Ishan Kishan | ಟೀಂ ಇಂಡಿಯಾದ ಅನ್ ಲಕ್ಕಿ ಇಶಾನ್ ಕಿಶನ್..!
ಇಶಾನ್ ಕಿಶನ್..!! ಟೀಂ ಇಂಡಿಯಾದ ಉದಯೋನ್ಮುಖ ಪ್ರತಿಭಾವಂತ ಆಟಗಾರ. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳುವ ಚಾಣಕ್ಷಾ ಕ್ರಿಕೆಟಿಗ.
ಸ್ಟೈಲಿಶ್ ಲೆಫ್ಟ್ ಹ್ಯಾಂಡರ್ ತಾಂತ್ರಿಕವಾಗಿಯೂ ಸೂಪರ್ ಆಗಿದ್ದಾರೆ. ಆದರೆ ಅದೃಷ್ಟ ಅನ್ನುವುದೇ ಮಾತ್ರ ಇಶಾನ್ ಕಿಶನ್ ಗೆ ಕೈಕೊಡುತ್ತಲೇ ಇದೆ.
ದೇಶಿ ಕ್ರಿಕೆಟ್ ಆಗಿರಲಿ.. ಇಂಡಿಯನ್ ಪ್ರಿಮಿಯರ್ ಲೀಗ್ ಆಗಿರಲಿ.. ಇಶಾನ್ ಕಿಶನ್ ಬ್ಯಾಟ್ ಸದ್ದು ಮಾಡುತ್ತಲೇ ಇರುತ್ತದೆ. ತಮ್ಮ ಅದ್ಭುತ ಬ್ಯಾಟಿಂಗ್ ನಿಂದ ಇಶಾನ್ ಕಿಶನ್ ಕ್ರಿಕೆಟ್ ಪ್ರಿಯರ ಮೆಚ್ಚುಗೆ ಪಡೆದಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ಮಾತ್ರ ಜಾಗ ಗಟ್ಟಿಯಾಗಿಲ್ಲ.
ಹೌದು…! ಟೀಂ ಇಂಡಿಯಾಗೆ ಕಿಶನ್ ಎಂಟ್ರಿ ಕೊಡೋದಕ್ಕೂ ಮುನ್ನ ಭಾರತದ ಅಂಡರ್ 19 ತಂಡದ ನಾಯಕರಾಗಿದ್ದರು.
ಇಲ್ಲಿ ರಿಷಬ್ ಪಂತ್ ಗೂ ಕೂಡ ಕಿಶನ್ ಕ್ಯಾಪ್ಟನ್ ಆಗಿದ್ದರು. ಆರಂಭದಿಂದಲೂ ಕೀಪಿಂಗ್ ನಲ್ಲಿ ಸಾಕಷ್ಟು ಆಸಕ್ತಿ ಬೆಳೆಸಿಕೊಂಡಿದ್ದ ಇಶಾನ್, ವಿಕೆಟ್ ಕೀಪಿಂಗ್ನಲ್ಲೂ ರಿಷಬ್ಗಿಂತ ಹೆಚ್ಚು ತಾಂತ್ರಿಕವಾಗಿ ಪಕ್ಕಾ ಇದ್ದಾರೆ. ಜೊತೆಗೆ ಉತ್ತಮ ಫೀಲ್ಡರ್ ಕೂಡ ಹೌದು.
ಆದರೆ ರಿಷಬ್ ಫೀಲ್ಡಿಂಗ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಹೀಗಾಗಿ ಅಂಡರ್ 19 ಸಮಯದಲ್ಲಿ ಇಶನ್ ರಿಷಬ್ಗೆ ಕೀಪಿಂಗ್ ಗ್ಲೌಸ್ ಹಸ್ತಾಂತರ ಮಾಡಿದ್ದರು. ಇದು ಇಶಾನ್ ಕಿಶನ್ ಗೆ ಸೆಟ್ ಬ್ಯಾಕ್ ಆಯ್ತು ಅಂತಾ ಹೇಳಲಾಗುತ್ತಿದೆ.

ಯಾಕಂದರೇ ಅಂಡರ್ 19 ಕ್ರಿಕೆಟ್ ನಲ್ಲಿ ಮಿಂಚಿದ ರಿಷಬ್ ಪಂತ್ ನೇರವಾಗಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟರು. ಆದ್ರೆ ಉತ್ತಮ ಪ್ರದರ್ಶನದ ಹೊರತಾಗಿಯೂ ಇಶಾನ್ ಕಿಶನ್, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕೂಡ ಒದ್ದಾಟ ನಡೆಸಿದರು.
ಇದಕ್ಕೆ ಮುಖ್ಯ ಕಾರಣ.. ಇಶಾನ್ ಕಿಶನ್ ಆರಂಭಿಕ ಆಟಗಾರ ಆಗಿರೋದು..! ಕಳೆದ ಕೆಲವು ವರ್ಷಗಳಿಂದ ಇಶಾನ್ ಕಿಶನ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ.
ಆದರೆ ಒಂದು ರೀತಿಯಲ್ಲಿ ಬದಲಿ ಆಟಗಾರನ ಸ್ಥಾನದಲ್ಲಿ ಅನ್ನುವುದನ್ನ ಗಮನಿಸಬೇಕು. ಯಾಕಂದರೆ ಕೆ.ಎಲ್.ರಾಹುಲ್ ಅಥವಾ ರೋಹಿತ್ ಶರ್ಮಾ ತಂಡದಲ್ಲಿದರೆ ಈತನಿಗೆ ಜಾಗ ಇರೋದಿಲ್ಲ.
ಸದ್ಯ ರೋಹಿತ್ ಶರ್ಮಾ ಟೀಂ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಹೀಗಾಗಿ ಅವರು ಆರಂಭಿಕ ಸ್ಥಾನದಲ್ಲಿ ಆಡೋದು ಪಕ್ಕಾ.
ಇತ್ತ ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಆಗಿರುವ ಕೆ.ಎಲ್. ರಾಹುಲ್ ಮೂರು ಮಾದರಿ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ಉತ್ತರಾಧಿಕಾರಿ ಎಂದರೇ ಅದು ಕೆ.ಎಲ್.ರಾಹುಲ್. ಆದ್ರೆ ರಾಹುಲ್ ಕೂಡ ಓಪನರ್ ಆಗಿದ್ದಾರೆ. ಇವರಿಬ್ಬರ ಆರ್ಭಟದ ನಡುವೆ ಇಶಾನ್ ಕಿಶನ್ ಮೂಲೆ ಗುಂಪಾಗುತ್ತಿದ್ದಾರೆ.
ಒಟ್ಟಾರೆ ಇಶನ್ ಕಿಶನ್ ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡ್ತಾರೆ. ಕೀಪಿಂಗ್ ಕೂಡ ಮಾಡ್ತಾರೆ. ವಯಸ್ಸು ಕಡಿಮೆ ಇದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಅವಕಾಶ ಸಿಕ್ಕರೂ ಸಿಗಬಹುದು. ಆದರೆ ಸದ್ಯಕ್ಕಂತೂ ಇಶನ್ ಕಿಶನ್ ಟೀಮ್ ಇಂಡಿಯಾದ ಅನ್ ಲಕ್ಕಿ ಪ್ಲೇಯರ್.