IPL 2021 | ರಾ ರಾ ಪಡೆ ಸೇರಿದ ರಾಸ್ಸಿ

1 min read
ipl

ರಾ ರಾ ಪಡೆ ಸೇರಿದ ರಾಸ್ಸಿ

ಸ್ಯಾಮ್ಸನ್ ಪಡೆ ಸೇರಿದ ಸೌತ್ ಆಫ್ರಿಕಾ ಬ್ಯಾಟ್ಸ್ ಮೆನ್

ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತಷ್ಟು ಬಲ ಬಂದಿದೆ. ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬದಲಿಗೆ ಸೌತ್ ಆಫ್ರಿಕಾದ ಆಟಗಾರ ರಾಸ್ಸಿ ವ್ಯಾನ್ ಡೆರ್ ಡಸೆನ್ ಸೇರ್ಪಡೆಗೊಂಡಿದ್ದಾರೆ.

ಗಾಯದ ಕಾರಣದಿಂದಾಗಿ ಐಪಿಎಲ್‍ನಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಅರ್ಧಕ್ಕೆ ವಾಪಾಸಾಗಿದ್ದಾರೆ. ಈ ಸ್ಥಾನಕ್ಕೆ ರಾಸ್ಸಿ ವ್ಯಾನ್‍ಡೆರ್ ಡಸೆನ್ ಅವರನ್ನ ನೇಮಕ ಮಾಡಿಕೊಳ್ಳಲಾಗಿದೆ.

ipl

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫಿಲ್ಡಿಂಗ್ ವೇಳೆ ಸ್ಟೋಕ್ಸ್ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಬೆರಳಿನ ಮೂಳೆ ಮುರಿತಕ್ಕೊಳಗಾಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಗುಳಿದು ಇಂಗ್ಲೆಂಡ್‍ಗೆ ವಾಪಾಸಾಗಿದ್ದಾರೆ.

ಈ ಸ್ಥಾನಕ್ಕೆ ರಾಸ್ಸಿ ಬಂದಿದ್ದು, ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಅವರು 20 ಪಂದ್ಯಗಳಲ್ಲಿ ಭಾಗಿಯಾಗಿದ್ದು 628 ರನ್‍ಗಳನ್ನು ಬಾರಿಸಿದ್ದಾರೆ. 41.87ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಅಂದಹಾಗೆ ಆರ್ ಆರ್ ಗೆ ಈ ಬಾರಿ ವಿದೇಶಿ ಆಟಗಾರರ ಕೊರತೆ ಕಾಣುತ್ತಿದೆ. ತಂಡದಲ್ಲಿ ಸದ್ಯ ನಾಲ್ವರು ವಿದೇಶಿ ಆಟಗಾರರು ಮಾತ್ರವೇ ಉಳಿದುಕೊಂಡಿದ್ದಾರೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd