ಬೆಂಗಳೂರು ಗ್ರಾಮಾಂತರ: ಕ್ರಷರ್ ಮಾಲೀಕನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಹಾಗೂ ಹಣ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕೆ.ಆರ್. ಪುರಂ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರ ಆಪ್ತ ಸಹಾಯಕ ಮಂಜುನಾಥ್ ಎಂಬುವವರ ಅಳಿಯ ಲೋಕೇಶ್ ಮನೆ ಮೇಲೆಯೇ ದಾಳಿ ನಡೆಸಲಾಗಿದೆ. ಲೋಕೇಶ್ ಕೆಲವು ದಿನಗಳ ಹಿಂದೆ ಚೆಕ್ ಪೋಸ್ಟ್ ನಲ್ಲಿ 10 ಲಕ್ಷ ರೂ. ಹಣದೊಂದಿಗೆ ಸಿಕ್ಕಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳಿಗೆ ನಗದು ಹಾಗೂ ಚಿನ್ನಾಭರಣ ಸಿಕ್ಕಿವೆ.
ದಾಳಿ ಸಂದರ್ಭದಲ್ಲಿ 1.20 ಕೋಟಿ ರೂ. ನಗದು ಹಾಗೂ 800 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಐಟಿ ಇಲಾಖೆ ಡಿಡಿ ವಿಷ್ಣುಪ್ರಸಾದ್ ನೇತೃತ್ವದಲ್ಲಿ 6 ಅಧಿಕಾರಿಗಳು ತಮಿಳುನಾಡಿನ ಹೊಸೂರಿನಲ್ಲಿರುವ ಲೋಕೇಶ್ ನಿವಾಸದ ಮೇಲೆ ದಾಳಿ ನಡೆಸಿದಾಗ ದಾಖಲೆ ಇಲ್ಲದೆ ಸಂಗ್ರಹಿಸಿದ್ದ ಚಿನ್ನಾಭರಣ, ನಗದು ಪತ್ತೆಯಾಗಿದೆ.