IPL 2022: ನನಗೆ ನಾನೇ ರೋಲ್ ಮಾಡಲ್.. ಭಾರತಕ್ಕಾಗಿ ಆಡೋದು ಕನಸು

1 min read
ipl-2022-umran-malik-i-am-my-own-role-model saaksha tv

IPL 2022: ನನಗೆ ನಾನೇ ರೋಲ್ ಮಾಡಲ್.. ಭಾರತಕ್ಕಾಗಿ ಆಡೋದು ಕನಸು

ಉಮ್ರಾನ್ ಮಲಿಕ್ .. ಕಳೆದ ಋತುವಿನಲ್ಲಿ ನೆಟ್ ಬೌಲರ್ ಆಗಿ ಬಂದು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ರಮುಖ ಆಟಗಾರರಾದ ಯುವ ಪ್ರತಿಭೆ.

ನಟರಾಜನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಅವರು ಇದೀಗ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಚೊಚ್ಚಲ ಪಂದ್ಯದಲ್ಲೇ ಅತ್ಯಂತ ವೇಗವಾಗಿ (ಗಂಟೆಗೆ ಸುಮಾರು 153 ಕಿ.ಮೀ) ಚೆಂಡನ್ನು ಎಸೆದು ಇತಿಹಾಸ ನಿರ್ಮಿಸಿದ್ದ ಕಾಶ್ಮೀರಿ ವೇಗದ ಬೌಲರ್.

ಈ ಸೀಸನ್ ನಲ್ಲಿ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ.

ಗಂಟೆಗೆ 145-150 ಕಿ.ಮೀ ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುತ್ತಿರುವ ಉಮ್ರಾನ್ ಮಲಿಕ್ ಶೀಘ್ರದಲ್ಲೇ ಭಾರತ ತಂಡದ ಪರ ಆಡಲಿದ್ದಾರೆ ಎಂದು ಕ್ರಿಕೆಟ್ ದಿಗ್ಗಜರು ಹೊಗಳುತ್ತಿದ್ದಾರೆ.

ipl-2022-umran-malik-i-am-my-own-role-model saaksha tv

ಈ ಹಿನ್ನಲೆಯಲ್ಲಿ ಅವರು ಮಾತನಾಡುತ್ತಾ,, ಟೀಂ ಇಂಡಿಯಾ ಪರ ಆಡುವುದು ನನ್ನ ಕನಸು  ಎಂದಿದ್ದಾರೆ.

ಸಮಾನ್ಯವಾಗಿಯೇ ನಾನು ಚೆಂಡನ್ನು ವೇಗವಾಗಿ ಎಸೆಯುತ್ತೇನೆ. ನನಗೆ ನಾನೇ ರೋಲ್ ಮಾಡಲ್.

ಇರ್ಫಾನ್ ಪಠಾಣ್ ಅವರು ನಮಗೆ ತರಬೇತಿ ನೀಡಲು ಬಂದಾಗ ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ.

 ದೇಶಕ್ಕಾಗಿ ಆಡುವುದು ನನ್ನ ಕನಸು.  ಚೆನ್ನಾಗಿ ಆಡಿ ಜಮ್ಮು ಕಾಶ್ಮೀರವನ್ನು ದೇಶದ ಜನ ಹೆಮ್ಮೆಪಡುವಂತೆ ಮಾಡುತ್ತೇವೆ ಎಂದು ಉಮ್ರಾನ್ ಭಾವುಕರಾಗಿದ್ದಾರೆ.

ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ವಿಶ್ವದ ಮೂವರು ಅತ್ಯುತ್ತಮ ಬೌಲರ್‌ಗಳು ಎಂದಿದ್ದಾರೆ. ipl-2022-umran-malik-i-am-my-own-role-model

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd