ಐಪಿಎಲ್ 2021- ಎಸ್ ಆರ್ ಎಚ್ ಗೆ ಆಘಾತ – ಟೂರ್ನಿಯಿಂದ ಹೊರಬಿದ್ದ ನಟರಾಜನ್

1 min read
natarajan srh saakshatv ipl 2021

ಐಪಿಎಲ್ 2021- ಎಸ್ ಆರ್ ಎಚ್ ಗೆ ಆಘಾತ – ಟೂರ್ನಿಯಿಂದ ಹೊರಬಿದ್ದ ನಟರಾಜನ್

natarajan srh saakshatv ipl 2021ಈಗಾಗಲೇ ಸೋಲಿನಿಂದ ಕಂಗೆಟ್ಟಿರುವ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ಮತ್ತೊಂದು ಆಘಾತ ಅನುಭವಿಸಿದೆ.
ಸತತ ಮೂರು ಸೋಲು ಅನುಭವಿ ಮತ್ತೆ ಗೆಲುವಿನತ್ತ ಮುಖ ಮಾಡಿರುವ ಎಸ್ ಆರ್ ಎಚ್ ಆತ್ಮವಿಶ್ವಾಸದಲ್ಲಿತ್ತು. ಆದ್ರೆ ಈಗ ತಂಡದ ಪ್ರಮುಖ ವೇಗಿ ಟಿ. ನಟರಾಜನ್ ಅವರು ಗಾಯಗೊಂಡು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಮೊಣಕಾಲಿನ ನೋವಿನಿಂದ ಬಳಲುತ್ತಿರುವ ನಟರಾಜನ್ ಅವರು ಐಪಿಎಲ್ 2021ರ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಸನ್ ರೈಸರ್ಸ್ ಹೈದ್ರಬಾದ್ ತಂಡ ಸ್ಪಷ್ಟಪಡಿಸಿದೆ.

ipl 2021 – SunRisers pacer Natarajan out of IPL- saakshatv

30ರ ಹರೆಯದ ಎಡಗೈ ವೇಗಿ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಆರಂಭದ ಎರಡು ಪಂದ್ಯಗಳಲ್ಲಿ ನಟರಾಜನ್ ಅವರು ಎರಡು ವಿಕೆಟ್ ಮಾತ್ರ ಪಡೆದುಕೊಂಡಿದ್ದರು.
ಸನ್ ರೈಸರ್ಸ್ ಹೈದ್ರಾಬಾದ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆರಂಭದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾಗ ಎಸ್ ಆರ್ ಎಚ್ ತಂಡದ ನಾಯಕ ಡೇವಿಡ್ ವಾರ್ನರ್ ಸಿಡಿಮಿಡಿಗೊಂಡಿದ್ದರು. ಬಳಿಕ ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿ ಮತ್ತೆ ಗೆಲುವಿನ ರುಚಿ ಕಂಡಿತ್ತು. ಈ ನಡುವೆ ತಂಡದ ಸ್ಟಾರ್ ಬ್ಯಾಟ್ಸ್ ಮೆನ್ ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದರು. ಇದೀಗ ನಟರಾಜನ್ ಟೂರ್ನಿಯಿಂದಲೇ ಹೊರನಡೆದಿರುವುದು ತಂಡಕ್ಕೆ ಆಘಾತವನ್ನುಂಟು ಮಾಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd