ಇರಾಕ್ ಗಡಿಯಲ್ಲಿ 13 ಟರ್ಕಿ ಪ್ರಜೆಗಳ ಮೃತದೇಹಗಳು ಪತ್ತೆ

1 min read

ಇರಾಕ್ ಗಡಿಯಲ್ಲಿ 13 ಟರ್ಕಿ ಪ್ರಜೆಗಳ ಮೃತದೇಹಗಳು ಪತ್ತೆ

ಇರಾಕ್: ಉತ್ತರ ಇರಾಕ್ ಗಡಿ ಪ್ರದೇಶದ ಗುಹಾ ಸಂಕೀರ್ಣವೊಂದರಲ್ಲಿ ಕುರ್ದಿಷ್ ಬಂಡುಕೋರರು ಅಪಹರಿಸಿದ್ದ 13 ಮಂದಿ ಟರ್ಕಿ ಪ್ರಜೆಗಳ ಮೃತದೇಹಗಳು ಪತ್ತೆಯಾಗಿವೆ.

ಈ ಕುರಿತು ಟರ್ಕಿಯ ರಕ್ಷಣಾ ಸಚಿವ ಹುಲುಸಿ ಅಕಾರ್ ತಿಳಿಸಿದ್ದಾರೆ. ಮೃತಪಟ್ಟವರ ಪೈಕಿ 12 ಮಂದಿಗೆ ತಲೆಗೆ ಗುಂಡಿಕ್ಕಿ ಹತ್ಯೆಗೈಯಲಾಗಿದ್ದರೆ, ಇನ್ನೋರ್ವನ ಹೆಗಲಿಗೆ ಆದ ಬುಲೆಟ್ ಗಾಯಗಳಿಂದಾಗಿ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಥಾರ್ ಮರುಭೂಮಿಯಲ್ಲಿ ಪಾಕ್ ಸಮರಾಭ್ಯಾಸ..!

ಇನ್ನೂ ಪ್ರತ್ಯೇಕ ಕುರ್ದಿಷ್ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಪಿಕೆಕೆ ಬಂಡುಕೋರ ವಿರುದ್ಧ ಟರ್ಕಿಯ ಗಡಿಯಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಮೃತದೇಹಗಳು ಪತ್ತೆಯಾಗಿವೆ.

ದೇಶದ ಗಡಿ ಕಾಪಾಡಲು ಇಸ್ರೇಲ್ ನ ವಾಯುಪಡೆಯಿಂದ ಸಮರಾಭ್ಯಾಸ..!

ಕುರ್ದ್ ಹೋರಾಟಗಾರರ ಜೊತೆ ನಡೆದ ಭೀಕರ ಸಂಘರ್ಷದ ಬಳಿಕ ಈ ಗುಹಾ ಸಂಕೀರ್ಣವನ್ನು ಟರ್ಕಿ ಪಡೆಗಳು ವಶಕ್ಕೆ ಪಡೆದುಕೊಂಡಿದ್ದವು. ಟರ್ಕಿ ಪಡೆಗಳು ಕಾರ್ಯಾಚರಣೆ ಆರಂಭಿಸಿದ ಸಂದರ್ಭದಲ್ಲ್ಲಿ ಟರ್ಕಿ ಪೌರರನ್ನು ಕುರ್ದಿಷ್ ಬಂಡುಕೋರರು ಹತ್ಯೆಗೈದಿರುವ ಸಾಧ್ಯತೆಯಿದೆಯೆಂದು ಶಂಕಿಸಲಾಗಿದೆ.

ಇರಾನ್ – ಅಫ್ಘಾನ್ ಗಡಿಯಲ್ಲಿ ತೈಲ ಟ್ಯಾಂಕರ್ ಸ್ಫೋಟ: 500 ಟ್ರಂಕ್ ಗಳು ಬೆಂಕಿಗಾಹುತಿ, 20 ಮಂದಿಗೆ ಗಾಯ..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd