IPL 2022 | ಬಟ್ಲರ್ ಬ್ಯಾಟ್ ನಿಂದ ಸೀಸನ್ 15ರ ಮೊದಲ ಶತಕ..

1 min read
ipl-2022-CENTURY 100 for josbuttler saaksha tv

IPL 2022 | ಬಟ್ಲರ್ ಬ್ಯಾಟ್ ನಿಂದ ಸೀಸನ್ 15ರ ಮೊದಲ ಶತಕ..

ಬೆಂಗಳೂರು : 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 9ನೇ ಪಂದ್ಯದಲ್ಲಿ ಜೋಸ್ ಬಟ್ಲರ್ ಶತಕದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ವಿರುದ್ಧ ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ರಾಜಸ್ಥಾನ್ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಪ್ಲಾನ್ ನಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದ್ರೆ ಮುಂಬೈ ತಂತ್ರಗಳಿಗೆ ಜೋಸ್ ಬಟ್ಲರ್ ಚೆಕ್ ಮೇಟ್ ಇಟ್ಟರು. ಆರಂಭದಿಂದಲೂ ಮುಂಬೈ ಬೌಲರ್ ಗಳನ್ನು ದಂಡಿಸಿದ ಬಟ್ಲರ್ ಐಪಿಎಲ್ ನಲ್ಲಿ ಎರಡನೇ ಶತಕ ಸಿಡಿಸಿದ್ದಾರೆ.

ipl-2022-CENTURY 100 for  josbuttler saaksha tv

 ಈ ಪಂದ್ಯದಲ್ಲಿ  68 ಎಸೆತಗಳನ್ನು ಎದುರಿಸಿದ ಜೋಸ್ ಬಟ್ಲರ್ 147.06 ಸರಾಸರಿಯಲ್ಲಿ 100 ರನ್ ಗಳಿಸಿದರು. ಇದರಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಗಳಿವೆ.

ಇದರೊಂದಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಮೊದಲು ಸೆಂಚೂರಿ ಸಿಡಿಸಿದ ಇಂಗ್ಲೆಂಡ್  ಪ್ಲೇಯರ್ ಅಂದ್ರೆ ಅದು ಕೆವಿನ್ ಪಿಟರ್ ಸನ್, 2012ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಪೀಟರ್ ಸನ್  103 ರನ್ ಸಿಡಿಸಿದ್ದರು.  ಇದಾದ ಬಳಿಕ 2017 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಬೆನ್ ಸ್ಟೋಕ್ಸ್ 103 ರನ್ ಗಳಿಸಿದ್ದರು. 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದ ವಿರುದ್ಧ ಜಾನಿ ಭೈರ್ ಸ್ಟೋವ್ 114 ರನ್ ಬಾರಿಸಿದ್ದರು. 2020ರಲ್ಲಿ  ಬಿನ್ ಸ್ಟೋಕ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 107 ಸಿಡಿಸಿದರು. 2021ರಲ್ಲಿ ಜೋಸ್ ಬಟ್ಲರ್ ಹೈದರಾಬಾದ್ ವಿರುದ್ಧ 124 ಬಾರಿಸಿದರು. ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ 100 ಸಿಡಿಸಿ ಔಟ್ ಆಗಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd