CSK vs GT | ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಗುಜರಾತ್ ಟೈಟಾನ್ಸ್ ವಿರುದ್ಧ ಗುದ್ದಾಡಲಿದೆ. ಸಂಜೆ 7: 30ಕ್ಕೆ ಎಂಸಿಎ ಅಂಗಳದಲ್ಲಿ ಪಂದ್ಯ ನಡೆಯಲಿದೆ.
ಜಡೇಜಾ ನೇತೃತ್ವದ ಚೆನ್ನೈ ತಂಡ ಈ ಬಾರಿ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ಆರಂಭದ ನಾಲ್ಕು ಪಂದ್ಯಗಳನ್ನು ಸೋತಿರುವ ಚೆನ್ನೈ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಂಬ್ಯಾಕ್ ಮಾಡಿದ್ದಾರೆ. ಇಂದು ಅದೇ ಪ್ರದರ್ಶನವನ್ನು ಮುಂದುವರೆಸಿಕೊಂಡು ಹೋಗುವ ತವಕದಲ್ಲಿದೆ. ಅಲ್ಲದೇ ಅಂಕಪಟ್ಟಿಯಲ್ಲಿ ಮೇಲೆರುವ ಪ್ಲಾನ್ ನಲ್ಲಿದೆ.
ಚೆನ್ನೈ ತಂಡಕ್ಕೆ ಆರಂಭಿಕ ರಾಬಿನ್ ಉತ್ತಪ್ಪ, ಶಿವಂ ದುಬೆ, ಮೊಯಿನ್ ಅಲಿ ಪ್ರಮುಖ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಇವರಿಗೆ ರಾಯುಡು, ಧೋನಿ, ಜಡೇಜಾ ಸಾಥ್ ನೀಡಬೇಕಿದೆ.
ಮುಖ್ಯವಾಗಿ ರುತುರಾಜ್ ಗಾಯಕ್ವಾಡ್ ಫಾರ್ಮ್ ಗೆ ಬರಬೇಕಿದೆ. ಇತ್ತ ಡ್ವೇನ್ ಬ್ರಾವೋ ಮೊದಲಿನ ಚಾರ್ಮ್ ನಲ್ಲಿ ಕಾಣಿಸಬೇಕಿದೆ. ಮೊಹೀಶ್ ತೀಕ್ಷಣ, ಮುಕೇಶ್ ಚೌಧುರಿಗೆ ಕ್ರಿಸ್ ಜೋರ್ಡಾನ್ ಸಾಥ್ ನೀಡಬೇಕಿದೆ.
ಕಳೆದ ಪಂದ್ಯದಲ್ಲಿ ತಂಡ ಸಾಂಘೀಕ ಪ್ರದರ್ಶನ ನೀಡಿರುವುದರಿಂದ ಅದೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ರಾಬಿನ್ ಉತ್ತಪ್ಪ
ರುತುರಾಜ್ ಗಾಯಕ್ವಾಡ್
ಮೋಯಿನ್ ಆಲಿ
ಶಿವಮ್ ದುಬೆ
ಅಂಬಟಿ ರಾಯುಡು
ಎಮ್. ಎಸ್. ಧೋನಿ (ವಿಕೆಟ್ ಕೀಪರ್)
ರವೀಂದ್ರ ಜಡೇಜಾ (ನಾಯಕ)
ಡ್ವೇನ್ ಬ್ರೇವೋ
ಕ್ರಿಸ್ ಜೋರ್ಡಾನ್
ಮೊಹೀಶ್ ತೀಕ್ಷಣ
ಮುಕೇಶ್ ಚೌಧುರಿ