IPL 2022 SRH VS RR: ಹೆಡ್ ಟು ಹೆಡ್ ದಾಖಲೆ ಹೇಗಿದೆ ಗೊತ್ತಾ..?
ಐಪಿಎಲ್ 2022 ಸೀಸನ್‌ನಲ್ಲಿ ಇಂದು ಸನ್‌ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ.
ಈ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಹಿಂದೆಂದಿಗಿಂತಲೂ ಬಲಿಷ್ಠವಾಗಿದ್ದರೇ, SRH ದುರ್ಬಲವಾಗಿರುವಂತೆ ಕಾಣುತ್ತಿದೆ. ಹಿಂದಿನ ದಾಖಲೆಗಳ ಪ್ರಕಾರ, ಎರಡು ತಂಡಗಳ ನಡುವಿನ 15 ಮುಖಾಮುಖಿಗಳಲ್ಲಿ ಆರೆಂಜ್ ಆರ್ಮಿ ಎಂಟು ಪಂದ್ಯಗಳನ್ನ ಗೆದ್ದಿದೆ, ಆದರೆ ಪಿಂಕ್ ಗ್ಯಾಂಗ್ ಏಳರಲ್ಲಿ ಗೆದ್ದಿದೆ.
ಎರಡೂ ತಂಡಗಳ ಬಲಾಬಲದ ಬಗ್ಗೆ ಮಾತಾಡೋದಾದ್ರೆ .. ಸಂಜು ಸ್ಯಾಮ್ಸನ್ ನೇತೃತ್ವದ ಆರ್ ಆರ್ ತಂಡ, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜಿಮ್ಮಿ ನೀಶಮ್, ರಸ್ಸಿ ದುಸ್ಸೆನ್, ರಯಾನ್ ಪರಾಗ್, ನಾಥನ್ ಕೌಲ್ಟರ್ ನೀಲ್, ಪ್ರಸಿದ್ಧ ಕ್ರಿಷ್ಣ, ನವದೀಪ್ ಸೈನಿ, ಯಶಸ್ವಿ ಜೈಸ್ವಾಲ್, ಒಬೆಡ್ ಮೆಕಾಯ್ ಅವರಂತಹ ದೇಶಿ ವಿದೇಶಿ ಆಟಗಾರರನ್ನು ಹೊಂದಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ನಿಕೋಲಸ್ ಪೂರನ್, ಭುವನೇಶ್ವರ್ ಕುಮಾರ್, ವಾಷಿಂಗ್ಟನ್ ಸುಂದರ್, ಉಮ್ರಾನ್ ಮಲಿಕ್, ಅಬ್ದುಲ್ ಸಮದ್, ಟಿ ನಟರಾಜನ್, ಮಾರ್ಕೊ ಜಾನ್ಸೆನ್, ಐಡೆನ್ ಮಾರ್ಕ್ರಾಮ್, ರೊಮಾರಿಯೊ ಶೆಪರ್ಡ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಪ್ಲೆಯಿಂಗ್ ಇಲೆವೆನ್
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮೆರೊ ಶೆಪರ್ಡ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.
ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಯಾನ್ ಪರಾಗ್, ನಾಥನ್ ಕೌಲ್ಟರ್ನೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್.
ipl-2022-sunrisers-hyderabad-vs-rajasthan-royals