IPL 2022: ಮುಂಬೈ ವಿರುದ್ಧ ಗೆಲುವು ; ಕೆಕೆಆರ್ ಪ್ಲೇ ಆಫ್ಸ್ ಕನಸು ಜೀವಂತ
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೇಯಸ್ಸ್ ಅಯ್ಯರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದೆ.
ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡ 52 ರನ್ ಗಳ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.
ಈ ಟಾರ್ಗೆಟ್ ಬೆನ್ನಟ್ಟಿದ ರೋಹಿತ್ ಶರ್ಮಾ ಬಳಕ 17.3 ಓವರ್ ಗಳಲ್ಲಿ 113 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯ್ತು.
ಇದರೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಡ್ ತಂಡ ಮುಂಬೈ ವಿರುದ್ದ 52 ರನ್ ಗಳ ಗೆಲುವು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು.
ಇನ್ನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್ 24 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಗಳ ನೆರವಿನಿಂದ 43 ರನ್ ಗಳಿಸಿತು.
1ನೇ ಕ್ರಮಾಂಕದಲ್ಲಿ ಬಂದ ನಿತೀಶ್ ರಾಣ 26 ಎಸೆತದಲ್ಲಿ 43 ರನ್ ಚಚ್ಚಿ ತಂಡಕ್ಕೆ ನೆರವಾದರು.
ಇವರ ಹೊರತಾಗಿ ಅಜಿಂಕ್ಯಾ ರಹಾನೆ(25), ರಿಂಕು ಸಿಂಗ್(23*) ರನ್ ಸಿಡಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
ಉಳಿದಂತೆ ನಾಯಕ ಶ್ರೇಯಸ್ ಅಯ್ಯರ್(6), ಆಂಡ್ರೆ ರಸೆಲ್(9), ಶೆಲ್ಡನ್ ಜ್ಯಾಕ್ಸನ್(5) ರನ್ ಗಳಿಸಿದರು.
ಮುಂಬೈ ಪರ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿದ ಜಸ್ ಪ್ರೀತ್ ಬೂಮ್ರಾ ಐದು ವಿಕೆಟ್ ಪಡೆದು ಮಿಂಚಿದರು.

ಕೆಕೆಆರ್ ನೀಡಿದ 166 ರನ್ಗಳ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ರೋಹಿತ್ ಶರ್ಮ 2 , ತಿಲಕ್ ವರ್ಮ 6 ರನ್ ಗಳಿಗೆ ಔಟ್ ಆದರು.
ಇದಾದ ನಂತರ ರಮಣ್ದೀಪ್ ಸಿಂಗ್ 12 , ಟಿಮ್ ಡೇವಿಡ್ 13 , ಡೆನಿಯಲ್ ಸ್ಯಾಮ್ಸ್ 1 ರನ್ ಗಳಿಸಿದರು.
ಕಿರಾನ್ ಪೊಲಾರ್ಡ್ ಕ್ರೀಸ್ ನಲ್ಲಿದ್ದೂ ಯಾವುದೇ ಪ್ರಯೋಜನ ಆಗಲಿಲ್ಲ. ಪೊಲಾರ್ಡ್ 15 ರನ್ ಗಳಿಸಿದರು.
ಆದ್ರೆ ಇಶಾನ್ ಕಿಶನ್ ಕೊನೆಯವರೆಗೂ ನಿಂತು ತಂಡದ ಮಾನ ಉಳಿಸಿದರು. ಇಶಾನ್ 43 ಎಸೆತಗಳಲ್ಲಿ 51 ರನ್ ಗಳಿಸಿದರು.
ಪರಿಣಾಮ 44 ರನ್ಗಳಿಗೆ 8 ವಿಕೆಟ್ ಕಳೆದುಕೊಂಡ ಮುಂಬೈ 113 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.
ಈ ಗೆಲುವಿನೊಂದಿಗೆ ಕೆಕೆಆರ್ ತಂಡದ ಪ್ಲೇ ಆಫ್ಸ್ ಕನಸು ಜೀವಂತವಾಗಿದೆ. ಕೆಕೆಆರ್ ಪಾಯಿಂಟ್ಸ್ ಟೇಬಲ್ನಲ್ಲಿ 10 ಅಂಕದೊಂದಿಗೆ 7ನೇ ಸ್ಥಾನಕ್ಕೇರಿದರೆ.
ಪ್ರಸಕ್ತ ಸೀಸನ್ನಲ್ಲಿ ಸೋಲಿನ ಆಘಾತ ಅನುಭವಿಸಿರುವ ಮುಂಬೈ ಇಂಡಿಯನ್ಸ್ 9ನೇ ಸೋಲು ಕಂಡಿದೆ. IPL 2022 : kolkata knight riders beat mumbai indians 140335-2