ಬಿಸಿಸಿಐಗೆ ವಿವೋ ಕಂಪೆನಿಯ ಜೊತೆಗಿನ ಒಪ್ಪಂದ ರದ್ದುಗೊಳಿಸಲು ಮೀನ ಮೇಷ ಯಾಕೆ ?

ಬಿಸಿಸಿಐಗೆ ವಿವೋ ಕಂಪೆನಿಯ ಜೊತೆಗಿನ ಒಪ್ಪಂದ ರದ್ದುಗೊಳಿಸಲು ಮೀನ ಮೇಷ ಯಾಕೆ ?

ದೇಶ ಮೊದಲು.. ಆನಂತರ ದುಡ್ಡು.. ಅದ್ರಲ್ಲೂ ದೇಶದ ಸೈನಿಕನ ಗೌರವದ ಮುಂದೆ ಯಾವ ದುಡ್ಡಿಗೂ ಬೆಲೆನೇ ಇಲ್ಲ. ಕೇವಲ 440 ಕೋಟಿ ರೂಪಾಯಿಗಾಗಿ ನಾವು ಚೀನಾದ ಕಂಪೆನಿಯನ್ನು ಅವಲಂಬನೆ ಮಾಡಬೇಕಾ ? ಅಷ್ಟು ದುಡ್ಡು ಕೊಡುವ ಸಾಮಥ್ರ್ಯ ನಮ್ಮ ದೇಶದ ಕಂಪೆನಿಗಳಿಗಿಲ್ವಾ ?
ಹೌದು, ಈಗಾಗಲೇ ಚೀನಾದ 59 ಆಪ್‍ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದ್ರ ಬೆನ್ನಲ್ಲೇ ಈಗ ಬಿಸಿಸಿಐಗೆ ದೊಡ್ಡ ತಲೆನೋವು ಎದುರಾಗಿದೆ. ಮೊದಲೇ ಐಪಿಎಲ್ ಟೂರ್ನಿಗೆ ಕೊರೋನಾ ವೈರಸ್ ಅಡ್ಡಿಯನ್ನುಂಟು ಮಾಡುತ್ತಿದೆ. ಇದೀಗ ಐಪಿಎಲ್ ಪ್ರಾಯೋಜಕತ್ವ ನೀಡಿರುವ ವಿವೋ ಕಂಪೆನಿಯ ಪ್ರಾಯೋಜಕತ್ವವನ್ನು ಹಿಂಪಡೆಯಬೇಕು ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಕಳೆದ ಐದು ವರ್ಷಗಳ ಐಪಿಎಲ್ ಟೂರ್ನಿಗೆ ವಿವೋ ಮೊಬೈಲ್ ಕಂಪೆನಿಯು 440 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿದೆ. ಆದ್ರೆ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚನೆ ಮಾಡುತ್ತಿದೆ.
ಈಗಾಗಲೇ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಅವರು ವಿವೋ ಕಂಪೆನಿಯ ಪ್ರಾಯೋಜಕತ್ವವನ್ನು ಪ್ರಶ್ನೆ ಮಾಡಿದ್ದಾರೆ. ದೇಶ ಮುಖ್ಯ. ನಮ್ಮ ಮೊದಲ ಆದ್ಯತೆ ದೇಶ, ದೇಶದ ಸೈನಿಕರು. ದುಡ್ಡು ಆನಂತರ. ಅಷ್ಟಕ್ಕೂ ಐಪಿಎಲ್ ಇಂಡಿಯನ್ ಪ್ರೀಮಿಯರ್ ಲೀಗ್. ಚೈನೀಸ್ ಪ್ರೀಮಿಯರ್ ಲೀಗ್ ಅಲ್ಲ. ವಿವೋ ಕಂಪೆನಿಯಂತೆ ಭಾರತದ ಕಂಪೆನಿಗಳು ಪ್ರಾಯೋಜಕತ್ವ ನೀಡಲು ಸಾಮಥ್ರ್ಯವಿದೆ. ಯಾವುದಕ್ಕೂ ಮನಸ್ಸಿರಬೇಕು. ಕಠಿಣ ನಿರ್ಧಾರ ತೆಗೆದುಕೊಳ್ಳುವಂತಹ ದಿಟ್ಟತನ ಇರಬೇಕು ಅನ್ನೋ ಧಾಟಿಯಲ್ಲಿ ಹೇಳಿದ್ದಾರೆ.
ಆದ್ರೆ ಬಿಸಿಸಿಐ ಮಾತ್ರ ಈ ಬಗ್ಗೆ ಯಾವ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಅಲ್ಲದೆ ಈ ಬಗ್ಗೆ ಬಿಸಿಸಿಐ ಸಭೆಯನ್ನು ನಡೆಸಲು ದಿನಾಂಕವನ್ನು ಪ್ರಕಟಿಸಿಲ್ಲ. ಆದ್ರೆ ಈ ಬಗ್ಗೆ ಬಿಸಿಸಿಐ ಮತ್ತು ಐಪಿಎಲ್‍ನ ಪದಾಧಿಕಾರಿಗಳು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಬಿಸಿಸಿಐನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಅದೇನೆ ಇರಲಿ, ಬಿಸಿಸಿಐ ವಿವೋ ಕಂಪೆನಿಯ ಪ್ರಾಯೋಜಕತ್ವದಿಂದ ಹೊರಬರುವುದು ದೊಡ್ಡ ಕಷ್ಟವೇನೂ ಆಗಲ್ಲ. ಅದೂ ಅಲ್ಲದೆ ಈ ಬಾರಿ ಐಪಿಎಲ್ ಟೂರ್ನಿ ನಡೆಯುತ್ತದೆ ಎಂಬುದು ಕೂಡ ಕಷ್ಟ.. ಕಷ್ಟ.. ಹೀಗಾಗಿ ಬಿಸಿಸಿಐ ತಾನೇ ಮುಂದೇ ನಿಂತು ಹೊಸ ಭಾರತೀಯ ಕಂಪೆನಿಗಳ ಪ್ರಾಯೋಜಕತ್ವವನ್ನು ಪಡೆದುಕೊಂಡು ಐಪಿಎಲ್ ಟೂರ್ನಿಯನ್ನು ಸಂಘಟಿಸುವುದು ಒಳ್ಳೆಯದ್ದು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This