ಐಪಿಎಲ್ 2021 : ರೈಡರ್ಸ್ ವಿರುದ್ಧ ರೈಸ್ ಆಗುತ್ತಾ ಹೈದ್ರಾಬಾದ್

1 min read
IPL 2021

ಐಪಿಎಲ್ 2021 : ರೈಡರ್ಸ್ ವಿರುದ್ಧ ರೈಸ್ ಆಗುತ್ತಾ ಹೈದ್ರಾಬಾದ್

ಬೆಂಗಳೂರು : 2021ನೇ ಸಾಲಿನ ಐಪಿಎಲ್ ನ ಇಂದಿನ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಇದು ಮೊದಲ ಮ್ಯಾಚ್ ಆಗಿದ್ದು, ಯಾರು ಬೋಣಿ ಹೊಡೆಯುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.

ಹೆಡ್ ಟು ಹೆಟ್

ಐಪಿಎಲ್ ನಲ್ಲಿ ಈ ಎರಡು ತಂಡಗಳು ಈವರೆಗೂ 19 ಬಾರಿ ಮುಖಾಮುಖಿಯಾಗಿದ್ದು, ಕೊಲ್ಕತ್ತಾ 12 ಬಾರಿ ಗೆಲುವು ಸಾಧಿಸಿದೆ. ಹೈದರಾಬಾದ್ 7 ಬಾರಿ ದಿಗ್ವಿಜಯ ಸಾಧಿಸಿದೆ.

ಪಿಚ್ ಹೇಗಿದೆ..?

ಇಂದಿನ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಸ್ಲೋ ಅಂಡ್ ಟರ್ನ್ ಇರುತ್ತೆ, ಆದ್ದರಿಂದ ಮಿಡಿಯಂ ಪೇಸರ್ಸ್‍ಗೆ ಹೆಚ್ಚು ಅನುಕೂಲವಾಗಿರಲಿದೆ. ಇಲ್ಲಿ 160 ಬೆಸ್ಟ್ ಸ್ಕೋರ್ ಅಂತ ಅಂದಾಜಿಸಲಾಗಿದೆ. ಸೆಕೆಂಡ್ ಬ್ಯಾಟಿಂಗ್ ಮಾಡುವವರಿಗೆ ಬ್ಯಾಟ್ ಮಾಡಲು ತುಸು ಅನುಕೂಲಕರವಾಗಿರುತ್ತೆ. ಚೇಸಿಂಗ್ ವಿನ್ನಿಂಗ್ ಮಂತ್ರ.

ಸ್ಟ್ರೆಂಥ್ & ವೀಕ್ನೆಸ್

ಎಸ್ ಆರ್ ಹೆಚ್ : ಚೆನ್ನೈ ಅಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಹೈದರಾಬಾದ್ ತಂಡಕ್ಕೆ ಹೆಚ್ಚು ಸಹಾಯಕವಾಗಿಲಿದೆ. ಹೇಗೆಂದರೇ ಎಸ್ ಆರ್ ಹೆಚ್ ನಲ್ಲಿ ಭುವಿ, ನಟರಾಜನ್, ಸಂದೀಪ್ ಶರ್ಮಾ, ರಿಶಿದ್ ಖಾನ್ ಗೆ ಬೌಲಿಂಗ್ ಶೈಲಿಗೆ ಚೆನ್ನೈ ಪಿಚ್ ಹೇಳಿಮಾಡಿಸಿದಂತೆ ಇರುತ್ತೆ.

ವೀಕ್ನೆಸ್ ವಿಚಾರಕ್ಕೆ ಬಂದ್ರೆ ಪ್ರತಿವರ್ಷದಂತೆ ಹೈದರಾಬಾದ್ ತಂಡಕ್ಕೆ ಲೋಯರ್ ಮಿಡಲ್ ಆರ್ಡರ್ ಸ್ವಲ್ಪ ವೀಕ್ ಇದೆ. ಐದನೇ, ಆರನೇ ಕ್ರಮಾಂಕದಲ್ಲಿ ಯಾರು ಆಡ್ತಾರೆ ಅನ್ನೋ ಕಾದು ನೋಡಬೇಕಿದೆ.

IPL 2021

ನೈಟ್ ರೈಡರ್ಸ್

ಕೊಲ್ಕತ್ತಾ ತಂಡದಲ್ಲಿ ಈ ಬಾರಿ ಯಂಗ್ ಸ್ಟಾರ್ ಗಳೇ ಕೀ ಪ್ಲೇಯರ್ ಗಳಾಗಿದ್ದಾರೆ. ಮುಖ್ಯವಾಗಿ ಶುಭ್ ಮನ್ ಗಿಲ್, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕ್ರಿಷ್ಣ ಉತ್ತಮ ಲಯದಲ್ಲಿದ್ದಾರೆ.

ಇನ್ನ ವಿಕ್ನೇಸ್ ವಿಚಾರಕ್ಕೆ ಬಂದ್ರೆ ತಂಡದ ಟ್ರಂಪ್ ಕಾರ್ಡ್ ಪ್ಲೇಯರ್ ಗಳಾದಂತಹ ರಸಲ್, ನರೈನ್, ದಿನೇಶ್ ಕಾರ್ತಿಕ್, ಮಾರ್ಗನ್ ಒಳ್ಳೆ ಲಯದಲ್ಲಿಲ್ಲ.

ಪ್ಲೇಯಿಂಗ್ 11 ಹೇಗಿರುತ್ತೆ..?

ಹೈದರಾಬಾದ್ : ವಾರ್ನರ್, ಬೆನ್ ಸ್ಟ್ರ್ರೋ , ಮನೀಶ್ ಪಾಂಡೆ, ವಿಲಿಯಮ್ಸನ್, ಕೇಧಾರ್ ಜಾಧವ್, ಅಬ್ಧುಲ್ ಸಮದ್, ವಿಜಯ್ ಶಂಕರ್, ರಶೀದ್ ಖಾನ್, ಭುವನೇಶ್ವರ್, ಸಂದೀಪ್ ಶರ್ಮಾ, ನಟರಾಜನ್.

ಕೆಕೆಆರ್ : ಶುಬ್ ಮನ್ ಗಿಲ್, ರಾಹುಲ್ ತ್ರಿಪಾತಿ, ಕರುಣ್ ನಾಯರ್, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ಅಂಡ್ರೆ ರಸೆಲ್, ಶಕೀಬ್ ಅಲ್ ಹಸನ್, ಪಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಿದ್ಧ್ ಕೃಷ್ಣ, ಕಮೇಶ್ ನಾಗರಕೋಟಿ.

ವಿನ್ನಿಂಗ್ ಚಾನ್ಸಸ್

ಸನ್ ರೈಸರ್ಸ್ ಗೆಲ್ಲುವ ಫೇವರೇಟ್ ತಂಡವಾಗಿದೆ. ಎಸ್ ಆರ್ ಹೆಚ್ 55%. ಕೆಕೆಆರ್ 45%

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd