Hardik Pandya | ಆರಂಭದಲ್ಲಿ ಸವಾಲುಗಳು.. ಈಗ ದಾಖಲೆಗಳು..!!
ಪಾದಾರ್ಪಣೆ ಸೀಸನ್ ನಲ್ಲಿಯೇ ಪವರ್ ಪ್ಯಾಕ್ಡ್ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ತಂಡ ಇಂಡಿಯನ್ ಪ್ರಿಮಿಯಲ್ ಲೀಗ್ ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸೀಸನ್ ಆರಂಭದಿಂದಲೂ ಸಂಘಟಿತ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ತಂಡ, 14 ಪಂದ್ಯಗಳಲ್ಲಿ ಬರೋಬ್ಬರಿ 10 ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿ ಲೀಗ್ ಹಂತ ಕೊನೆಗೊಳಿಸಿತ್ತು.
ಇದಾದ ಬಳಿಕ ಕ್ವಾಲಿಪೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಸೀದಾ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿ ಪ್ರಾಬಲ್ಯ ಮೆರೆದಿತ್ತು.
ನಂತರ ಅಹ್ಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಏಳು ವಿಕೆಟ್ ಗಳೊಂದಿಗೆ ಜಯ ಸಾಧಿಸಿ, ಚಾಂಪಿಯನ್ ಪಟ್ಟಕ್ಕೇರಿದೆ. ಗುಜರಾತ್ ಟೈಟಾನ್ಸ್ ತಂಡದ ಈ ಯಶಸ್ಸಿನಲ್ಲಿ ಜಿಟಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದಾರೆ.
ಅಂದಹಾಗೆ ಈ ಸೀಸನ್ ಗೂ ಮುನ್ನಾ ಹಾರ್ದಿಕ್ ಪಾಂಡ್ಯಗೆ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ಒಲಿದು ಬಂದಾಗ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು.
ಯಾಕಂದರೇ ಆಗ ಹಾರ್ದಿಕ್ ಕಳಫೆ ಪಾರ್ಮ್ ಎದುರಿಸುತ್ತಿದ್ದರು. ಜೊತೆಗೆ ಟೀಂ ಇಂಡಿಯಾದಿಂದ ಹೊರಬಿದ್ದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹಾರ್ದಿಕ್ ಮೇಲೆ ನಂಬಿಕೆ ಇಟ್ಟು ಗುಜರಾತ್ ಟೈಟಾನ್ಸ್ ತಂಡ ಅವರಿಗೆ ನಾಯಕತ್ವ ವಹಿಸಿತ್ತು. ಆ ನಂಬಿಕೆಯನ್ನು ಹಾರ್ದಿಕ್ ಉಳಿಸಿಕೊಂಡಿದ್ದಾರೆ.

ಆದ್ರೂ ಟೂರ್ನಿ ಆರಂಭಕ್ಕೂ ಮುನ್ನಾ ಹಾರ್ದಿಕ್ ಗೆ ಸಾಕಷ್ಟು ಸವಾಲುಗಳಿದ್ದವು. 2021 ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆಲ್ ರೌಂಡರ್ ಆಗಿ ಮಿಂಚದ ಕಾರಣ, ಅವರನ್ನ ಟಿ 20 ವಿಶ್ವಕಪ್ ತಂಡದಿಂದ ಕೈ ಬಿಡಲಾಗಿತ್ತು. ಜೊತೆಗೆ ಇಂಜೂರಿ ಸಮಸ್ಯೆ ಕೂಡ ಅವರನ್ನ ಬಾಧಿಸಿತ್ತು.
ಜೊತೆಗೆ ನಾಯಕತ್ವದಲ್ಲಿ ಅನುಭವ ಇಲ್ಲದೇ ಇದ್ದರೂ ಅವರಿಗೆ ಸಿಬಿಸಿ ಕ್ಯಾಪಿಟಲ್ಸ್ ಕ್ಯಾಪ್ಟನ್ಸಿ ಪಟ್ಟ ನೀಡಿತ್ತು. ಕ್ಯಾಪ್ಟನ್ಸಿ ಅನುಭವ ಇಲ್ಲದೇ ಇದ್ದರೂ ಚೊಚ್ಚಲ ಪ್ರಯತ್ನದಲ್ಲಿಯೇ ಹಾರ್ದಿಕ್ ಪಾಂಡ್ಯ ನಾಯಕರಾಗಿ ಯಶಸ್ಸು ಕಂಡಿದ್ದಾರೆ. ಜೊತೆಗೆ ಒಬ್ಬ ಆಲ್ ರೌಂಡರ್ ಆಗಿ ತಂಡಕ್ಕೆ ನೆರವಾಗಿದ್ದಾರೆ.
ಪ್ರಶಸ್ತಿ ಸುತ್ತಿನಲ್ಲಿ ಹಾರ್ದಿಕ್ ಬೌಲಿಂಗ್ ನಲ್ಲಿ ಮೂರು ಪ್ರಮುಖ ವಿಕೆಟ್ ತೆಗೆದಿದ್ದು, ಮಾತ್ರವಲ್ಲದೇ ಬ್ಯಾಟಿಂಗ್ ನಲ್ಲಿ ನಿರ್ಣಾಯಕ 32 ರನ್ ಗಳನ್ನು ಗಳಿಸಿದರು. ಈ ಮೂಲಕ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.
ಅಂದಹಾಗೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಟೈಟಲ್ ಗೆದ್ದ ಭಾರತದ ನಾಲ್ಕನೇ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ.
ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ನಾಲ್ಕು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2010, 2011, 2018, 2021 ರಲ್ಲಿ ಚಾಂಪಿಯನ್ ಮಾಡಿದ್ದರು.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಎಂ ಐ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ್ದಾರೆ. ಗೌತಮ್ ಗಂಭೀರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ 2012, 2014ರಲ್ಲಿ ಟೈಟಲ್ ಗೆದ್ದಿದ್ದಾರೆ.
ಇವರನ್ನ ಬಿಟ್ಟರೇ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಶೇನ್ ವಾರ್ನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಇದಾದ ಬಳಿಕ 2009ರಲ್ಲಿ ಆಡಂ ಗಿಲ್ ಕ್ರಿಸ್ಟ್ ಹೈದರಾಬಾದ್ ತಂಡಕ್ಕೆ ಟೈಟಲ್ ತಂದುಕೊಟ್ಟಿದ್ದರು. ಇದೇ ತಂಡವನ್ನು ಡೇವಿಡ್ ವಾರ್ನರ್ 2016ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.








