ್ಕೆ

ಮೇ 1- ದೆಹಲಿ – ಸಿಎಸ್ ಕೆ ಮತ್ತು ಮುಂಬೈ ಇಂಡಿಯನ್ಸ್ – ರಾತ್ರಿ 7.30ಕ್ಕೆ

ಮೇ 5- ದೆಹಲಿ – ಸಿಎಸ್ ಕೆ ಮತ್ತು ರಾಜಸ್ತಾನ ರಾಯಲ್ಸ್ – ರಾತ್ರಿ 7.30ಕ್ಕೆ

ಮೇ 7- ದೆಹಲಿ – ಸಿಎಸ್ ಕೆ ಮತ್ತು ಸನ್ ರೈಸರ್ಸ್ ಹೈದ್ರಬಾದ್ – ರಾತ್ರಿ 7.30ಕ್ಕೆ

ಮೇ 9- ಬೆಂಗಳೂರು – ಸಿಎಸ್ ಕೆ ಮತ್ತು ಪಂಜಾಬ್ ಕಿಂಗ್ಸ್ – ಮಧ್ಯಾಹ್ನ 3.30ಕ್ಕೆ

ಮೇ 12- ಬೆಂಗಳೂರು – ಸಿಎಸ್ ಕೆ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ – ರಾತ್ರಿ 7.30ಕ್ಕೆ

ಮೇ 16- ಬೆಂಗಳೂರು – ಸಿಎಸ್ ಕೆ ಮತ್ತು ಮುಂಬೈ ಇಂಡಿಯನ್ಸ್ – ರಾತ್ರಿ 7.30ಕ್ಕೆ

ಮೇ 21- ಕೊಲ್ಕತ್ತಾ – ಸಿಎಸ್ ಕೆ ಮತ್ತು ದೆಹಲಿ ಕ್ಯಾಪಿಟಲ್ಸ್ – ರಾತ್ರಿ 7.30ಕ್ಕೆ

ಮೇ 23- ಕೊಲ್ಕತ್ತಾ – ಸಿಎಸ್ ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾತ್ರಿ 7.30ಕ್ಕೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd