Ashwin | ಕನಿಷ್ಠ ಜ್ಞಾನವಿಲ್ಲದೆ ಮಾತನಾಡಬೇಡಿ ಎಂದಿದ್ಯಾಕೆ ಅಶ್ವಿನ್..?
ಇಂಡಿಯನ್ ಪ್ರಿಮಿಯರ್ ಲೀಗ್ ಅನ್ನು ಟೀಕಿಸುತ್ತಾ ಇಂಗ್ಲೆಂಡ್ ಪತ್ರಕರ್ತ ಲಾರೆನ್ಸ್ ಬೂತ್ ಮಾಡಿದ ಕಾಮೆಂಟ್ ಗಳಿಗೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಿರುಗೇಟು ನೀಡಿದ್ದಾರೆ.
ಐಪಿಎಲ್ ಕ್ರಿಕೆಟ್ ಕ್ಯಾಲೆಂಡರ್ ವರ್ಷದ 1/3 ಭಾಗವನ್ನು ಆವರಿಸುತ್ತಿದೆ ಮತ್ತು ಇದು ಆಟಗಾರರ ನೈತಿಕತೆಯನ್ನು ಹಾಳು ಮಾಡುತ್ತಿದೆ ಎಂದು ಲಾರೆನ್ಸ್ ಹೇಳಿದ್ದರು. ಇದೀಗ ಹೇಳಿಕೆಗಳನ್ನು ಖಂಡಿಸಿರುವ ಅಶ್ವಿನ್, ನಾನು ಒಂದು ವಿಷಯವನ್ನು ಹೇಳಬಯಸುತ್ತೇನೆ.
ನಿಮ್ಮ ದೇಶದಲ್ಲಿ ಇಂಗ್ಲೆಂಡ್ ಪ್ರೀಮಿಯರ್ ಲೀಗ್ (EPL) ಕನಿಷ್ಠ ಆರು ತಿಂಗಳವರೆಗೆ ನಡೆಯುತ್ತದೆ. ಇದಕ್ಕೆ ನೀನು ಉತ್ತರ ಕೊಡು. ಐಪಿಎಲ್‌ನಲ್ಲಿ ಆಟಗಾರರಿಗೆ ಉತ್ತಮ ವಿಶ್ರಾಂತಿ ಸಿಗುತ್ತದೆ.
ಒಂದು ತಂಡವು ವಾರಕ್ಕೆ ಗರಿಷ್ಠ ಎರಡು ಪಂದ್ಯಗಳನ್ನು ಆಡುತ್ತದೆ. ಕೆಲವೊಮ್ಮೆ ಮೂರು ಪಂದ್ಯಗಳು ನಡೆದಿರುವ ನಿದರ್ಶನಗಳಿವೆ. ಈ ಲೆಕ್ಕಾಚಾರದಿಂದ ಆಟಗಾರರಿಗೆ ಎರಡು ದಿನ ವಿಶ್ರಾಂತಿ ಸಿಗುತ್ತಿದೆ.
ಕನಿಷ್ಠ ಜ್ಞಾನವಿಲ್ಲದೆ ಅನಗತ್ಯ ಕಾಮೆಂಟ್‌ಗಳನ್ನು ಮಾಡಬೇಡಿ. ಇಪಿಎಲ್‌ನಿಂದಾಗಿ ಆಟಗಾರರು ನಿಜವಾಗಿಯೂ ದಣಿದಿದ್ದಾರೆಯೇ ಎಂದು ನೋಡ್ಕೋ.
ಐಪಿಎಲ್‌ನಂತಹ ಲೀಗ್‌ಗಳಿಂದಾಗಿ ಕೆಲವು ಆಟಗಾರರು ತಮ್ಮ ದೇಶದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡುತ್ತಿದ್ದಾರೆ ಎಂದಿದ್ದಾರೆ ಅಶ್ವಿನ್. IPL ravichandran-ashwin-criticize-england-journalist