Suyash Prabhudessai | ಭಯ ಹುಟ್ಟಿಸಿದ ಸಿಡಿಲಮರಿ ಸುಯಾಶ್..!!!

1 min read
IPL 2022: Who is Suyash Prabhudessai saaksha tv

ಭಯ ಹುಟ್ಟಿಸಿದ ಸಿಡಿಲಮರಿ ಸುಯಾಶ್..!!!

ಸುಯಾಶ್ ಪ್ರಭುದೇಸಾಯಿ..!! ಸದ್ಯದ ಟಾಕ್ ಆಫ್ ದಿ ಟೌನ್..!! ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮೊದಲ ಪಂದ್ಯದಲ್ಲಿಯೇ ಎಲ್ಲರ ಗಮನ ಸೆಳೆದ ಯುವ ಆಲ್ ರೌಂಡರ್. ಚೊಚ್ಚಲ ಪಂದ್ಯದಲ್ಲಿಯೇ ಎದುರಾಳಿಗಳಿಗೆ ಬೆವರಿಳಿಸಿದ ಸಿಡಿಲಮರಿ. ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಂದು ಕ್ಷಣ ಭಯನ ಹುಟ್ಟಿಸಿದ ಯುವ ಸೆನ್ ಸೇಷನ್..!

ಹೌದು..! ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರೋಚಿತ ಸೋಲು ಅನುಭವಿಸಿದೆ. 217 ರನ್ ಗಳ ಗುರಿಯನ್ನ ಬೆನ್ನತ್ತಿದ ಆರ್ ಸಿಬಿ ತಂಡ 23 ರನ್ ಗಳ ಅಂತರದಲ್ಲಿ ಸೋಲು ಕಂಡಿದೆ. ಆದ್ರೆ ಈ ಪಂದ್ಯದಲ್ಲಿ ಚೆನ್ನೈ ಗೆಲುವಿಗಿಂತ ಎಲ್ಲರ ಗಮನ ಸೆಳೆದಿದ್ದು, ಆರ್ ಸಿಬಿಯ ಯುವ ಆಲ್ ರೌಂಡರ್ ಸುಯಾಶ್ ಪ್ರಭುದೇಸಾಯಿ..!!

ಸುಯಾಶ್ ಪ್ರಭುದೇಸಾಯಿ ಮೂಲತಃ ಗೋವಾ ಮೂಲದ ಆಲ್ ರೌಂಡರ್.. ಚೆನ್ನೈ ವಿರುದ್ದದ ಪಂದ್ಯಕ್ಕೂ ಮುನ್ನ ಸುಯಾಶ್ ಯಾರು ಅಂತಾನೇ ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಚೆನ್ನೈ ವಿರುದ್ಧ ಆರ್ ಸಿಬಿ ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್ ಗೆ ಬಂದ ಸುಯಾಶ್ ಪ್ರಭುದೇಸಾತಿ ಐಪಿಎಲ್ ಪ್ರಿಯರ ಮೆಚ್ಚುಗೆಗೆ ಪಾತ್ರರಾದರು.

ಸಂಕಷ್ಟದ ಸ್ಥಿತಿಯಲ್ಲಿ ಕ್ರೀಸ್ ಗೆ ಬಂದ ಸುಯಾಶ್ ಪ್ರಭುದೇಸಾಯಿ, ಶಹಬ್ಬಾಸ್ ಅಹಮ್ಮದ್ ಜೊತೆ ಸೇರಿಕೊಂಡು ಅದ್ಭುತ ಇನ್ನಿಂಗ್ಸ್ ಆಡಿದರು. 18 ಎಸೆತಗಳನ್ನು ಎದುರಿಸಿದ ಸುಯಾಶ್ 34 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿ, ಒಂದು ಸಿಕ್ಸರ್ ಸೇರಿದೆ. ಸುಯಾಶ್ ಅವರ ಈ ಪ್ರದರ್ಶನ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಸೋಲಿನ ಭಯವನ್ನುಂಟು ಮಾಡಿತ್ತು. ಮುಖ್ಯವಾಗಿ ವಿಕೆಟ್ ಹಿಂದೆ ನಿಂತಿದ್ದ ಎಂ.ಎಸ್.ಧೋನಿ ಕೂಡ ಸುಯಾಶ್ ಬ್ಯಾಟಿಂಗ್ ಗೆ  ಅಚ್ಚರಿಗೊಂಡಿದ್ದರು. ಯಾಕಂದರೆ  ಸುಯಾಶ್ ಕ್ರೀಸ್ ಗೆ ಬರೋವಷ್ಟರದಲ್ಲಿ ಆರ್ ಸಿಬಿ ಸೋಲಿನ ಹಾದಿಯಲ್ಲಿ ನಡೆಯುತ್ತಿತ್ತು. ಹೀಗಾಗಿ ಚೆನ್ನೈ ಆಟಗಾರರ ಕೂಡ ತುಸು ನೆಮ್ಮದಿಯಿಂದ ಇದ್ರೂ, ಆದ್ರೆ ಸುಯಾಶ್ ಆಟ ಆ ನೆಮ್ಮದಿಯಲ್ಲಿ ಕೊಂಚ ಸಮಯ ಕಿತ್ತುಕೊಂಡಿತು. ಆದ್ರೂ ಆರ್ ಸಿಬಿ ಪಂದ್ಯ ಸೋಲಬೇಕಾಯಿತು. ಸುಯಾಶ್ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲದೇ ಫೀಲ್ಡಿಂಗ್ ನಲ್ಲಿಯೂ ಮಿಂಚಿದರು. ಹೀಗಾಗಿಯೇ ಗೂಗಲ್ ನಲ್ಲಿ ಕ್ರಿಕೆಟ್ ಅಭಿಮಾನಿಗಳು ಸುಯಾಶ್ ಬಗ್ಗೆ ಸರ್ಚ್ ಮಾಡ್ತಿದ್ದಾರೆ.

ಅಂದಹಾಗೆ

IPL 2022: Who is Suyash Prabhudessai saaksha tv

ಸುಯಾಶ್ ಡಿಸೆಂಬರ್ 6, 1997 ರಂದು ಜನಿಸಿದರು.  ಗೋವಾ ಪರ ದೇಶೀಯ ಪಂದ್ಯಾವಳಿಗಳಲ್ಲಿ ಆಡುವ ಬಲಗೈ ಆಲ್ರೌಂಡರ್, 2016 ರಲ್ಲಿ ಲಿಸ್ಟ್ ಎ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 2016-17ರ ಋತುವಿನಲ್ಲಿ ಬೆಂಗಾಲ್ ವಿರುದ್ಧದ ಪಂದ್ಯದೊಂದಿಗೆ ವಿಜಯ್ ಹಜಾರೆ ಟ್ರೋಫಿ ODI ಗೆ ಪಾದಾರ್ಪಣೆ ಮಾಡಿದರು. 2018-19 ರ ರಣಜಿ ಟ್ರೋಫಿಯ ಭಾಗವಾಗಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಎಂಟ್ರಿ ಕೊಟ್ಟಿದ್ದಾರೆ.  ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಂದು ಶತಕ ಮತ್ತು ಎಂಟು ಅರ್ಧಶತಕಗಳು ಸೇರಿದಂತೆ ಇದುವರೆಗೆ ಎಂಟು ವಿಕೆಟ್ಗಳನ್ನು ಪಡೆದಿರುವ ಬ್ಯಾಟ್ಸ್ಮನ್ ಆಲ್ರೌಂಡರ್ ಆಗಿದ್ದಾರೆ. ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿರುವ ಸುಯಶ್ ಅವರನ್ನು ಐಪಿಎಲ್ ಮೆಗಾ ಹರಾಜು -2022ರಲ್ಲಿ ಆರ್ಸಿಬಿ 30 ಲಕ್ಷ ರೂ.ಗೆ ಖರೀದಿಸಿತ್ತು.

ಒಟ್ಟಾರೆ ಹರ್ಷಲ್ ಪಟೇಲ್ ಬದಲಿಗೆ ಆಡುವ 11ರಲ್ಲಿ ಅವಕಾಶ ಪಡೆದ ಸುಯಾಶ್, ಮೊದಲ ಪಂದ್ಯದಲ್ಲಿಯೇ ಮಿಂಚುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ.

IPL 2022: Who is Suyash Prabhudessai

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd