IPL 2022 | ಐಪಿಎಲ್ ಗೆ ಧೋನಿ ಗುಡ್ ಬೈ
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ತನ್ನ 14ನೇ ಪಂದ್ಯವನ್ನಾಡಲಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಚೆನ್ನೈ ತಂಡ ಇಂದು ಸೆಣಸಾಡಲಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಗೆಲುವಿನೊಂದಿಗೆ ಈ ಆವೃತ್ತಿ ಮುಗಿಸೋದು ಚೆನ್ನೈ ತಂಡದ ಪ್ಲಾನ್ ಆಗಿದೆ.
ಆದ್ರೆ ಈ ನಡುವೆ ಸಿಎಸ್ ಕೆ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ನೋಡುಗರಿಗೆ ಕುತೂಹಲಕಾರಿ ಪ್ರಶ್ನೆಯೊಂದು ಕಾಡುತ್ತಿದೆ.
ಅದು ಏನೆಂದರೇ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ಗುಡ್ ಬೈ ಹೇಳ್ತಾರಾ ಅನ್ನೋದು..
ಯಾಕಂದರೇ ಚೆನ್ನೈ ಫ್ರಾಂಚೈಸಿ ಮೂಲಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದೇ ಕೊನೆಯ ಐಪಿಎಲ್ ಸೀಸನ್ ಆಗಿದೆ.
ಮುಂದಿನ ಸೀಸನ್ ನಿಂದ ಅವರು ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. 2021ರ ಐಪಿಎಲ್ ನಲ್ಲಿ ಧೋನಿಯೇ ಹೇಳಿದಂತೆ ಈ ಆವೃತ್ತಿಯ ಐಪಿಎಲ್ ಟೂರ್ನಿ ಅವರಿಗೆ ಕೊನೆಯದ್ದಾಗಲಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
15 ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಧೋನಿ ಇಂಡಿಯನ್ ಪ್ರಿಮಿಯರ್ ಲೀಗ್ ಗೆ ವಿದಾಯ ಘೋಷಿಸಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಹರಿದಾಡಿತ್ತು. ಅದಕ್ಕೆ ಪುಷ್ಠಿ ಕೊಡುವಂತೆ ಧೋನಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿದ್ದಿದ್ದರು. ಅವರ ಸ್ಥಾನಕ್ಕೆ ರವೀಂದ್ರ ಜಡೇಜಾ ಬಂದಿದ್ದರು. ಆದ್ರೆ ಅವರು ಕ್ಯಾಪ್ಟನ್ಸಿ ಒತ್ತಡವನ್ನು ಭರಿಸಲಾಗದೇ ಮತ್ತೆ ಧೋನಿಗೆ ನಾಯಕತ್ವ ವಹಿಸಿದರು.
ಅಂದರೇ ಧೋನಿಯ ಉತ್ತರಾಧಿಕಾರಿಗಾಗಿ ನಡೆದ ಟ್ರೈಯಲ್ ನಲ್ಲಿ ರವೀಂದ್ರ ಜಡೇಜಾ ವಿಫಲಾಗಿದ್ದರು. ಹೀಗಾಗಿ ಇದೀಗ ಧೋನಿಯೇ ಮತ್ತೆ ನಾಯಕತ್ವ ವಹಿಸಿದ್ದಾರೆ. ಆದ್ರೆ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಧೋನಿಗೆ ಪಾಲಿಗೆ ಐಪಿಎಲ್ ನ ಕೊನೆಯ ಪಂದ್ಯವಾಗುವ ಸಾಧ್ಯತೆಗಳಿವೆ.
ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈಗಾಗಲೇ ಮುಂದಿನ ನಾಯಕನ ಹುಡುಕಾಟದಲ್ಲಿದೆ. ಈ ರೇಸ್ ನಲ್ಲಿ ಆರಂಭಿಕ ಬ್ಯಾಟರ್ ಮೊದಲ ಸ್ಥಾನದಲ್ಲಿದ್ದಾರೆ. ಮುಂದಿನ ಸೀಸನ್ ಗಾಗಿ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥಿಯಾದ್ರೂ ಅಚ್ಚರಿ ಪಡಬೇಕಿಲ್ಲ. ಇವರಲ್ಲದೇ ಡೆವೋನ್ ಕಾನ್ವೇ ಕೂಡ ಕ್ಯಾಪ್ಟನ್ಸಿ ರೇಸ್ ನಲ್ಲಿದ್ದಾರೆ.
ಈ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮಾತನಾಡಿ, ರುತುರಾಜ್ ಗಾಯಕ್ವಾಡ್ ಪರ ಬ್ಯಾಟ್ ಬೀಸಿದ್ದಾರೆ. ರುತುರಾಜ್ ಗಾಯಕ್ವಾಡ್ ಬಳಿ ಧೋನಿಯ ಗುಣಗಳಿವೆ. ಎಲ್ಲಾ ಸಂದರ್ಭದಲ್ಲೂ ರುತುರಾಜ್ ಶಾಂತವಾಗಿರುತ್ತಾರೆ. ಅವರಲ್ಲಿ ನಾಯಕತ್ವದ ಗುಣಗಳಿವೆ ಎಂದು ಹೇಳಿದ್ದಾರೆ.
ಇನ್ನು 2022ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಳಫೆ ಪ್ರದರ್ಶನ ನೀಡಿದೆ. ನಾಯಕತ್ವ ಬದಲಾವಣೆ, ಇಂಚೂರಿ ಸಮಸ್ಯೆಗಳು ಚೆನ್ನೈ ತಂಡದ ವೈಪಲ್ಯಕ್ಕೆ ಪ್ರಮುಖ ಕಾರಣಗಳಾಗಿವೆ.
ipl-2022-m s dhoni retirement ipl