IPL 2022 | ಹೀಗೆ ಮಾಡಿದ್ದು ಎಂ.ಎಸ್ ಧೋನಿ ಬಳಿಕ ರಾಹುಲ್ ತೆವಾಟಿಯಾ ಮಾತ್ರ
1 min read
IPL 2022 | ಹೀಗೆ ಮಾಡಿದ್ದು ಎಂ.ಎಸ್ ಧೋನಿ ಬಳಿಕ ರಾಹುಲ್ ತೆವಾಟಿಯಾ ಮಾತ್ರ
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ರಣರೋಚಕ ಜಯ ಸಾಧಿಸಿದೆ.
ಪಂಜಾಬ್ ವಿರುದ್ಧ ಗೆಲ್ಲಲು ಗುಜರಾತ್ ತಂಡಕ್ಕೆ ಕೊನೆಯ ಓವರ್ ನಲ್ಲಿ 19 ರನ್ ಗಳು ಬೇಕಿತ್ತು.
ಮೊದಲ ನಾಲ್ಕು ಎಸೆತಗಳಲ್ಲಿ ಗುಜರಾತ್ ತಂಡ ಗಳಿಸಿದ್ದು ಕೇವಲ 7 ರನ್ ಮಾತ್ರ.
ಹೀಗಾಗಿ ಕೊನೆಯ 2 ಎಸೆತಗಳಲ್ಲಿ 12 ರನ್ ಗಳ ಅವಶ್ಯಕತೆ ಇತ್ತು.
ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ರಾಹುಲ್ ತೆವಾಟಿಯಾ ಒಡಿಯನ್ ಸ್ಮಿತ್ ಓವರ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಗಳನ್ನು ಸಿಡಿಸಿದರು.
ಆ ಮೂಲಕ ಗುಜರಾತ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇದರೊಂದಿಗೆ ತೆವಾಟಿಯಾ ಮತ್ತೊಮ್ಮೆ ಟಾಪ್ ಆಫ್ ದಿ ಟೌನ್ ಆದರು.
ಅಲ್ಲದೇ ಹೀಗೆ ಕೊನೆಯ ಎರಡು ಎಸೆತಗಳಲ್ಲಿ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟವರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
ಈ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಈ ಸಾಧನೆ ಮಾಡಿದ್ದರು. ಇದೀಗ ರಾಹುಲ್ ತೆವಾಟಿಯಾ ಈ ಸಾಲಿಗೆ ಸೇರಿಕೊಂಡಿದ್ದಾರೆ.