RCB team analysis | ಬ್ಯಾಟಿಂಗ್ ಗಟ್ಟಿಯಾದ್ರೆ ಫ್ಲೇ ಆಪ್ ಫಿಕ್ಸ್..!!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಜೋಷ್ ನೊಂದಿಗೆ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ಅಖಾಡಕ್ಕೆ ಧುಮುಖಲಿದೆ. ಹೊಸ ನಾಯಕ, ಹೊಸ ಮಾರ್ಗದರ್ಶಕ, ಹೊಸ ಜೆರ್ಸಿ ಯೊಂದಿಗೆ ಹೊಸ ಆಟಗಾರರು ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸದ್ಯ ಮುಂಬೈನಲ್ಲಿ ಭರ್ಜರಿ ಪ್ರಾಕ್ಟೀಸ್ ಶುರು ಮಾಡಿರುವ ಆರ್ ಸಿಬಿ, ಇಂಟ್ರಾ ಸ್ಕ್ವಾಡ್ ಪಂದ್ಯಗಳಲ್ಲಿ ಕಾದಾಡುತ್ತಿದೆ.
ಹಾಗಾದ್ರೆ 14 ವರ್ಷಗಳಿಂದ ಕಪ್ ಗೆಲ್ಲದ ಆರ್ ಸಿಬಿ ಈ ಬಾರಿ ಚಾಂಪಿಯನ್ ಆಗುತ್ತಾ..? ಟೈಟಲ್ ಗೆಲ್ಲುವ ಕನಸ್ಸಿನಲ್ಲಿರುವ ಆರ್ ಸಿಬಿಯ ಸ್ಟ್ರೆಂಥ್ ಅಂಡ್ ವೀಕ್ನೆಸ್ ಗಳೇನು..? ಬ್ಯಾಟಿಂಗ್ ಕ್ರಮಾಂಕ ಹೇಗಿರಲಿದೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ…
ತಂಡದಲ್ಲಿರುವ ಬ್ಯಾಟರ್ ಗಳು :
ವಿರಾಟ್ ಕೊಹ್ಲಿ,
ಫಾಫ್ ಡುಪ್ಲಸೀಸ್,
ಸುಯಾಶ್ ಪ್ರಭುದೇಸಾಯಿ,
ಫಿನ್ ಅಲೆನ್.
ಸುಯಾಶ್ ಪ್ರಭುದೇಸಾಯಿ ಒಳ್ಳೆ ಹಾರ್ಡ್ ಹಿಟ್ಟಿಂಗ್ ಬ್ಯಾಟ್ಸ್ ಮೆನ್, ಆತನ ಸ್ಟ್ರೈಕ್ ರೇಟ್ 150 ಇದೆ. ಇನ್ನ ಪಿನ್ ಅಲೆನ್ ಕೂಡ ಒಳ್ಳೆ ಟಚ್ ನಲ್ಲಿದ್ದಾರೆ. ಟಿ 20ಯಲ್ಲಿ 175 ಸ್ಟ್ರೇಕ್ ರೇಟ್ ಇದೆ. ಮುಂಬೈ ಪಿಚ್ ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಅಲೆನ್ ಅವರನ್ನ ಲಾಂಚ್ ಮಾಡಬಹುದು.
ವಿಕೆಟ್ ಕೀಪರ್ಸ್ :
ದಿನೇಶ್ ಕಾರ್ತಿಕ್,
ಅನುಜ್ ರಾವತ್,
ಲುವ್ನಿತ್ ಸಿಸೊಡಿಯಾ
ದಿನೇಶ್ ಕಾರ್ತಿಕ್ ಐಪಿಎಲ್ ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ವಿಜಯ್ ಹಜಾರೆಯಲ್ಲಿ ಸೆಂಚೂರಿ ಸಿಡಿಸಿದ್ದಾರೆ. ಇದರಲ್ಲಿ ಹೆಚ್ಚಾಗಿ ಸಿಕ್ಸರ್ ಗಳಿರೋದು ವಿಶೇಷ.
ಅನುಜ್ ರಾವತ್ , ಕೊಹ್ಲಿಯ ಬಾಲ್ಯ ಕೋಚ್ ಬಳಿ ಬೆಳೆದ ಹುಡುಗ, ಎಡಗೈ ಬಾಟ್ಸ್ ಮೆನ್, ಒಳ್ಳೆ ಹಾರ್ಡ್ ಹಿಟ್ಟರ್ ಆಗಿದ್ದಾರೆ. ಬಹುಶಃ ಅನುಜ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಇರೋದು ಪಕ್ಕಾ ಎನ್ನಲಾಗಿದೆ.
ಲುವ್ನಿತ್ ಸಿಸೊಡಿಯಾ : ಲೋಕಲ್ ಹುಡುಗ ನಮ್ಮ ಕನ್ನಡದವರು,
ಸ್ಪಿನ್ ಬೌಲಿಂಗ್ ಆಲ್ ರೌಂಡರ್ :
ಗ್ಲೆನ್ ಮ್ಯಾಕ್ಸ್ ವೆಲ್,
ವನಿಂದು ಹಸರಂಗ,
ಶಹಬಾಜ್ ಅಹ್ಮದ್,
ಮಹಿಪಾಲ್ ಲೋಮ್ರಾರ್,
ಅನೀಶ್ ಗೌತಮ್,
ಕರಣ್ ಶರ್ಮಾ
ಸ್ಪಿನ್ ಆಲ್ ರೌಂಡರ್ ಗಳ ಪೈಕಿ ಮ್ಯಾಕ್ಸ್ ವೆಲ್ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ನೂರಕ್ಕೆ ನೂರಷ್ಟು ಅವರು ನ್ಯಾಯ ಮಾಡಿದ್ದಾರೆ.
ಮುಖ್ಯವಾಗಿ ಈಗ ಎಲ್ಲರ ದೃಷ್ಠಿ ನೆಟ್ಟಿರುವುದು ವನಿಂದು ಹಸರಂಗ ಮೇಲೆ, ಮೆಗಾ ಹಜಾರಿನಲ್ಲಿ ಹಸರಂಗ ಅವರನ್ನ 10.75 ಕೋಟಿಗೆ ಖರೀದಿ ಮಾಡಲಾಗಿದೆ. ಸ್ಪಿನ್ ಮ್ಯಾಜಿಕ್ ಜೊತೆಗೆ ಹಾರ್ಡ್ ಹಿಟ್ಟರ್ ಕೂಡ.
ಇನ್ನ ಮಹಿಪಾಲ್ ಲೋಮ್ರಾರ್
ವೇಗದ ಬೌಲಿಂಗ್ ಆಲ್ ರೌಂಡರ್ : ಹರ್ಷಲ್ ಪಟೇಲ್, ಶೆರ್ಫೇನ್ ರೂದರ್ಫೋಡ್, ಡೆವಿಡ್ ವಿಲ್ಲೆ
ವೇಗದ ಬೌಲರ್ಸ್ : ಮೊಹ್ಮದ್ ಸಿರಾಜ್, ಜೋಷ್ ಹೆಂಜಲ್ ವುಡ್, ಜಾನ್ಸನ್, ಚಾಮ ಮಿಲಿಂದ್, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್
ಇಲ್ಲಿ ಚಾಮ ಮಿಲಿಂದ್ ಭರವಸೆ ಮೂಡಿಸಿದ್ದಾರೆ. ಮುಷ್ಟಾಕ್ ಅಲಿ ಟೂರ್ನಿಯಲ್ಲಿ ಟಾಪ್ ವಿಕೆಟ್ ಟೇಕರ್ ಆಗಿದ್ದಾರೆ. ಜೊತೆಗೆ ಬ್ಯಾಟಿಂಗ್ ಕೂಡ ಮಾಡಬಲ್ಲರು.
ಇನ್ನ ಪ್ಲೇಯಿಂಗ್ 11 ಬಗ್ಗೆ ಮಾತಾಡೋದಾದ್ರೆ.. ಇನ್ನಿಂಗ್ಸ್ ಒಪನ್ ಮಾಡೋದು ಯಾರು..? ಒನ್ ಡೌನ್ ಯಾರು..? ಫಿನಿಷರ್ ಗಳು ಯಾರು ಅನ್ನೋ ಪ್ರಶ್ನೆಗಳಿವೆ.
ಆರ್ ಸಿಬಿಯ ಬೆಸ್ಟ್ ಪ್ಲೇಯಿಂಗ್ 11 ಹೀಗಿರುತ್ತೆ..
ಫಾಫ್ ಡುಪ್ಲಸಿ
ಅನುಜ್ ರಾವತ್
ವಿರಾಟ್ ಕೊಹ್ಲಿ
ಮ್ಯಾಕ್ಸ್ ವೆಲ್
ಮಹಿಪಾಲ್ ಲೊಮ್ರಾರ್
ದಿನೇಶ್ ಕಾರ್ತಿಕ್
ವನಿಂದು ಹಸರಂಗ
ಸಿದ್ದಾರ್ಥ್ ಕೌಲ್
ಹರ್ಷಲ್ ಪಟೇಲ್
ಸಿರಾಜ್
ಜೊಷ್ ಹೆಂಜಲ್ ವುಡ್
ನಾಯಕ ಡುಪ್ಲಸಿಸ್ ಇನ್ನಿಂಗ್ಸ್ ಓಪನ್ ಮಾಡೋದು ಪಕ್ಕಾ ಅವರ ಜೊತೆ ವಿರಾಟ್ ಅಥವಾ ಅನೂಜ್ ಓಪನ್ ಮಾಡಬಹುದು. ಇತ್ತಿಚಿನ ಮಾಹಿತಿ ಪ್ರಕಾರ ಅನೂಜ್ ಓಪನ್ ಮಾಡೋದು ಪಕ್ಕಾ ಆಗಿದೆ. ಯಾಕಂದ್ರೆ ಆರ್ ಸಿಬಿ ಪ್ರಾಕ್ಟೀಸ್ ಮ್ಯಾಚ್ ಗಳಲ್ಲಿ ಡುಪ್ಲಸಿಸ್ ಜೊತೆ ಅನೂಜ್ ಇನ್ನಿಂಗ್ಸ್ ಓಪನ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬರಬಹುದು. ಆದ್ರೆ ಇದೇ ಫೈನಲ್ ಆಗಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಮ್ಯಾಕಿ ಬ್ಯಾಟ್ ಬೀಸ್ತಾರೆ. ಐದನೇ ಕ್ರಮಾಂಕದಲ್ಲಿ ಮಹಿಪಾಲ್ ಕಣಕ್ಕಿಳಿಯಬಹುದು. ಯಾಕೆಂದ್ರೆ ಇತ್ತೀಚೆಗೆ ಒಳ್ಳೆ ಫಾರ್ಮ್ ನಲ್ಲಿದ್ದಾರೆ. ದಿನೇಶ್ ಕಾರ್ತಿಕ್, ಪಿನಿಷರ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ವನಿಂದು ಹಸರಂಗ, ಸಿದ್ದಾರ್ಥ್ ಕೌಲ್, ಹರ್ಷಲ್ ಪಟೇಲ್ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರೆ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ವೇಗಿಗಳಾಗಿ ಸಿರಾಜ್, ಹೆಂಜಲ್ ವುಡ್ ಜೋಡಿ ಮೋಡಿ ಮಾಡುವ ನಿರೀಕ್ಷೆ ಇದೆ.