IPL 2022 CSK | ಮಹಿ ಗ್ಯಾಂಗ್ ನಿಂದ ಮೋಯಿನ್ ದೂರ..!!
ಐಪಿಎಲ್-2022 ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಗೆ ಭಾರಿ ಆಘಾತ ಎದುರಾಗಿದೆ.
ತಂಡದ ಸ್ಟಾರ್ ಆಲ್ ರೌಂಡರ್ ಮೊಯಿನ್ ಅಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ವೀಸಾ ಸಮಸ್ಯೆಯಿಂದಾಗಿ ಮೊಯಿನ್ ಅಲಿ ಸಕಾಲದಲ್ಲಿ ಭಾರತಕ್ಕೆ ಆಗಮಿಸುವುದು ತಡವಾಗುತ್ತಿದೆ.
ಇದನ್ನು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದಾರೆ.
‘‘ಮೊಯಿನ್ ಅಲಿ ಮೊದಲ ಪಂದ್ಯದಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.
ಅವರಿಗೆ ಇನ್ನೂ ವೀಸಾ ಸಿಕ್ಕಿಲ್ಲ. ಅವರ ವೀಸಾ ವಿಚಾರವನ್ನು ಬಿಸಿಸಿಐ ಜತೆ ಚರ್ಚಿಸಿದ್ದೇವೆ.
ಈ ಸಮಸ್ಯೆಯನ್ನು ಒಂದು ಅಥವಾ ಎರಡು ದಿನಗಳಲ್ಲಿ ಬಗೆಹರಿಯಬಹುದೆಂದು ನಾನು ಭಾವಿಸುತ್ತೇನೆ.
ಇಲ್ಲಿಗೆ ಬಂದ ನಂತರ ಮೂರು ದಿನಗಳ ಕಾಲ ಅಲಿ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ.
ಹೀಗಾಗಿ ಅವರು ಆರಂಭಿಕ ಪಂದ್ಯಗಳಿಂದ ದೂರ ಇರಲಿದ್ದಾರೆ ಎಂದು ಕಾಶಿ ವಿಶ್ವನಾಥನ್ ಹೇಳಿದ್ದಾರೆ.
IPL-2022 ಅಭಿಯಾನ ಮಾರ್ಚ್ 26 ರಿಂದ ಆರಂಭವಾಗಲಿದೆ.
ipl-2022-csk-moeen-ali-visa-issues