ಮೊದಲ ಟೆಸ್ಟ್ ಪಂದ್ಯ ಸೋತರೂ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿರುವ ಭಾರತಕ್ಕೆ ಆಘಾತ ಎದುರಾಗಿದೆ. ಫಸ್ಟ್ ಮ್ಯಾಚ್ ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಇಶಾಂತ್ ಶರ್ಮಾ 2ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇಶಾಂತ್ ಶರ್ಮಾ ಬಲ ಪಾದದ ನೋವಿನಿಂದ ಬಳಲುತ್ತಿದ್ದಾರೆ. ವಿದರ್ಭ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ವೇಳೆ ಇಶಾಂತ್, ಬಲ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಆದ್ರೀಗ ಗಾಯ ಮತ್ತೆ ಮರುಕಳಿಸಿದ ಪರಿಣಾಮ ಇಶಾಂತ್, ನೆಟ್ ಪ್ರಾಕ್ಟೀಸ್ ವೇಳೆ ಬೌಲಿಂಗ್ ಮಾಡಲು ಪರದಾಡಿದ್ರು. ಸುಮಾರು 20 ನಿಮಿಷಗಳ ಕಾಲ ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ್ದ ಇಶಾಂತ್, ಬಳಿಕ ಟೀಮ್ ಮ್ಯಾನೇಜ್ ಮೆಂಟ್ ಗೆ ಬಲ ಪಾದದ ನೋವಿನ ಬಗ್ಗೆ ತಿಳಿಸಿದ್ರು. ನಂತರ ಇಶಾಂತ್ ರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದು ವೇಳೆ ಇಶಾಂತ್ ಕ್ರೈಸ್ಟ್ ಚರ್ಚ್ ಪಂದ್ಯದಿಂದ ಹೊರಗುಳಿದಿದ್ದೇ ಆದ್ರೆ, ಉಮೇಶ್ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!
ನವದೆಹಲಿ: ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮರೆಯಾಗುತ್ತಿದೆ ಮತ್ತು ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ಈಗ ಕೇಂದ್ರ ಸರ್ಕಾರದ ವಿರುದ್ಧ ಅಂತಿಮ ಹಂತದ...








