ದೇಶದ ಗಡಿ ಕಾಪಾಡಲು ಇಸ್ರೇಲ್ ನ ವಾಯುಪಡೆಯಿಂದ ಸಮರಾಭ್ಯಾಸ..!

1 min read

ದೇಶದ ಗಡಿ ಕಾಪಾಡಲು ಇಸ್ರೇಲ್ ನ ವಾಯುಪಡೆಯಿಂದ ಸಮರಾಭ್ಯಾಸ..!

ಇಸ್ರೇಲ್ : ಇಸ್ರೇಲ್ ನ ಉತ್ತರ ಭಾಗದ ಗಡಿ ಪ್ರದೇಶದಲ್ಲಿ ಇಸ್ರೇಲ್ ನ ವಾಯುಪಡೆಯು ಸಮರಾಭ್ಯಾಸ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಹೌದು ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಇಸ್ರೇಲ್ ನ ವಾಯುಪಡೆಯು ಅಚ್ಚರಿಯ ಸಮರಾಭ್ಯಾಸವನ್ನು ಹಮ್ಮಿಕೊಂಡಿದೆ.

ಬುಧವಾರದವರೆಗೆ ಈ ಅಭ್ಯಾಸ ನಡೆಯಲಿದ್ದು, ದೇಶದ ವಾಯುನೆಲೆಯಲ್ಲಿ ಯುದ್ಧ ವಿಮಾನಗಳ ಹಾರಾಟವೂ ಹೆಚ್ಚಲಿದೆ ಎಂದು ಸೇನೆ ತಿಳಿಸಿದೆ.
ದೇಶದ ಗಡಿಗಳನ್ನು ಕಾಪಾಡುವುದು, ಈ ಭಾಗದಲ್ಲಿ ವಾಯುದಾಳಿ ಸಾಮರ್ಥ್ಯ ಹೆಚ್ಚಿಸುವುದು, ಗುಪ್ತಚರ ಮಾಹಿತಿ ಪಡೆಯುವುದು ಸಹಿತ ಹಲವು ಉದ್ದೇಶಗಳು ಈ ಅಭ್ಯಾಸದ ಹಿಂದೆ ಇದೆ ಎನ್ನಲಾಗಿದೆ.

ಥಾರ್ ಮರುಭೂಮಿಯಲ್ಲಿ ಪಾಕ್ ಸಮರಾಭ್ಯಾಸ..!

ಸಿರಿಯಾದಲ್ಲಿನ ಇರಾನ್ ನೆಲೆಗಳನ್ನು ನಾಶಪಡಿಸುವ ಸಲುವಾಗಿ ಇಸ್ರೇಲ್ ಈಗಾಗಲೇ ಹಲವಾರು ವಾಯು ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಲೆಬನಾನ್ನ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಗೆ ಇರಾನ್ ನಿಂದ ಇನ್ನಷ್ಟು ಸುಧಾರಿತ ಶಸ್ತಾಸ್ತ್ರಗಳು ರವಾನೆಯಾಗುವುದನ್ನು ತಡೆಗಟ್ಟುವ ಸಲುವಾಗಿ ಇಸ್ರೇಲ್ ಇಂತಹ ಯುದ್ಧ ತಂತ್ರಗಳನ್ನು ರೂಪಿಸುತ್ತಿದೆ ಎಂದು ಸೇನೆ ಹೇಳಿಕೊಂಡಿದೆ.

ಇರಾನ್ – ಅಫ್ಘಾನ್ ಗಡಿಯಲ್ಲಿ ತೈಲ ಟ್ಯಾಂಕರ್ ಸ್ಫೋಟ: 500 ಟ್ರಂಕ್ ಗಳು ಬೆಂಕಿಗಾಹುತಿ, 20 ಮಂದಿಗೆ ಗಾಯ..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd