ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಹೀಗಾಗಿ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ.
ಆರ್ ಸಿಬಿ ಈಗಾಗಲೇ ಆಡಿರುವ 7 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಸೋತು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎರಡು ಅಂಕದೊಂದಿಗೆ ರನ್ ರೇಟ್ ಕೂಡ ಹೀನಾಯ ಸ್ಥಿತಿಯಲ್ಲಿದ್ದು -1.185 ಹೊಂದಿದೆ.
ಅಲ್ಲದೇ, ಈ ತಂಡಕ್ಕೆ ಇನ್ನು ಉಳಿದಿರುವುದು ಕೇವಲ 7 ಪಂದ್ಯಗಳು. ಇನ್ನುಳಿದ ಎಲ್ಲ ಪಂದ್ಯಗಳಲ್ಲಿಯೂ ಆರ್ ಸಿಬಿ ಗೆದ್ದರೆ ಮಾತ್ರ ಅದರ ಪ್ಲೇ ಆಫ್ ಕನಸು ನನಸಾಗಬಹುದು. ಜೊತೆಗೆ ಮೈನಸ್ ರನ್ ರೇಟ್ ನ್ನು ಪ್ಲಸ್ಗೆ ತಂದುಕೊಳ್ಳಬೇಕು. ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ವೇಳೆ ರನ್ ಗಳ ಸುರಿಮಳೆಯಾಗಿದೆ. ಹೈದರಾಬಾದ್ ತಂಡವು 287 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 262 ರನ್ ಗಳಿಸಿದೆ. ಈ ಮೂಲಕ 25 ರನ್ ಗಳಿಂದ ಸೋಲು ಕಂಡಿದೆ. ‘ಈ ವರ್ಷ ಕಪ್ ನಮ್ಮದೇ’ ಆಗಬೇಕಾದರೆ ಆರ್ ಸಿಬಿ ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಿದೆ.