IPL 2022 | ಐಪಿಎಲ್ ನಲ್ಲಿ ಎಸ್ ಆರ್ ಹೆಚ್ ಅಪರೂಪದ ದಾಖಲೆ..!!
ಇಂಡಿಯನ್ ಪ್ರಿಮಿಯರ್ ಲೀಗ್ ನ 36 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಇದು ಎಸ್ ಆರ್ ಹೆಚ್ ನ ಸತತ ಐದನೇ ಗೆಲುವಾಗಿದೆ. ಮೊದಲ ಎರಡು ಪಂದ್ಯದಲ್ಲಿ ಸನ್ ರೈಸರ್ಸ್ ತಂಡ ಸೋಲು ಅನುಭವಿಸಿತ್ತು.
ಇದಾದ ಬಳಿಕ ಗೆಲುವಿನ ಟ್ರ್ಯಾಕ್ ಗೆ ಬಂದ ಸನ್ ರೈಸರ್ಸ್ ಹೈದರಾಬಾದ್, ಆರ್ ಸಿಬಿ ವಿರುದ್ದದ ಪಂದ್ಯದಲ್ಲಿ 72 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿದೆ.
ಇದರೊಂದಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಅಪರೂಪದ ದಾಖಲೆ ಬರೆದಿದೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಉಳಿಸಿ ಪಂದ್ಯ ಗೆದ್ದ ತಂಡಗಳ ಸಾಲಿನಲ್ಲಿ ಸನ್ ರೈಸರ್ಸ್ ನಾಲ್ಕನೇ ಸ್ಥಾನದಲ್ಲಿದೆ.

ಆರ್ ಸಿಬಿ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ 72 ಎಸೆತಗಳನ್ನು ಉಳಿಸಿದೆ.
ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಸ್ಥಾನದಲ್ಲಿದೆ.
ಮುಂಬೈ ತಂಡ 2008ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 87 ಎಸೆತಗಳನ್ನು ಉಳಿಸಿ ಗೆದ್ದಿತ್ತು.
ನಂತರದ ಸ್ಥಾನದಲ್ಲಿ ಕೊಚ್ಚಿ ಟಸ್ಕರ್ಸ್ 2011ರಲ್ಲಿ ರಾಜಸ್ಥಾನ್ ರಾಯಲ್ಸ್ ಮೇಲೆ 76 ಎಸೆತಗಳನ್ನು ಉಳಿಸಿ ಗೆದ್ದಿತ್ತು.
ಪಂಜಾಬ್ ಕಿಂಗ್ಸ್ ತಂಡ 2017ರಲ್ಲಿ ಡೆಲ್ಲಿ ಕ್ಯಾಪಟಲ್ಸ್ ವಿರುದ್ಧ ಪಂದ್ಯದಲ್ಲಿ 73 ಎಸೆತಗಳನ್ನು ಉಳಿಸಿ ಗೆದ್ದಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2018ರಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 71 ಎಸೆತಗಳನ್ನ ಉಳಿಸಿ ಗೆದ್ದಿತ್ತು.
ipl-2022-srh-was-4th-team-winning-most-balls-spare-ipl-history