ಬೆಳಗಾವಿ: ಕಬ್ಬಿಣ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ನಾಲ್ವರು ಮಹಿಳಾ ಪಾದಾಚಾರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರ್ಖಾನೆಗೆ ಕಬ್ಬು ಸಾಗಾಟ ಟ್ರಾಕ್ಟರ್ ಟೇಲರ್ ಪಲ್ಟಿಯಾಗಿ ಪಾದಾಚಾರಿಗಳ ಮೇಲೆ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಮಾಲಾಬಾಯಿ ರವಸಾಬ್ ಐನಾಪುರೆ (61), ಚಂಪಾ ಲಕ್ಕಪ್ಪ ತಳಕಟ್ಟಿ (50), ಭಾರತಿ ವಡ್ರಾಳೆ (40) ಹಾಗೂ ಶೇಕೂ ನರಸಾಯಿ (45) ಸಾವನ್ನಪ್ಪಿದ ಮಹಿಳೆಯರು ಎನ್ನಲಾಗಿದೆ. ಟ್ರಾಕ್ಟರ್ ಟೇಲರ್ ನ ಚಕ್ರ ಕಟ್ಟಾದ ಪರಿಣಾಮ ಟೇಲರ್ ಪಾದಾಚಾರಿಗಳ ಮೇಲೆ ಬಿದ್ದಿದೆ. ಈ ನಾಲ್ವರು ಮಹಿಳೆಯರು ಕೃಷಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಭೇಟಿ ಮಾಡಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.