ಇದು ಕೊನೆ ಮ್ಯಾಚ್ ಅಲ್ಲ : ವದಂತಿಗಳಿಗೆ ಎಂಎಸ್ ಡಿ ಬ್ರೇಕ್
ಎಂಎಸ್ ಧೋನಿಗೆ ಇದು ಕೊನೆಯ ಐಪಿಎಲ್.. ಎಂಎಸ್ ಡಿ ಆಟ ಮುಗೀತು. ಸೋಲಿನಿಂದ ಹತಾಶೆರಾಗಿರುವ ಧೋನಿ ಐಪಿಎಲ್ ನಿಂದಲೂ ನಿವೃತ್ತಿ ಪಡೆಯುತ್ತಾರಾ ಎಂಬ ಚರ್ಚೆಗೆ ಮಿಸ್ಟರ್ ಕೂಲ್ ಎಂಎಸ್ ಧೋನಿ ಕೂಲ್ ಅಂಡ್ ಕಾಮ್ ಆಗಿ ಸ್ಪಷ್ಟನೆ ನೀಡಿದ್ದಾರೆ.
ಐಪಿಎಲ್ ನ ಈ ಆವೃತ್ತಿನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಪ್ರದರ್ಶನ ನೀಡಿದೆ. ಇದೇ ಮೊದಲ ಬಾರಿ ಚೆನ್ನೈ ಟೂರ್ನಿಯಿಂದ ಹೊರಬಿದ್ದಿದೆ.
ಹೀಗಾಗಿ ಎಂಎಸ್ ಡಿ ಐಪಿಎಲ್ ಗೂ ಗುಡ್ ಬೈ ಹೇಳ್ತಾರೆ ಎಂದು ಹೇಳಲಾಗುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಂತೂ ಧೋನಿ ಐಪಿಎಲ್ ಗೆ ನಿವೃತ್ತಿ ಕೊಟ್ಟೇ ಬಿಟ್ಟರೂ ಎಂಬ ಸುದ್ದಿಯೂ ಹರಿದಾಡಿತ್ತು. ಆದ್ರೆ ಇದಕ್ಕೆ ಇದು ನನ್ನ ಕೊನೆಯ ಪಂದ್ಯವಲ್ಲ ಎಂ ಎಸ್ ಧೋನಿ ಸ್ಪಷ್ಟನೆ ನೀಡಿದ್ದಾರೆ.
ಹೌದು..! ಚೆನ್ನೈ ಸೂಪರ್ ಕಿಂಗ್ಸ್ ಈ ಐಪಿಎಲ್ ಪ್ರಸಕ್ತ ಋತುವಿನ ತನ್ನ ಅಂತಿಮ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಎದುರಿಸುತ್ತಿದೆ.
ಇದನ್ನೂ ಓದಿ : ಪಂದ್ಯ ಸೋತರೂ ಕನ್ನಡಿಗರ ಹೃದಯ ಗೆದ್ದ ಆರ್ ಸಿಬಿ
ಪಂದ್ಯ ಆರಂಭಕ್ಕೂ ಮುನ್ನ ಟಾಸ್ ವೇಳೆ ಕಾಮೆಂಟೇಟರ್ ಡ್ಯಾನಿ ಮೋರಿಸನ್, ‘ಇದು ನಿಮ್ಮ ಕೊನೆಯ ಪಂದ್ಯವೇ?’ ಎಂದು ಧೋನಿ ಅವರನ್ನು ಪ್ರಶ್ನಿಸಿದ್ರು.
ಇದಕ್ಕೆ ನಗುನಗುತ್ತಲೇ ಉತ್ತರ ನೀಡಿದ ಎಂ.ಎಸ್ ಧೋನಿ ‘ಇದು ನನ್ನ ಕೊನೆಯ ಪಂದ್ಯವಲ್ಲ’ ಎಂದಿದ್ದಾರೆ. ಆ ಮೂಲಕ ನಿವೃತ್ತಿ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಇನ್ನು ಟಾಸ್ ಗೆದ್ದ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡು ಪಂಜಾಬ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಮೊದಲು ಬ್ಯಾಟ್ ಮಾಡಿದ ರಾಹುಲ್ ಹುಡುಗರು ನಿಗದಿತ 20 ಓವರ್ ಗಳಲ್ಲಿ ಹೂಡಾ ಅವರ ಅದ್ಭುತ ಪ್ರದರ್ಶನದೊಂದಿಗೆ 143 ರನ್ ಗಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel