Ishan Kishan | 23 ವಯಸ್ಸಿಗೆ ಟಿ 20 ಯಲ್ಲಿ ಅದ್ಭುತ ದಾಖಲೆ
ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ಇಶಾನ್ ಕಿಶನ್ ಟಿ20 ಕ್ರಿಕೆಟ್ ನಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ 17 ರನ್ ಗಳಿಸಿ ಟಿ20 ಕ್ರಿಕೆಟ್‌ನಲ್ಲಿ 3,000 ರನ್ ಗಡಿ ತಲುಪಿದರು.
23ರ ಹರೆಯದಲ್ಲಿ ಈ ದಾಖಲೆ ಮಾಡಿದ ಇಶಾನ್ ಕಿಶನ್ ಹೊಸ ದಾಖಲೆ ಬರೆದಿದ್ದಾರೆ.
ಇಶಾನ್ ಕಿಶನ್ 117 ಟಿ20 ಪಂದ್ಯಗಳಲ್ಲಿ 3022 ರನ್ ಗಳಿಸಿದ್ದಾರೆ.
ಐಪಿಎಲ್ 2022 ರ ಆರಂಭಕ್ಕೂ ಮೊದಲು ನಡೆದ ಮೆಗಾ ಹರಾಜಿನಲ್ಲಿ, ಇಶಾಂತ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ರೂ. 15.25 ಕೋಟಿಗೆ ಖರೀದಿಸಿರುವುದು ಗೊತ್ತಿರುವ ವಿಚಾರವೇ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ, ಇಶಾನ್ ಮಿಂಚಿನ 81 ರನ್ ಗಳ ಇನ್ನಿಂಗ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ishan-kishan-completes-3000-runs-t20i









