ಹೊಸದಿಲ್ಲಿ, ಮೇ 16 : ಭಾರತೀಯ ರೈಲ್ವೆ ಇಲಾಖೆ, ಐ.ಆರ್.ಸಿ.ಟಿ.ಸಿ ವೆಬ್ ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ತಲುಪುವ ಸ್ಥಳದ ವಿಳಾಸವನ್ನು ನಮೂದಿಸಲು ಸೂಚಿಸಿದೆ.
ಮೇ 13 ರಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಕೊರೋನಾ ಸೋಂಕಿತರನ್ನು ಅಥವಾ ಸಂಪರ್ಕಿತರನ್ನು ಪತ್ತೆ ಹಚ್ಚುವ ಸಂದರ್ಭ ಎದುರಾದರೆ ಇದು ನೆರವಾಗಲಿದೆ ಎಂದು ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ದೇಶದ ಕೆಲವು ಆಯ್ದ ಮಾರ್ಗಗಳಿಗೆ ಮೇ 12 ರಿಂದ ರೈಲು ಸಂಚಾರ ಪ್ರಾರಂಭವಾಗಿದ್ದು, ಅಂದಿನಿಂದಲೇ ಐ.ಆರ್.ಟಿ.ಸಿ ವೆಬ್ ಸೈಟ್ ನಲ್ಲಿ ಪ್ರಯಾಣಿಕರ ವಿಳಾಸವನ್ನು ನಮೂದಿಸುವ ನಿಬಂಧನೆಯನ್ನು ಸೇರಿಸಲಾಗಿದೆ.
ರೈಲ್ವೆ ವಕ್ತಾರ ಆರ್.ಡಿ.ಬಾಜಪೇಯಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಕೌಂಟರ್ ನಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಇಲ್ಲದ ಕಾರಣ ಎಲ್ಲರೂ ಐ.ಆರ್.ಸಿ.ಟಿ.ಸಿ ವೆಬ್ ಸೈಟ್ ಮೂಲಕವೇ ಟಿಕೆಟ್ ಕಾಯ್ದಿರಿಸಬೇಕು. ಹಾಗಾಗಿ ವಿಳಾಸವನ್ನು ನಮೂದಿಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದರು. ರೈಲುಗಳಲ್ಲಿ ಪ್ರಯಾಣಿಸಿದ ಸುಮಾರು 12 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ಇಲಾಖೆ ಇಂತಹ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ.
ಈಗಾಗಲೇ ಮುಂದಿನ 7 ದಿನಗಳಿಗೆ ಸುಮಾರು 2 ಲಕ್ಷ ಮಂದಿ ಒಟ್ಟು 45.30 ಕೋಟಿ ರೂ ಮೊತ್ತದ ಟಿಕೆಟ್ ಗಳನ್ನು ಕಾಯ್ದಿರಿಸಿದ್ದಾರೆ.
ಕಾರ್ಮಿಕರ ಬವಣೆ ಆಲಿಸಿದ CM ಡಿಕೆ ಶಿವಕುಮಾರ್ ಶೈಲಿಗೆ ಹೈಕೋರ್ಟ್ ಫಿದಾ: ಡಿಕೆಶಿ ಎಪಿಎಂಸಿ ಭೇಟಿ ಗಿಮಿಕ್ ಅಲ್ಲ ಇದು ಗ್ರೇಟ್ ಜಾಬ್
ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇತ್ತೀಚೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ನೀಡಿದ ಅನಿರೀಕ್ಷಿತ ಭೇಟಿ ಮತ್ತು ಅಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಈಗ...








