IPL 2022 | ಟಿ ನಟರಾಜನ್ ಗೆ ಆಸ್ಟ್ರೇಲಿಯಾ ಟಿಕೆಟ್ ಪಕ್ಕಾ..!!
ಐಪಿಎಲ್-2022ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವೇಗಿ ಟಿ. ನಟರಾಜನ್ ಮಿಂಚುತ್ತಿದ್ದಾರೆ.
ತನ್ನ ಯಾರ್ಕರ್‌ಗಳೊಂದಿಗೆ ಪ್ರತಿಸ್ಪರ್ಧಿ ಬ್ಯಾಟರ್‌ಗಳ ಎದೆ ನಡುಗಿಸುತ್ತಿದ್ದಾರೆ.
ಶನಿವಾರ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ನಟರಾಜನ್ ಮೂರು ವಿಕೆಟ್ ಪಡೆದರು.
ಈ ಋತುವಿನಲ್ಲಿ ಇದುವರೆಗೆ 7 ಪಂದ್ಯಗಳನ್ನು ಆಡಿರುವ ನಟರಾಜನ್ 15 ವಿಕೆಟ್ ಪಡೆದಿದ್ದಾರೆ.
ನಟರಾಜನ್ ಪ್ರಸ್ತುತ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಹೀಗಾಗಿ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, ನಟರಾಜನ್ ಅವರನ್ನು ಹಾಡಿ ಹೊಗಳಿದ್ದಾರೆ.
ನಟರಾಜನ್ ಅವರ ಫಾರ್ಮ್ ನೋಡಿದರೇ ಅವರು ಖಂಡಿತವಾಗಿಯೂ ಟಿ20 ವಿಶ್ವಕಪ್ ತಂಡದಲ್ಲಿರುತ್ತಾರೆ ಎಂದು ಗವಾಸ್ಕರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಟಿ ನಟರಾಜನ್ ಯಾರ್ಕರ್ ಕಿಂಗ್ ಅನ್ನೋದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ.
ಅವರು ಗಾಯದಿಂದ ಚೇತರಿಸಿಕೊಂಡ ಬಳಿಕ ಉತ್ತಮ ಪ್ರದರ್ಶನ ನೀಡುತ್ತಿರುವುದು ನನಗೆ ಸಾಕಷ್ಟು ಖುಷಿಯನ್ನು ನೀಡುತ್ತಿದೆ.
ಟಿ 20 ವಿಶ್ವಕಪ್ 2021 ರಲ್ಲಿ ನಟರಾಜನ್ ಸೇವೆಗಳನ್ನು ಭಾರತ ತಂಡ ಕಳೆದುಕೊಂಡಿತ್ತು.
ನಟರಾಜನ್ 16 ರಿಂದ 20 ಓವರ್ ಗಳ ನಡುವೆ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ.
ಆತ ಸಂಪೂರ್ಣವಾಗಿ ಫಿಟ್ ಆಗಿರುವುದರಿಂದ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ.
ಹೀಗಾಗಿ ನಟರಾಜನ್ ಆಸ್ಟ್ರೇಲಿಯಾ ವಿಮಾನ ಹೇರೋಕೆ ಸಿದ್ಧವಾಗಿರಬೇಕು ಎಂದು ಸುನೀಲ್ ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ipl-2022-t-natarajan-wants-be-flight-australia sunil gavaskar