IPL | ಧೋನಿ, ಕೊಹ್ಲಿಗೆ ಕಡಿಮೆಯಾಯ್ತು.. ರಾಹುಲ್, ಪಂತ್ ಗೆ ಹೆಚ್ಚಾಯ್ತು..
ಐಪಿಎಲ್ ಮೆಗಾ ಹರಾಜು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಬಾರಿ ಹರಾಜಿನಲ್ಲಿ ಪಾಲ್ಗೊಂಡಿದ್ದ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿವೆ.
ಕೆಲವರಿಗೆ ಜಾಕ್ ಪಾಟ್ ಹೊಡೆದರೇ.. ಇನ್ನು ಕೆಲವರು ಅಲ್ಪ ಮೊತ್ತಕ್ಕೆ ಸೇಲ್ ಆಗಿದ್ದಾರೆ. ವಿಶೇಷ ಅಂದರೇ ಈ ಬಾರಿ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರಿಗಿಂತ ಸ್ವದೇಶಿ ಕ್ರಿಕೆಟಿಗರತ್ತ ಫ್ರಾಂಚೈಸಿಗಳು ಹೆಚ್ಚು ಆಸಕ್ತಿ ತೋರಿವೆ.
ಉದಾಹರಣೆಗೆ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ಪ್ರಸಿದ್ಧ್ ಕೃಷ್ಣ ಮತ್ತು ಅವೇಶ್ ಖಾನ್ ಅವರಂತಹ ಆಟಗಾರರಿಗೆ ಲಾಟರಿ ಹೊಡೆದಿದೆ.
ಸ್ಟಾರ್ ಆಟಗಾರರಾದ ಸುರೇಶ್ ರೈನಾ, ಇಯಾನ್ ಮಾರ್ಗನ್, ಸ್ಟೀವ್ ಸ್ಮಿತ್ ಮತ್ತು ಆರೋನ್ ಫಿಂಚ್ ಗೆ ಫ್ರಾಂಚೈಸಿಗಳು ಮಣೆಹಾಕಿಲ್ಲ.
ಹರಾಜಿಗೂ ಮುನ್ನ ಆಯಾ ಫ್ರಾಂಚೈಸಿಗಳು ಕೆಲ ಆಟಗಾರರನ್ನು ಉಳಿಸಿಕೊಂಡಿದ್ದವು. ಉಳಿಸಿಕೊಂಡಿರುವ ಆಟಗಾರರ ಬೆಲೆಯಲ್ಲಿ ಏರಿಳಿತಗಳಿವೆ.
ಇನ್ನು ರಿಟೈನ್ ಲಿಸ್ಟ್ ನಲ್ಲಿದ್ದ ಕೊಹ್ಲಿ ಹಾಗೂ ಧೋನಿ ಬೆಲೆ ಕುಸಿದರೆ.. ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಬೆಲೆ ಏರಿದೆ. ಇವರಲ್ಲದೇ ಹಾರ್ದಿಕಾ ಪಾಂಡ್ಯ, ರಶೀದ್ ಖಾನ್ ಮತ್ತು ಶುಭ್‌ಮನ್ ಗಿಲ್ ಭಾರಿ ಬೆಲೆ ಪಡೆದಿದ್ದಾರೆ.
ಹಾರ್ದಿಕ್ ಪಂಡ್ಯಾಗೆ ಮೊದಲ 11 ಕೋಟಿ ಇತ್ತು, ಅಹಮದಾಬಾದ್ ಫ್ರಾಂಚೈಸಿ, 15 ಕೋಟಿ ನೀಡಿದೆ. ರಶೀದ್ ಖಾನ್ ಬೆಲೆ 9 ಕೋಟಿಯಿಂದ ರೂ. 15 ಕೋಟಿ, ಶುಭ್‌ಮನ್ ಗಿಲ್ ಬೆಲೆ 1.8 ಕೋಟಿ ರೂ.ನಿಂದ ರೂ. 8 ಕೋಟಿಗೆ ಏರಿದೆ.
ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಬಡ್ತಿ ಪಡೆದಿದ್ದ ರಿಷಬ್ ಪಂತ್ ಬೆಲೆಯಲ್ಲಿ ತೀವ್ರ ಏರಿಕೆ ಕಂಡಿದೆ.
ರಿಟೈನ್ಡ್ ಗೂ ಮುನ್ನ ಪಂತ್ ಬೆಲೆ ರೂ. 8 ಕೋಟಿ ಇದ್ದರೆ.. ಈಗ ರೂ. 16 ಕೋಟಿ ತಲುಪಿದೆ.
ಸಿಎಸ್ ಕೆ ನಾಯಕ ಎಂಎಸ್ ಧೋನಿ ಬೆಲೆ ಮೊದಲು ರೂ. 15 ಕೋಟಿ ಇದ್ದರೆ.. ಈಗ ರೂ. 12 ಕೋಟಿಗೆ ಇಳಿಕೆಯಾಗಿದೆ.
ಅಲ್ಲದೆ, ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಬೆಲೆ ಹಿಂದೆ ರೂ. 17 ಕೋಟಿ ಇತ್ತು. ಸದ್ಯ 15 ಕೋಟಿ ರೂ. ಆಗಿದೆ.









