CSK vs SRH | ಚೆನ್ನೈ ಪರ ಅಲಿ ಏಕಾಂಗಿ ಹೋರಾಟ.. CSK 154/7

1 min read
ipl 2022 jadeja-may-not-be-csk-camp-next-year saaksha tv

ipl 2022 jadeja-may-not-be-csk-camp-next-year saaksha tv

CSK vs SRH | ಚೆನ್ನೈ ಪರ ಅಲಿ ಏಕಾಂಗಿ ಹೋರಾಟ.. CSK 154/7

ಮೊಯಿನ್ ಅಲಿ ಏಕಾಂಗಿ ಹೋರಾಟ.. ರವೀಂದ್ರ ಜಡೇಜಾ ನಾಯಕನ ಆಟ.. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಸ್ ಆರ್ ಹೆಚ್ ಬೌಲರ್ಸ್ ಹೋರಾಟ

ಇದು ಇಂಡಿಯನ್ ಪ್ರಿಮಿಯರ್ ಲೀಗ್ ನ 17ನೇ ಪಂದ್ಯದ ಮೊದಲ ಇನ್ನಿಂಗ್ಸ್ ನ ಹೈಲೆಟ್ಸ್..!!  ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹೈದರಾಬಾದ್ ತಂಡಗಳು ಗುದ್ದಾಟ ನಡೆಸುತ್ತಿವೆ. ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಕೇನ್ ನಿರ್ಣಯವನ್ನು ಸಮರ್ಥಿಸಿಕೊಳ್ಳುವಂತೆ ಹೈದರಾಬಾದ್ ಬೌಲರ್ ಗಳು ಚೆನ್ನೈ ತಂಡಕ್ಕೆ ಆಘಾತ ನೀಡಿದರು. ಉತ್ತಪ್ಪ 15 ರನ್, ರುತುರಾಜ್ ಗಾಯಕ್ವಾಡ್ 16 ರನ್ ಗಳಿಸಿ ಔಟ್ ಆದರು.

IPL 2022 CSK vs LSG CSK batting first saaksha tv

ಇದಾದ ಬಳಿಕ ಮೋಯಿನ್ ಅಲಿ ಮತ್ತು ಅಂಬಾಡಿ ರಾಯುಡು ತಂಡಕ್ಕೆ ಆಸರೆಯಾದ್ರು. ಈ ಜೋಡಿ 50 ರನ್ ಗಳ ಜೊತೆಯಾಟವಾಡಿದ್ರು.

ಅಂಬಾಟಿ ರಾಯುಡು 27 ರನ್ ಗಳಿಸಿ ಔಟಾದ್ರು, ಶಿವಂ ದುಬೆ 3 ರನ್, ಜಡೇಜಾ 23 ರನ್, ದೋನಿ ಮೂರು ರನ್ ಗಳಿಸಿದ್ರು.

ಅಂತಿಮವಾಗಿ ಹೋರಾಡಿದ ಮೊಯಿನ್ ಅಲಿ 48 ರನ್ ಗಳಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದರು.

ಹೈದರಾಬಾದ್ ತಂಡದ ಪರ ವಾಷಿಂಗ್ ಟನ್ ಸುಂದರ್, ಟಿ ನಟರಾಜನ್ ತಲಾ ಎರಡು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಮಾರ್ಕೋ ಜಾನ್ಸೆನ್, ಉಮ್ರಾನ್ ಮಲಿಕ್ ತಲಾ ಒಂದು ವಿಕೆಟ್ ಪಡೆದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd